ಮಲೆಯಾಳಂನ ಜನಪ್ರಿಯ ನಟ ಮಮ್ಮುಟ್ಟಿ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಕಳೆದ ವರ್ಷವೇ ಸುದ್ದಿಯಾಗಿತ್ತು. ಆದರೆ ಬಳಿಕ ನಾಯಕಿ ವಿಚಾರದಲ್ಲಿ ಚಿತ್ರ ಮುಂದೆ ಹೋಯ್ತು. ನಂತರ ನಿರ್ಮಾಪಕರು ಕೈಕೊಟ್ಟು ಮತ್ತೂ ಮುಂದೆ ಹೋಯಿತು. ಕೊನೆಗೂ ನಿರ್ಮಾಪಕರಾಗಿ ಕೆ.ಮಂಜು ಸಾರಥ್ಯವಹಿಸಿಕೊಂಡ ಮೇಲೆ ಸಮಸ್ಯೆ ತಿಳಿಯಾಯಿತಾದರೂ, ನಾಯಕಿಯ ಗೊಂದಲ ಇನ್ನೂ ಇದೆ.
ಕೊನೆಗೂ ಇದೀಗ ಶಿಕಾರಿ ಚಿತ್ರಕ್ಕೆ ಮುಹೂರ್ತ ಕೂಡಿ ಬಂದಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ಚಿತ್ರ ಆರಂಭವಾಗಲಿದೆಯಂತೆ. ಬೇರೊಬ್ಬರ ಬಳಿ ಇದ್ದ ಶಿಕಾರಿ ಶೀರ್ಷಿಕೆಯನ್ನು ಈ ಚಿತ್ರಕ್ಕಾಗಿ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.
MOKSHA
ಚಿತ್ರವನ್ನು ಅಭಯಸಿಂಹ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಗುಬ್ಬಚ್ಚಿಗಳು ಚಿತ್ರಕ್ಕಾಗಿ ಸ್ವರ್ಣಕಮಲ ಬಾಚಿಕೊಂಡ ಯುವ ಪ್ರತಿಭಾನ್ವಿತ ನಿರ್ದೇಶಕರಿವರು. ಶಿಕಾರಿ ಚಿತ್ರದ ವಿಶೇಷವೆಂದರೆ, ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆಯಂತೆ. ಅಷ್ಟೇ ಅಲ್ಲ, ಈ ಚಿತ್ರದ ಮಲೆಯಾಳಂ ಆವತರಣಿಕೆಯನ್ನು ಸ್ವತಃ ಮಮ್ಮುಟ್ಟಿಯವರೇ ಬರೆಯಲಿದ್ದಾರಂತೆ!
ಚಿತ್ರ ನಾಯಕಿ ಪ್ರಧಾನವಾಗಿರುವ ಹಿನ್ನೆಲೆಯ ಸೂಕ್ತ ನಾಯಕಿಯ ಹುಡುಕಾಟ ಪ್ರಾರಂಭವಾಗಿದೆ. ಹಿಂದಿಯ ಪ್ರತಿಭಾನ್ವಿತ ನಟಿ ಕೊಂಕಣಾ ಸೇನ್ ಅವರನ್ನು ಕರೆತರುವ ಬಯಕೆ ನಿರ್ದೇಶಕರದ್ದಾದರೂ, ಕೊಂಕಣಾ ಅಂದು ಒಲ್ಲೆ ಅಂದಿದ್ದರು. ಅಂತೂ ಮಮ್ಮುಟ್ಟಿಗೆ ನಾಯಕಿಯಾಗುವ ಅದೃಷ್ಟದ ನಟಿ ಎಲ್ಲಿದ್ದಾಳೋ ಕಾದು ನೋಡಬೇಕು.