ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೃಥ್ವಿಯಿಂದ ಪುಳಕಿತರಾದ ಪುನೀತ್, ಪಾರ್ವತಿ ಜೋಡಿ (Pruthwi | Puneeth | Parvathi Mennon | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪುನೀತ್ ರಾಜಕುಮಾರ್ ಅವರ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಪೃಥ್ವಿ ಬಗ್ಗೆ ಸ್ವತಃ ಪುನೀತ್ ಅವರೇ ಥ್ರಿಲ್ ಆಗಿದ್ದಾರಂತೆ. ಪುನೀತ್‌ಗೆ ಈ ಚಿತ್ರವೊಂದು ಹೊಸ ಅನುಭವವಾಗಿದ್ದು, ಹಿಂದಿನ ಎಲ್ಲಾ ಚಿತ್ರಗಳಿಗಿಂತ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಚಿತ್ರದಲ್ಲಿ ಪ್ರೇಕ್ಷಕರು ತಮ್ಮನ್ನು ಹೇಗೆ ಸ್ವೀಕರಿಸುತ್ತಾರೆಂಬ ಕಾತರ ಅವರಲ್ಲಿದೆಯಂತೆ. ಡಬ್ಬಿಂಗ್ ಮಾಡುವಾಗ ಚಿತ್ರದ ದೃಶ್ಯಗಳನ್ನು ನೋಡಿ ಅವರು ಖುಷಿಯಾಗಿದ್ದಾರೆ. ಪುನೀತ್‌ಗೆ ಎರಡನೇ ಬಾರಿ ನಾಯಕಿಯಾಗಿ ಪಾರ್ವತಿ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಕೇಳುವಾಗ ಇದರಲ್ಲಿ ಯಾವ ಅಂಶವನ್ನು ಪ್ರಶ್ನಿಸಬೇಕೆಂದು ಗೊಂದಲದಲ್ಲಿದ್ದೆ. ಎಲ್ಲವು ಅಚ್ಚುಕಟ್ಟಾಗಿ ಮೂಡಿದೆ ಎಂದರು ಪಾರ್ವತಿ.

ಮಳೆ ಬರಲಿ ಮಂಜೂ ಇರಲಿ ಚಿತ್ರದಲ್ಲಿ ಪಾರ್ವತಿ ಮೆನನ್ ಸ್ವತಃ ಕನ್ನಡ ಕಲಿತು ಡಬ್ಬಿಂಗ್ ಮಾಡಿದ್ದರು. ಆದರೆ ಈ ಬಾರಿ ಪೃಥ್ವಿಗೆ ಧ್ವನಿ ನೀಡುತ್ತಿಲ್ಲ. ಕಾರಣ ಕೇಳಿದರೆ, ಇದು ನಿರ್ದೇಶಕರಿಗೆ ಬಿಟ್ಟ ವಿಷಯ. ನನಗೇನು ಈ ಬಗ್ಗೆ ಬೇಸರವಿಲ್ಲ. ಚಿತ್ರದ ಯಶಸ್ಸಿಗೆ ಧ್ವನಿ ಕೂಡ ಮುಖ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿರುವ ಬಗ್ಗೆ ಸಂತಸವಿದೆ. ಅಲ್ಲದೆ, ಚಿತ್ರಕ್ಕಾಗಿ ಖ್ಯಾತ ನಟ ಕಮಲಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ ಹಾಡಿರುವ ಬಗ್ಗೆ ಕದ್ರಿಯವರಿಗೆ ಹೆಮ್ಮೆಯಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೃಥ್ವಿ, ಪುನೀತ್, ಪಾರ್ವತಿ, ಕನ್ನಡ ಸಿನಿಮಾ