ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿ ಮಾಡಿದ್ದ 'ಮುಂಗಾರು ಮಳೆ'ಯ ಬೆಡಗಿ ಪೂಜಾ ಗಾಂಧಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈಕೆಗೆ ಕನ್ನಡ ನಾಡಿನ ಸೊಸೆಯಾಗುವ ಬಯಕೆಯಂತೆ.
ಹೌದು. ಅಲ್ಪ ಕಾಲದಲ್ಲಿ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ಪೂಜಾಗೆ ಕನ್ನಡ ನೆಲದ ಗಂಧ ಇಷ್ಟವಾಗಿದೆ. ಹಾಗಾಗಿ ಪರ್ಮನೆಂಟಾಗಿ ಕನ್ನಡ ನಾಡಿನಲ್ಲೇ ಸೆಟ್ಲಾಗಿ ಬಿಡುವ ಆಸೆಯಾಗಿದೆಯಂತೆ.
ಹಾಗಂತ ಅವರೇ ಖುದ್ದಾಗಿ ಹೇಳಿಕೆ ನೀಡಿದ್ದಾರೆ. ಇದುವರೆಗೆ ಕನ್ನಡ ಚಿತ್ರಗಳಿಂದ ಕನ್ನಡದ ಮಗಳಾಗಿ ಬಿಟ್ಟಿದ್ದೇನೆ. ಈಗ ಕನ್ನಡ ನಾಡಿನ ಸೊಸೆಯಾಗುವ ಆಸೆ ನನಗಿದೆ. ಕನ್ನಡದ ಕುವರನನ್ನೇ ಮದುವೆಯಾಗುವ ಹಂಬಲ ನನ್ನದು ಎಂದು ಹೇಳಿದ್ದಾರೆ ಪೂಜಾ.
ಕನ್ನಡ ನಾಡಿನ ಬಗ್ಗೆ ಮಾತ್ರವಲ್ಲ ಕನ್ನಡಿಗರ ಬಗ್ಗೆಯೂ ಮೆಚ್ಚುಗೆಯಿಂದ ಮಾತನಾಡಿದ್ದಾರೆ ಪೂಜಾ. ಇನ್ನೆರಡು ವರ್ಷಗಳಲ್ಲಿ ಮದುವೆಯಾಗುತ್ತೇನೆ ಎಂಬ ಸುಳಿವನ್ನೂ ನೀಡಿದ್ದಾರೆ.
ಹಾಗಾದ್ರೆ ಕನ್ನಡದ ಗಂಡು ಈಗಾಗಲೇ ಸಿಕ್ಕಿರೋ ಹಾಗಿದೆ ಎಂದರೆ, 'ಇಲ್ಲಪ್ಪ, ಹುಡುಕ್ತಾ ಇದ್ದೇನೆ' ಎಂದಿದ್ದಾರೆ. ಹಾಗಾಗಿ ಈಗ ಪೂಜಾರನ್ನು ಪ್ರೀತಿಸುವ ಕನ್ನಡಿಗ ಯುವಕರು ಯಾವುದೇ ಮುಜುಗರವಿಲ್ಲದೆ ಪ್ರಪೋಸ್ ಮಾಡಬಹುದು!