ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೋಳಿ ಚಿತ್ರದ 10 ಲಕ್ಷ ಕ್ಯಾಸೆಟ್ ಭರ್ಜರಿ ಮಾರಾಟ! (Holi | Shankarlinga Sugnalli | Ragini)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹೋಳಿ ಚಿತ್ರದ 10 ಲಕ್ಷ ಕ್ಯಾಸೆಟ್ ಭರ್ಜರಿಯಾಗಿ ಮಾರಾಟವಾಗಿದೆಯಂತೆ. ಈ ಸುದ್ದಿ ಕೇಳಿದರೆ ಖಂಡಿತಾ ತಮಾಷೆ ಎನಿಸಬಹುದು. ಆಧರೆ ಇದು ಅಕ್ಷರಶಃ ಸತ್ಯ ಎನ್ನುತ್ತಾರೆ ಹೋಳಿ ಚಿತ್ರದ ನಿರ್ದೇಶಕ ಶಂಕರ ಲಿಂಗ ಸುಗ್ನಳ್ಳಿ.

ಈ ಸಿನಿಮಾದ ಕ್ಯಾಸೆಟ್ ಹೀಗೆ ಮಾರಾಟ ಕಾಣೋದಕ್ಕೆ ಅವರ ಭಾರೀ ಪ್ರಯತ್ನವೂ ಅಡಗಿದೆ. ಉತ್ತರ ಕರ್ನಾಟಕದ ಮನೆಮನೆಗೂ ತಲುಪಿಸುವ ಜವಾಬ್ದಾರಿ ಹೊತ್ತವರು ಇದೇ ಸುಗ್ನಳ್ಳಿ. ಮೂವತ್ತು ರೂಪಾಯಿಯ ಕ್ಯಾಸೆಟ್ ಅನ್ನು ನಿರ್ದೇಶಕ ಕಮ್ ನಿರ್ಮಾಪಕ ಸುಗ್ನಳ್ಳಿಯವರು 12 ರೂ.ಗೆ ಮಾರಿದ್ದಾರೆ. ಇದರಿಂದ ವಿಪರೀತ ಲಾಭವೇನೂ ಆಗದಿದ್ದರೂ, ಖರ್ಚು ಕಳೆದರೆ ಕೈಗೆ ಒಂದು ರೂಪಾಯಿ ಉಳಿಯುತ್ತದಷ್ಟೆ. ಆದರೆ ಅದ್ಕಕಿಂತಲೂ ಅವರಿಗೆ ಖುಷಿಯಿರುವುದು, ತನ್ನ ಈ ಸದಭಿರುಚಿಯ ಚಿತ್ರದ ಹಾಡುಗಳನ್ನು ಉತ್ತರ ಕರ್ನಾಟಕದ ಮನೆಮನೆಗೂ ತಲುಪಿತಲ್ಲ ಎಂಬ ವಿಚಾರಕ್ಕೆ.

ಹೋಳಿ ಚಿತ್ರದಲ್ಲಿ ವೀರಮದಕರಿ ಖ್ಯಾತಿಯ ರಾಗಿಣಿ ನಾಯಕಿ. ಇದು ಈಕೆಯೆ ಮೊದಲ ಚಿತ್ರ. ಆದರೆ ಈಗಾಗಲೇ ಈಕೆಯ ಚಿತ್ರಗಳು ಬಿಡುಗಡೆ ಕಂಡಿವೆ. ಇಲ್ಲಿ ನಾಯಕಿಯ ಸೋದರಿ ದೇವದಾಸಿ ಪದ್ಧತಿಗೆ ಬಲವಂತವಾಗಿ ತಲೆಬಾಗಿರುತ್ತಾಳೆ. ಅದರ ನಿರ್ಮೂಲನೆಗಾಗಿ ಹೋರಾಡುವ ಪಾತ್ರ. ಕಥೆಯಲ್ಲಿ ಜೀವಂತಿಕೆಯಿದೆ. ಆ ಕಾರಣಕ್ಕೆ ಒಪ್ಪಿದೆ ಎನ್ನುತ್ತಾರೆ ರಾಗಿಣಿ.

ವೆಂಕಟೇಶ್ ಎಂಬ ಹೊಸ ಹುಡುಗ ನಾಯಕ. ಪೌರಾಣಿಕ ಹಾಗೂ ಆಧುನಿಕ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ. ಹೆಚ್ಚು ರಕ್ತಪಾತವಿಲ್ಲ. ಚಿತ್ರದಲ್ಲಿ ಮನರಂಜನೆಗೆ ಮೋಸವಿಲ್ಲ ಎನ್ನುವುದು ವೆಂಕಟೇಶ್ ಹೇಳಿಕೆ. ಕ್ಯಾಸೆಟ್‌ನಂತೆ ಚಿತ್ರಕ್ಕೂ ಜನ ಜೈ ಎಂದರೆ ಸುಗ್ನಳ್ಳಿ ಪ್ರಯತ್ನಕ್ಕೂ ಮೋಸವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೋಳಿ, ಶಂಕರಲಿಂಗ ಸುಗ್ನಳ್ಳಿ, ರಾಗಿಣಿ