ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್‌ಗೆ ಕೈಕೊಟ್ಟ ಸುರೇಶ್ ರಾಜ್‌ರಿಂದ ಹೊಸ ಚಿತ್ರ (Sureshraj | Sudeep | Arya | Kanwarlal)
ಸುದ್ದಿ/ಗಾಸಿಪ್
Bookmark and Share Feedback Print
 
ಮೊನ್ನೆಯಷ್ಟೇ ಸುದೀಪ್ ತಂಡದಿಂದ ಹೊರಬಿದ್ದಿರುವ ಸುರೇಶ್ ರಾಜ್ ಮತ್ತೆ ಸ್ವತಂತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹಾಗಂತ ಸುರೇಶ್‌ಗೆ ಇದು ಮೊದಲ ಚಿತ್ರವೇನಲ್ಲ. ಎಂಟು ವರ್ಷದ ಹಿಂದೆ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆಗಿನ ಬ್ಯುಸಿ ನಟಿ ಪ್ರೇಮಾ ಹಾಗೂ ಶಿವಧ್ವಜ್ ತಾರಾಗಣದ ಆಚಿತ್ರ ಮಾತ್ರ ನೆಲಕಚ್ಚಿತ್ತು. ಅದಾದ ನಂತರ ಸಾಯಿಪ್ರಕಾಶ್ ಜತೆ ಒಂದಷ್ಟು ದಿನ ಇದ್ದು ಮತ್ತೆ ಸುದೀಪ್ ಬಳಗ ಸೇರಿಕೊಂಡರು.

ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಸುದೀಪ್- ಸುರೇಶ್ ಸಂಬಂಧ ಕನ್ವರ್‌ಲಾಲ್ ಚಿತ್ರ ಶುರುವಾದ ನಂತರ ಹಳಸಿದೆ. ಅಲ್ಲಿಂದ ಆಚೆ ಬಂದ ನಂತರ ಸುರೇಶ್ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ ಎಂಬ ಸುದ್ದಿಯೂ ಇದೆ. ಇವೆಲ್ಲದರ ಫಲಶ್ರುತಿಯಾಗಿ ಹೊಸ ಚಿತ್ರ ಸೆಟ್ಟೇರಲಿದೆ. ಸುದೀಪ್ ಹತ್ತಿರದ ಸಂಬಂಧಿ ಆರ್ಯ ನಾಯಕನಂತೆ ಎಂಬ ಸುದ್ದಿಯೂ ಈಗ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಉಳಿದ ವಿವರ ಸದ್ಯದಲ್ಲೇ ಹೊರಬೀಳಲಿದೆ. ಅಂದ ಹಾಗೆ ಆರ್ಯ ಮುಸ್ಸಂಜೆ ಮಾತು ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಈ ಸಂಜೆ ಚಿತ್ರದಲ್ಲಿ ಸಂಜನಾ ಜತೆ ನಟಿಸಿದ್ದು, ಆ ಚಿತ್ರ ಇನ್ನೂ ಹೊರಬರಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುರೇಶ್ ರಾಜ್, ಸುದೀಪ್, ಆರ್ಯ, ಕನ್ವರ್ ಲಾಲ್