ಕಾಂಬೋಡಿಯಾದ ವರಂಗಟಾ ಎಂಬ ಚಿಂಪಾಂಜಿಯೊಂದಿಗೆ ಹುಡುಗನ ಹುಡುಗಾಟದ ಚಿತ್ರವೇ ಅಪ್ಪು-ಪಪ್ಪು. ಇದೀಗ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭಿಸಿದೆ.
ಚಿತ್ರದಲ್ಲಿ ಯಾವುದೇ ಅನಿಮೇಶನ್ ಬಳಸದೆ ಮಾಡಿರುವುದು ವಿಶೇಷ. ಕಾಂಬೋಡಿಯಾದಲ್ಲಿ 35 ದಿನಗಳ ಕಾಲ ಚಿತ್ರೀಕರಣ ಮುಗಿಸಿಕೊಂಡು ಬಂದು ನಗರದಲ್ಲಿ ಮಾರುತಿ ದೇವರನ್ನು ಬೇಡಿಕೊಳ್ಳುವ ಹಾಡೊಂದನ್ನು ಚಿತ್ರೀಕರಿಸಲಾಗಿದೆ.
ಅಲ್ಲದೆ, ಮಗುವಿನ ಪರಿಚಯ ಮಾಡುವ ಹಾಡೊಂದನ್ನು ಚಿತ್ರೀಕರಿಸುವುದರಿಂದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಹಾಡಿನ ಚಿತ್ರೀಕರಣದಲ್ಲಿ 150ಕ್ಕೂ ಹೆಚ್ಚು ಮಕ್ಕಳನ್ನು ಬಳಸಿಕೊಳ್ಳಲಾಗಿದೆ.
ಚಿತ್ರದಲ್ಲಿ ಕೋಮಲ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಹಾಸ್ಯ, ನಗು, ಚಿಂಪಾಂಜಿಯ ತುಂಟಾಟ ಜೊತೆಗೆ ಸಸ್ಪೆನ್ಸ್ ಎಲ್ಲವೂ ಇಲ್ಲಿದೆ. ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜಿಸಿದ್ದಾರೆ ನಿರ್ದೇಶಕ ಅನಂತರಾಜು.