ಪ್ರೀತಿ ಇಲ್ಲದ ಮೇಲೆ ಧಾರಾವಾಹಿ ಮೂಲಕ ಯಶಸ್ವಿಯಾಗಿ ಪ್ರಸಿದ್ಧಿ ಪಡೆದ ಕಿರುತೆರೆ ನಿರ್ದೇಶಕ ವಿನು ಬಳಂಜ ಈ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಹೌದು. ವಿನು ಬಳಂಜ ಇದೀಗ ಹೊಸದೊಂದು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಪ್ರೀತಿ ಇಲ್ಲದ ಮೇಲೆ ಧಾರಾವಾಹಿ ಬಳಿಕ ಸಾಕಷ್ಟು ಜನಪ್ರಿಯಗೊಂಡ ವಿನು ಬಳಂಜ ಬಳಿಕ ಜೋಗುಳ ಧಾರಾವಾಹಿಯನ್ನು ನಿರ್ದೇಶಿಸಿದರು. ಇದೀಗ ಮತ್ತೊಂದು ಹೊಸ ಧಾರಾವಾಹಿಯ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಆದರೆ ದಾರವಾಹಿಯ ಜೊತೆಜೊತೆಗೇ ಇದೀಗ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಚಿತ್ರಕ್ಕಿನ್ನು ಹೆಸರಿಟ್ಟಿಲ್ಲವಂತೆ. ನಾಯಕ, ನಾಯಕಿ ಸೇರಿದಂತೆ ಎಲ್ಲಾ ತಂತ್ರಜ್ಞರ ಆಯ್ಕೆಯೂ ಇನ್ನು ಆಗಬೇಕಷ್ಟೆ. ಆದರೆ ಸಿನಿಮಾ ಮಾಡೋದು ಮಾತ್ರ ಖರೇ ಎಂದಿದ್ದಾರೆ. ದಾರಾವಾಹಿಯಲ್ಲಿ ಯಶಸ್ಸು ಕಂಡ ವಿನುಗೆ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.