ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೆಚ್ಚಿನ ಸಿನಿಮಾ ಕಲಿಕೆಗೆ ನ್ಯೂಯಾರ್ಕಿಗೆ ಹಾರಿದ ಪ್ರಜ್ವಲ್! (Prajwal Devraj | Devaraj | Geleya)
ಸುದ್ದಿ/ಗಾಸಿಪ್
Bookmark and Share Feedback Print
 
Prajwal Devaraj
MOKSHA
ಹಿರಿಯ ಪ್ರಬುದ್ಧ ನಟ ದೇವರಾಜ್ ಮಗ ಎಂಬ ಹೆಗ್ಗಳಿಕೆಯೊಂದಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್‌ಗೆ ಅದ್ಯಾಕೋ ಅಂಥಾ ಯಶಸ್ಸೇನೂ ಸಿಕ್ಕಿಲ್ಲ. ಇದರಿಂದಾಗಿಯೋ ಏನೋ, ಪ್ರಜ್ವಲ್ ಯಾಕೋ ಆತ್ಮವಿಮರ್ಶೆಗೆ ಹೊರಟಿದ್ದಾರೆ. ಜೊತೆಗೆ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ತರಬೇತಿ ನಡೆಸಲು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

ಸಿಕ್ಸರ್, ಮೆರವಣಿಗೆ, ಗೆಳೆಯ, ಗಂಗೆಬಾರೆ ತುಂಗೆಬಾರೆ, ಜೀವಾ, ಕೆಂಚ ಮುಂತಾದ ಚಿತ್ರಗಳಲ್ಲಿ ನಟಿಸಿದ ಪ್ರಜ್ವಲ್ ಪ್ರತಿಭೆ ಬಗ್ಗೆ ಎರಡು ಮಾತಿಲ್ಲದಿದ್ದರೂ, ಯಶಸ್ಸು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಹುಡುಕಿಕೊಂಡು ಬಂದಿಲ್ಲ. ಇದೀಗ ಚಲನಚಿತ್ರದ ಬಗ್ಗೆ ಆಳವಾಗಿ ಅಧ್ಯಯನ ನಡೆಸಲು ನ್ಯೂಯಾರ್ಕ್‌ನ ಫಿಲಂ ಇನ್ಸ್‌ಟಿಟ್ಯೂಟ್‌ಗೆ ತೆರಳಲಿದ್ದಾರೆ.

ಇದಕ್ಕೆಲ್ಲಾ ಕಾರಣ ಅವರ ತಂದೆ ಡೈನಾಮಿಕ್ ಹೀರೋ ದೇವರಾಜ್. ತಂದೆಯ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸಲಿರುವ ಪ್ರಜ್ವಲ್ ಇದಕ್ಕಾಗಿ ಅಭಿನಯದಲ್ಲಿ ಇನ್ನಷ್ಟು ಪಳಗಲು ಈ ತಯಾರಿಗೆ ಮುಂದಾಗಿದ್ದಾರೆ. ದೇವರಾಜ್ ತಮ್ಮದೇ ಬ್ಯಾನರ್ ಅಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪ್ರಜ್ವಲ್ ಹೀರೊ. ಅಪ್ಪನ ಎದುರು ಸೈ ಎನಿಸಿಕೊಳ್ಳಲು ಇವರು ನಡೆಸುತ್ತಿರುವ ತರಾತುರಿಯ ಪ್ರಯತ್ನ ಇದು. ಹಾಗಾಗಿಯೇ ಶೀಘ್ರದಲ್ಲೇ ಪ್ರಜ್ವಲ್ ನ್ಯೂಯಾರ್ಕ್ ವಿಮಾನ ಏರಲಿದ್ದಾರೆ.

ಜೊತೆಗೆ ಈ ಚಿತ್ರದ ನಿರ್ದೇಶನವನ್ನೂ ಪ್ರಜ್ವಲ್ ಅವರೇ ನಿರ್ವಹಿಸಲಿದ್ದಾರೆಂಬ ಸುದ್ದಿಯೂ ಈಗ ಗಾಂಧಿನಗರದ್ಲಲಿ ಗಿರಕಿ ಹೊಡೆಯುತ್ತಿದೆ. ಇವೆಲ್ಲ ಸುದ್ದಿಯೂ ಅಧಿಕೃತವಾಗಿ ಹೊರಬರಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಒಟ್ಟಾರೆ ನ್ಯೂಯಾರ್ಕ್‌ನಲ್ಲಿ ಮತ್ತಷ್ಟು ಕಲಿತು ಪ್ರಜ್ವಲ್ ಇಲ್ಲಿ ಪ್ರಜ್ವಲಿಸಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಜ್ವಲ್ ದೇವರಾಜ್, ಗೆಳೆಯ, ದೇವರಾಜ್