ರಾಮು ನಿರ್ಮಿಸುತ್ತಿರುವ ತುಷಾರ್ ರಂಗನಾಥ್ ನಿರ್ದೇಶನದ ಕಂಠೀರವ ಚಿತ್ರದ ಚಿತ್ರೀಕರಣ ಇದೀಗ ಮೈಸೂರಿನಲ್ಲಿ ನಡೆಯುತ್ತಿದೆ.
ಮೈಸೂರಿನ ಚಾಮುಂಡಿ ವಿಹಾರ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿದ್ದ ಅದ್ದೂರಿ ಸೆಟ್ಟಿನಲ್ಲಿ 30 ಜನ ಫೈಟರ್‌ಗಳೊಂದಿಗೆ ವಿಜಯ್ ಏಕಾಂಗಿಯಾಗಿ ಡ್ಯೂಪ್ ಇಲ್ಲದೆ ಹೊಡೆದಾಡುವ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಎಂಟು ದಿನಗಳ ಕಾಲ ನಡೆದ ಚಿತ್ರೀಕರಣವನ್ನು ದಾಸರಿ ಸೀನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು.
ನಾಯಕಿಯಾಗಿ ಶುಭಾ ಪೂಂಜಾ ಮತ್ತು ರಿಷಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಶುಭಾ ಪೂಂಜಾ ಇಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಇದು ಅವರ ಕನಸಿನ ಪಾತ್ರವಂತೆ. 'ತುಂಬಾ ಒಳ್ಳೆಯ ಪಾತ್ರ. ನಾನು ನಿಜಕ್ಕೂ ಲಕ್ಕಿ. ರಾಮು ಬ್ಯಾನರ್‌ನಲ್ಲಿ ನಟಿಸಬೇಕೆಂಬುದು ನನ್ನ ಕನಸಾಗಿತ್ತು ಎನ್ನುತ್ತಾರೆ ಶುಭಾ.