ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಂಭದ ಹುಡುಗಿ ಪ್ರಿಯಾ ಹಾಸನ್‌ರ ಬಿಂದಾಸ್ ನಡೆ! (Jambhada Hudugi | Priya Hasan | Bindas Hudugi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟಿ ಪ್ರಿಯಾ ಹಾಸನ್ ಗೊತ್ತಿರಬೇಕಲ್ಲಾ, ಅದೇ ಜಂಭದ ಹುಡುಗಿ! ಎಸ್. ಅದೇ ಜಂಭದ ಹುಡುಗಿ ಈಗ ಬಿಂದಾಸ್ ಹುಡುಗಿಯಾಗಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ ಸೇರಿದಂತೆ ನಿರ್ದೇಶಕಿಯಾಗಿಯೂ ಈ ಹುಡುಗಿ ಮುನ್ನಡೆದಿದ್ದಾರೆ. ಇದೀಗ ಅವರ ನಿರ್ದೇಶನ ಹಾಗೂ ನಟನೆಯ ಬಿಂದಾಸ್ ಹುಡುಗಿ ತೆರೆಯ ಮೇಲೆ ಬರಲು ಸಿದ್ಧವಾಗಿದೆ.

ಹೌದು. ಪ್ರಿಯಾ ಹಾಸನ್ ಒಬ್ಬರೇ ಎಲ್ಲವನ್ನು ನಿಭಾಯಿಸಿದ್ದಾರೆ, ಕಥೆ, ಚಿತ್ರಕಥೆ, ಸಂಭಾಷಣೆ, ನಟನೆ, ನಿರ್ದೇಶನ ಹೀಗೇ ಎಲ್ಲವನ್ನೂ ಬಿಂದಾಸ್ ಹುಡುಗಿ ಚಿತ್ರದಲ್ಲಿ ಬಿಂದಾಸ್ ಆಗಿಯೇ ನಿರ್ವಹಿಸಿದ್ದಾರೆ. ಇಡೀ ತಂಡವನ್ನು ಜೋಪಾನ ಮಾಡುವುದರ ಜತೆ, ಚಿತ್ರದ ಕುರಿತು ಕಾಳಜಿ ವಹಿಸುವುದು ಸುಲಭದ ಮಾತೇನಲ್ಲ. ಅಷ್ಟೇ ಅಲ್ಲ, ಓಡಾಡಿಕೊಂಡು ಹಾಯಾಗಿ ಇರೋ ವಯಸ್ಸಿನ್ಲಲೇ ಪ್ರೌಢ ಹೆಣ್ಣುಮಗಳಂತೆ ಎಲ್ಲ ಜವಾಬ್ದಾರಿಯನ್ನೂ ಮೂಟೆಗಟ್ಟಲೆ ಸುರುವಿಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸುವುದಿದೆಯಲ್ಲಾ, ಅದು ಚಿತ್ರರಂಗದಲ್ಲಿ ಸಾಮಾನ್ಯದ ಸಂಗತಿಯೂ ಅಲ್ಲ. ಆದರೆ ಅವೆಲ್ಲವನ್ನೂ ಈ ಪ್ರಿಯಾ ಹಾಸನ್ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ ಚಿತ್ರ ನಿರ್ಮಿಸಿ ಜನರ ಮುಂದಿಟ್ಟರೆ, ಅವರು ಸ್ವೀಕರಿಸುತ್ತಾರೋ, ಬಿಡುತ್ತಾರೋ ಎನ್ನುವುದು ಮುಂದಿನ ಆತಂಕ. ಆದರೂ, ಶ್ರಮಪಟ್ಟು ಚಿತ್ರ ನಿರ್ಮಿಸಿದ ಪ್ರಿಯಾ ಹಾಸನ್‌ಗೆ ಬದುಕಿನಲ್ಲಿ ಮುನ್ನುಗ್ಗುವ ಛಲ. ಸಾಧಿಸುವ ತವಕ. ಏನೇ ಆಗಲಿ, ಇನ್ನು ಕೆಲವೇ ದಿನಗಳಲ್ಲಿ ಇವರ ನಟನೆ, ನಿರ್ದೇಶನದ ಬಿಂದಾಸ್ ಹುಡುಗಿ ತೆರೆಯ ಮೇಲೆ ಬರಲಿದೆ. ಯುವ ಹೆಣ್ಣುಮಗಳೊಬ್ಬಳು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಸಂತೋಷ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಂಭದ ಹುಡುಗಿ, ಪ್ರಿಯಾ ಹಾಸನ್, ಬಿಂದಾಸ್ ಹುಡುಗಿ