ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಡಿಕೇರಿಯಲ್ಲಿ ಪುನೀತ್- ಸೂರಿಯ ಜಾಕಿ ಚಿತ್ರತಂಡ (Jackie | Madikeri | Pruthwi | Puneet Raj Kumar | Soori)
ಸುದ್ದಿ/ಗಾಸಿಪ್
Bookmark and Share Feedback Print
 
Puneet Raj Kumar, Bhavana
MOKSHA
ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಜಾಕಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುನೀತ್ ಹಾಗೂ ಮಲಯಾಳಂ ನಟಿ ಭಾವನಾ ತಾರಾಮಘವಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ದುನಿಯಾ ಖ್ಯಾತಿಯ ಸೂರಿ. ಈ ಹಿಂದೆ ದುನಿಯಾ ಚಿತ್ರ ನಿರ್ದೇಶಿಸಿ ಕೀರ್ತಿಯ ಉತ್ತುಂಗಕ್ಕೇರಿದ ಸೂರಿ ಜಂಗ್ಲಿಯ ಮೂಲಕ ಮನೆಮಾತಾಗಿದ್ದರು. ಹಾಗಾಗಿ ಅವರ ಮುಂದಿನ ಚಿತ್ರ ಜಾಕಿಯ ಬಗ್ಗೆ ನಿರೀಕ್ಷೆಗಳು ಗಗನದೆತ್ತರ ಇವೆ.

ಸದ್ಯಕ್ಕೆ ಜಾಕಿ ಚಿತ್ರತಂಡ ಮಡಿಕೇರಿಯತ್ತ ಪಯಣ ಬೆಳೆಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ಮಹೂರ್ತ ಆಚರಿಸಿಕೊಂಡಿರುವ ಜಾಕಿ ಚಿತ್ರತಂಡ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಮಡಿಕೇರಿಯಲ್ಲಿ ಮುಗಿಸಲಿದೆ. ಮಡಿಕೇರಿಯ ಸುಂದರ ತಾಣಗಳನ್ನು ಈಗಾಗಲೇ ಗುರುಸಿಕೊಂಡಿರುವ ಸೂರಿ ಚಿತ್ರೀಕರಣದ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ.

ಜಾಕಿ ಮಹೂರ್ತ ಆಚರಿಸುವ ಮೊದಲೇ ಚಿತ್ರರಂಗ ಹಾಗೂ ಕನ್ನಡ ಪ್ರೇಕ್ಷಕ ವರ್ಗದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಒಂದೆಡೆ ಪುನೀತ್ ಚಿತ್ರ ರಾಮ್ ಮೆಚ್ಚುಗೆ ಗಳಿಸುತ್ತಿದ್ದರೆ, ಜಾಕೋಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಚಿತ್ರವೂ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಹಾಗಾಗಿ ಪುನೀತ್ ಸದ್ಯಕ್ಕೆ ಹಾಟ್ ಕೇಕ್. ಹೀಗಾಗಿ ಚಿತ್ರೀಕರಣ ಆರಂಭಿಸಿರುವ ಜಾಕಿ ಚಿತ್ರದ ಬಗ್ಗೆಯೂ ನಿರೀಕ್ಷೆ ಸಾಮಾನ್ಯವೇ.

ಇದೇ ಮೊದಲ ಬಾರಿಗೆ ನಾನು ಪುನೀತ್ ರಾಜ್ ಕುಮಾರ್ ಅವರಂಥ ದೊಡ್ಡ ನಟನನ್ನು ಹಾಕಿಕೊಂಡು ಚಿತ್ರ ನಿರ್ದೇಶಿಸುತ್ತಿದ್ದೇನೆ. ನನಗೆ ಗೊತ್ತು, ಜನರ ನಿರೀಕ್ಷೆಗಳು ಗಗನದೆತ್ತರ ಇವೆಯೆಂದು. ಪುನೀತ್ ಅವರ ನಟನೆಯ ಚಿತ್ರವನ್ನು ನಿರ್ದೇಶಿಸುತ್ತೇನೆಂಬುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎನ್ನುತ್ತಾರೆ ಸೂರಿ. ಆದರೆ ಎಲ್ಲೂ ಚಿತ್ರದ ಬಗ್ಗೆ ಈವರೆಗೆ ಪುನೀತ್ ಪಾತ್ರದ ಬಗ್ಗೆ ತುಟಿಪಿಟಿಕ್ಕೆನ್ನದ ಸೂರಿ ಈಗ ಇದೇ ಮೊದಲ ಬಾರಿಗೆ ಕೊಂಚ ಬಾಯ್ಬಿಟ್ಟಿದ್ದಾರೆ. ಜೊತೆಗೆ ಮಿಲನ ಚಿತ್ರದಂತೆ ಈ ಚಿತ್ರದಲ್ಲಿ ಪುನೀತ್‌‌ಗೆ ರೇಡಿಯೋ ಜಾಕಿಯ ಪಾತ್ರವಲ್ಲ ಎಂದೂ ಮುದ್ದಾಂ ಹೇಳಿಬಿಟ್ಟಿದ್ದಾರೆ. ಚಿತ್ರದಲ್ಲಿ ಪುನೀತ್ ಒಂದು ಸಾಮಾನ್ಯ ಕುಟುಂಬದ ಯುವಕನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ಒಂದು ತಮಾಷೆಯ ಕಥಾಹಂದರವಿರುವ ಪಕ್ಕಾ ಕಮರ್ಶಿಯಲ್ ಚಿತ್ರ ಎಂದೂ ಸೂರಿ ಹೇಳಿದ್ದಾರೆ.

ಪುನೀತ್ ಅವರ ಚಿತ್ರಗಳಿಂದ ಅವರ ಅಭಿಮಾನಿಗಳ ಅಪೇಕ್ಷೆಯನ್ನು ಖಂಡಿತಾ ಈ ಚಿತ್ರದಲ್ಲಿ ಪೂರೈಸುತ್ತೇನೆ. ಜೊತೆಗೆ ನನ್ನ ಚಿತ್ರಗಳಿಂದ ಪ್ರೇಕ್ಷಕರು ಏನನ್ನು ಬಯಸುತ್ತಾರೋ, ಆ ಮಟ್ಟಕ್ಕೆ ತಲುಪುದೂ ನನ್ನ ಜವಾಬ್ದಾರಿ ಎಂದು ಸೂರಿ ಹೇಳಿದ್ದಾರೆ. ಒಟ್ಟಾರೆ ಜಾಕಿ ಪುನೀತ್ ಹಾಗೂ ಸೂರಿಯಿಂದಾಗಿ ಸಾಕಷ್ಟು ಕುತೂಹಲ ಸೃಷ್ಟಿಸಿರುವುದಂತೂ ನಿಜ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಡಿಕೇರಿ, ಪುನೀತ್, ಸೂರಿ, ಭಾವನಾ, ಪೃಥ್ವಿ