ರಿಲಯನ್ಸ್ ಬಿಗ್ ಪಿಕ್ಚರ್ಸ್ ಮೊದಲ ಬಾರಿಗೆ ಕನ್ನಡದಲ್ಲಿ ನಿರ್ಮಿಸುತ್ತಿರುವ ಇಜ್ಜೋಡು ಚಿತ್ರ ಇದೀಗ ತೆರೆಗೆ ಸಿದ್ಧವಾಗಿದೆ. ಈಗಾಗಲೇ ದೇಶದ ನಾಲ್ಕು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿರುವ ಈ ಚಿತ್ರ ಇದೇ ತಿಂಗಳ 30ರಂದು ತೆರೆ ಕಾಣಲಿದೆ.
ಚಿತ್ರವನ್ನು ರಾಷ್ಟ್ತ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎಂ.ಎಸ್. ಸತ್ಯು ನಿರ್ದೇಶಿಸುತ್ತಿದ್ದಾರೆ. ಹನ್ನೆರಡು ವರ್ಷಗಳ ಬಳಿಕ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ನಾಯಕಿಯಾಗಿ ರಾಷ್ಟ್ತ್ರಪ್ರಶಸ್ತಿ ವಿಜೇತ ನಟಿ ಮೀರಾ ಜಾಸ್ಮಿನ್ ಚೆನ್ನಿಯಾಗಿ ನಟಿಸಿದ್ದಾರೆ. ನಾಯಕನಾಗಿ ಅನಿರುದ್ಧ್ ಜಟ್ಕರ್ ಅಭಿನಯಿಸಿದ್ದಾರೆ.
ಕರ್ನಾಟಕದ ಕುಗ್ರಾಮವೊಂದರಲ್ಲಿ ಛಾಯಾಚಿತ್ರ ಪತ್ರಕರ್ತ ಆನಂದ್ ನಾಯಕಿಯನ್ನು ಭೇಟಿಯಾಗುತ್ತಾನೆ. ದೇವದಾಸಿಯಾಗಿದ್ದ ಚೆನ್ನಿಯ ಬಗ್ಗೆ ಆಕರ್ಷಿತನಾಗುವ ಆನಂದ್, ಆಕೆಗೆ ಅಂಟಿಕೊಂಡಿರುವ ದೇವದಾಸಿ ಪದ್ಧತಿಯನ್ನು ವಿರೋಧಿಸಿ ಗ್ರಾಮದಲ್ಲಿ ಬದಲಾವಣೆ ಗಾಳಿ ಬೀಸಲು ಕಾರಣವಾಗುವುದೇ ಚಿತ್ರದ ಕಥಾಹಂದರ.