ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇಂದ್ರಜಿತ್ 'ತುಂಟ ತುಂಟಿ'ಗೆ 'ಮೊನಾಲಿಸಾ' ಜೋಡಿ ಧ್ಯಾನ್-ಸದಾ (Thunta Tunti | Dhyan | Sada | Mylaari | Maduve Mane)
ಸುದ್ದಿ/ಗಾಸಿಪ್
Bookmark and Share Feedback Print
 
sada
IFM
ಗೋಲ್ಡನ್ ಸ್ಟಾರ್ ಗಣೇಶ್ ಇಂದ್ರಜಿತ್ ಲಂಕೇಶರ ಮುಂಬರುವ ಚಿತ್ರ ತುಂಟ ತುಂಟಿಯಲ್ಲಿ ನಟಿಸುತ್ತಿಲ್ಲ. ಹೌದು. ಗಣೇಶ್ ತುಂಟ ತುಂಟಿ ಚಿತ್ರ ಪಾತ್ರಕ್ಕೆ 'ನೋ' ಎಂದಿದ್ದಾರೆ. ಗಣೇಶ್ ಜಾಗಕ್ಕೆ ಮುದ್ದು ಮುಖದ ಮೊನಾಲಿಸಾದ ಚೆಲುವ ಧ್ಯಾನ್ (ಸಮೀರ್ ದತ್ತಾನಿ) ಬಂದಿದ್ದಾರೆ. ಧ್ಯಾನ್ ಜೊತೆಗೆ ಅದೇ ಮೊನಾಲಿಸಾದ ಸದಾ ಕೂಡ ಬಂದಿದ್ದಾರೆ. ಆ ಮೂಲಕ ಮೊನಾಲಿಸಾದ ಜೋಡಿ ಮತ್ತೆ ಜೋಡಿಯಾಗಿದ್ದಾರೆ.

ಮದುವೆ ಮನೆ ಚಿತ್ರದ ಬಗ್ಗೆ ಗಂಭೀರವಾಗಿ ಯೋಚಿಸಿರುವ ಗಣೇಶ್, ಇಂದ್ರಜಿತ್ ಲಂಕೇಶ್ ನೀಡಿದ ಆಹ್ವಾನವನ್ನು ತಿರಸ್ಕರಿಸಿ, ಮದುವೆ ಮನೆಯಲ್ಲಿ ಬ್ಯುಸಿಯಾಗಲು ನಿರ್ಧರಿಸಿದ್ದಾರೆ. ಹಾಗಾಗಿ ಇಂದ್ರಜಿತ್ ತಮ್ಮ ಹಳೆಯ ಜೋಡಿಗಳನ್ನೇ ತರಲು ನಿರ್ಧರಿಸಿ ಧ್ಯಾನ್ ಹಾಗೂ ಸದಾರನ್ನು ಮತ್ತೆ ಕರೆದಿದ್ದಾರೆ. ಅವರೂ ಕೂಡಾ ಒಕೆ ಅಂದಿದ್ದಾರೆ ಎನ್ನಲಾಗಿದೆ.
Dhyan
IFM


ಮೂಲಗಳ ಪ್ರಕಾರ, ತುಂಟ ತುಂಟಿ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯಲಿದೆ. ಸದಾ ಈಗಾಗಲೇ ಶಿವರಾಜ್ ಕುಮಾರ್ ಜೊತೆ ಮೈಲಾರಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ಬೆನ್ನಲ್ಲೇ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ವಿಚಿತ್ರವೆಂದರೆ ಈ ಹಿಂದೆ ತುಂಟ ತುಂಟಿ ಚಿತ್ರದಲ್ಲಿ ಲೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬಿಬ್ಬರು ಬಾಲಿವುಡ್ ನಟಿಯರು ನಟಿಸುತ್ತಿದ್ದೇವೆ. ಗಣೇಶ್ ಹೀರೋ ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದರು. ಆದರೆ ಆ ಸುದ್ದಿ ಸುಳ್ಳಾಗಿದ್ದು, ಅಂತಿಮವಾಗಿ ಸದಾ ಹಾಗೂ ಧ್ಯಾನ್ ಜೋಡಿ ಪಕ್ಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧ್ಯಾನ್, ಸದಾ, ತುಂಟ ತುಂಟಿ, ಮೈಲಾರಿ, ಸಮೀರ್ ದತ್ತಾನಿ, ಮೊನಾಲಿಸಾ