ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ, ಗ್ರಾಮ ವಾಸ್ತವ್ಯವನ್ನೂ ಮಾಡಲಿದ್ದಾರಂತೆ. ಹೌದು. ಇದೇನಪ್ಪಾ ಹೊಸ ವರಸೆ ಕುಮಾರಣ್ಣಂದು ಅಂತ ಕ್ಕಕಾಬಿಕ್ಕಿಯಾಗಬೇಡಿ. ಅದಕ್ಕೂ ಮೊದಲು ನಿಜ ವಿಷಯ ಹೇಳುವುದು ಒಳಿತು.
ರಾಮ್ ಪ್ರಕಾಶ್ ನಿರ್ದೇಶಿಸುತ್ತಿರುವ ಶಿವಕಾಶಿ ಚಿತ್ರಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಪಾತ್ರವನ್ನು ಮಾಡುತ್ತಿದ್ದಾರೆ. ಒಂದು ದೃಶ್ಯದಲ್ಲಿ ಮಾತ್ರವಲ್ಲದೆ, ಒಂದು ಹಾಡಿನಲ್ಲೂ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. 'ಈ ಮಣ್ಣ ಮೇಲೆ ಕೈಯಿಟ್ಟು ನುಡಿಯುತ್ತೇನೆ. ಒಂದು ಮಾತು ಸತ್ಯ..' ಎಂಬ ಹಾಡಿಗೆ ಕುಮಾರಣ್ಣ ಗ್ರಾಮಸ್ಥರರೊಂದಿಗೆ ಕುಣಿಯಲಿದ್ದಾರಂತೆ.
ಚಿತ್ರದಲ್ಲಿ ಖಳನಾಯಕರ ಪಿತೂರಿಗೆ ಜೈಲು ಪಾಲಾಗಿದ್ದ ನಾಯಕನನ್ನು ಬಿಡಿಸುವ ಮುಖ್ಯಮಂತ್ರಿ ಪಾತ್ರದಲ್ಲಿ ಕುಮಾರಸ್ವಾಮಿ ಅಭಿನಯಿಸುದ್ದಾರೆ. ಇದಕ್ಕೆ ಕುಮಾರಸ್ವಾಮಿ ಅವರು ಮೂರು ದಿನಗಳ ಕಾಲ್‌ಶೀಟ್ ನೀಡಿದ್ದಾರಂತೆ.