'ಸೋತರೂ ಚಿಂತೆಯಿಲ್ಲ. ಆದರೆ ಯಾವುದೇ ಕಾರಣಕ್ಕೂ ರಿಮೇಕ್ ಚಿತ್ರಗಳಿಗೆ ಮಾರು ಹೋಗುವುದಿಲ್ಲ!' ಹೀಗೆಂದವರು ಬೇರಾರೂ ಅಲ್ಲ. ಪ್ರೇಮಿಸಂ ಚಿತ್ರದ ನಿರ್ದೇಶಕ ರತ್ನಜ.
ಇದು ಇತ್ತೀಚೆಗೆ ಪ್ರೇಮಿಸಂ ಚಿತ್ರದ ಪ್ರಚಾರ ಕಾರ್ಯದಲ್ಲಿ ಆಡಿದ ನುಡಿಗಳು. ಸ್ವಮೇಕ್ ಚಿತ್ರಗಳಿಗೆ ಸಿಗುವ ಖುಷಿ ಮತ್ತು ಸಂತೃಪ್ತಿ ರಿಮೇಕ್ ಚಿತ್ರಗಳಲ್ಲಿ ಸಿಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಅಷ್ಟೇ ಅಲ್ಲ. ಚಿತ್ರವನ್ನು ಗೆಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ನಾನು ಯಾವತ್ತೂ ನನ್ನ ಚಿತ್ರಗಳಲ್ಲಿ ಗಿಮಿಕ್ ಮಾಡುವುದಿಲ್ಲ. ಏಕೆಂದರೆ ಪ್ರಯತ್ನ ಉತ್ತಮವಾಗಿದ್ದರೆ ಜನ ಸ್ವೀಕರಿಸುತ್ತಾರೆ ಎಂಬುದೇ ಅವರ ನಂಬಿಕೆ.
ಚಿತ್ರದ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸುವುದೇ ನನ್ನ ಗುರಿ. ಪ್ರೇಮಿಸಂ ಮೂಲಕ ಇಬ್ಬರು ಹೊಸ ನಟರನ್ನು ಪರಿಚಯಿಸಿದ್ದೇನೆ ಎನ್ನುತ್ತಾರೆ ಅವರು. ಇಂದಿನ ದಿನಗಳಲ್ಲಿ ಚಿತ್ರ ಗೆಲ್ಲುವುದಕ್ಕಾಗಿ ಏನೆಲ್ಲಾ ಗಿಮಿಕ್ ಮಾಡುವರಿಗಿಂತ ಭಿನ್ನವಾಗಿರುವ ರತ್ನಜರನ್ನು ಮೆಚ್ಚಲೇಬೇಕು.