ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುವರ್ಣ ಅವಾರ್ಡ್ಸ್: ಜಗ್ಗೇಶ್, ಐಂದ್ರಿತಾ ಶ್ರೇಷ್ಟ ನಟನಟಿಯರು (Suvarna Film Awards | Aindritha Ray | Jaggesh | Ravichandran | Sudeep | Puneeth)
ಸುವರ್ಣ ಅವಾರ್ಡ್ಸ್: ಜಗ್ಗೇಶ್, ಐಂದ್ರಿತಾ ಶ್ರೇಷ್ಟ ನಟನಟಿಯರು
PTI
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸುವರ್ಣ ಫಿಲಂ ಅವಾರ್ಡ್ಸ್ -2010 ಸಮಾರಂಭದಲ್ಲಿ ಅತ್ಯುತ್ತಮ ನಟನಾಗಿ ಜಗ್ಗೇಶ್ ಹಾಗೂ ಅತ್ಯುತ್ತಮ ನಟಿಯಾಗಿ ಐಂದ್ರಿತಾ ರೇ ಪ್ರಶಸ್ತಿಗೆ ಪಾತ್ರರಾದರು.
ಝಗಮಗಿಸುವ ಸಮಾರಂಭದಲ್ಲಿ ತಾರೆಯರ ದಂಡೇ ನೆರೆದಿತ್ತು. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ವಿಶೇಷ ಆಕರ್ಷಣೆಯಾಗಿ ವಿಷ್ಣುವರ್ಧನರ ಸಾಕ್ಷ್ಯಚಿತ್ರ ಹೊರಹೊಮ್ಮಿತು. ಅಭಿಮಾನಿಗಳು ಭಾವುಕರಾದರೆ, ಭಾರತಿ ವಿಷ್ಣುವರ್ಧನ್ ಕಣ್ಣೀರಾದರು. ವಿಷ್ಣುವರ್ಧನ್ ಅವರಿಗೆ ಕ್ಷಣ ಹೊತ್ತು ಮೌನ ಪ್ರಾರ್ಥನೆ ನಡೆಸಿ ಗೌರವ ಅರ್ಪಿಸಲಾಯಿತು. ಭಾರತಿ ಅವರಿಗೆ ವಿಷ್ಣು ಅವರ ತೈಲವರ್ಣ ಚಿತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ, ರಾಧಿಕಾ ಗಾಂಧಿ, ಐಂದ್ರಿತಾ ರೇ, ಸಂಜನಾ ಗಾಂಧಿ, ರಾಗಿಣಿ, ಪ್ರಜ್ಞಾ ಮತ್ತಿತರ ನಟಿಯರು ಹಾಡುಗಳಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮವನ್ನು ಸುದೀಪ್- ರಕ್ಷಿತಾ, ಶ್ರೀನಗರ ಕಿಟ್ಟಿ ಶರ್ಮಿಳಾ ಮಾಡ್ರೆ, ದಿಗಂತ್ ಐಂದ್ರಿತಾ ರೇ, ನೀತು ದಿಗಂತ್ ಹೀಗೆ ತಾರಾ ಜೋಡಿಗಳು ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.
MOKSHA
ಅತ್ಯುತ್ತಮ ಸಿನಿಮಾ ಆಗಿ ಜೋಶ್ ಹೊರಹೊಮ್ಮಿದರೆ ಅತ್ಯುತ್ತಮ ನಿರ್ದೇಶಕರಾಗಿ ಜೋಶ್ ಚಿತ್ರಕ್ಕಾಗಿ ಶಿವಮಣಿ ಭಾಜನರಾದರು. ವರ್ಷದ ಅತ್ಯುತ್ತಮ ಮನರಂಜನಾ ನಟನಾಗಿ ಪುನೀತ್, ವರ್ಷದ ಜನಪ್ರಿಯ ನಟನಾಗಿ ಸುದೀಪ್ ಹೊರಹೊಮ್ಮಿದರು. ಜನಪ್ರಿಯ ನಟಿಯಾಗಿ ಪೂಜಾ ಗಾಂಧಿ ಪಡೆದರೆ ವರ್ಷದ ಪ್ರೇಕ್ಷಕರ ತಾರಾ ಜೋಡಿಯಾಗಿ ಒಲವೇ ಜೀವನ ಲೆಕ್ಕಾಚಾರ ಚಿತ್ರಕ್ಕಾಗಿ ಶ್ರೀನಗರ ಕಿಟ್ಟಿ ಹಾಗೂ ರಾಧಿಕಾ ಪಂಡಿತ್ ಪಡೆದರು.
ಅತ್ಯುತ್ತಮ ಚಿತ್ರ- ಜೋಶ್ ಅತ್ಯುತ್ತಮ ನಟ- ಜಗ್ಗೇಶ್ (ಎದ್ದೇಳು ಮಂಜುನಾಥ) ಅತ್ಯುತ್ತಮ ನಟಿ- ಐಂದ್ರಿತಾ ರೇ (ಮನಸಾರೆ) ಅತ್ಯುತ್ತಮ ನಿರ್ದೇಶಕ- ಶಿವಮಣಿ (ಜೋಶ್) ಅತ್ಯುತ್ತಮ ಸಂಗೀತ ನಿರ್ದೇಶಕ- ವಿ.ಹರಿಕೃಷ್ಣ (ರಾಜ್- ದಿ ಶೋ ಮ್ಯಾನ್) ಅತ್ಯುತ್ತಮ ಸಂಭಾಷಣೆಕಾರ- ಅಗ್ನಿ ಶ್ರೀಧರ್ (ಕಳ್ಳರ ಸಂತೆ) ಅತ್ಯುತ್ತಮ ಗೀತ ರಚನೆಕಾರ- ಜಯಂತ ಕಾಯ್ಕಿಣಿ (ಮನಸಾರೆ)
PR
ಅತ್ಯುತ್ತಮ ಪೋಷಕ ನಟ- ತಬಲಾ ನಾಣಿ (ಎದ್ದೇಳು ಮಂಜುನಾಥ) ಅತ್ಯುತ್ತಮ ಪೋಷಕ ನಟಿ- ಸುಮಿತ್ರಾ (ಗೋಕುಲ) ಅತ್ಯುತ್ತಮ ಹಾಸ್ಯ ನಟ- ರಾಜು ತಾಳಿಕೋಟೆ (ಮನಸಾರೆ) ಅತ್ಯುತ್ತಮ ಹಿನ್ನೆಲೆ ಗಾಯಕ- ಚೇತನ್ (ಅಂಬಾರಿ) ಅತ್ಯುತ್ತಮ ಹಿನ್ನೆಲೆ ಗಾಯಕಿ- ಶಮಿತಾ ಮಲ್ನಾಡ್ (ಬಿರುಗಾಳಿ)
ಅತ್ಯುತ್ತಮ ಸಾಹಸ ನಿರ್ದೇಶಕ- ರವಿವರ್ಮ (ಕಬಡ್ಡಿ) ಅತ್ಯುತ್ತಮ ಛಾಯಾಗ್ರಾಹಕ- ಸಂತೋಷ್ ರೈ ಪಾತಾಜೆ (ಜೋಶ್) ಅತ್ಯುತ್ತಮ ಕಲಾ ನಿರ್ದೇಶಕ- ಶಶಿಧರ್ ಅಡಪ (ಮನಸಾರೆ) ಅತ್ಯುತ್ತಮ ನೃತ್ಯ ನಿರ್ದೇಶಕ- ಇಮ್ರಾನ್ ಸರ್ದಾರಿಯಾ (ರಾಮ್) ಅತ್ಯುತ್ತಮ ಸಂಕಲನಕಾರ- ದೀಪು ಎಸ್.ಕುಮಾರ್ (ಮಳೆಯಲಿ ಜೊತೆಯಲಿ)
ವಿಶೇಷ ಪ್ರಶಸ್ತಿಗಳು- ವರ್ಷದ ಮನರಂಜನಾ ನಟ- ಪುನೀತ್ ರಾಜ್ ಕುಮಾರ್ ವರ್ಷದ ಜನಪ್ರಿಯ ನಟ- ಸುದೀಪ್ ವರ್ಷದ ಜನಪ್ರಿಯ ನಟಿ- ಪೂಜಾ ಗಾಂಧಿ ವರ್ಷದ ಜನಪ್ರಿಯ ನಿರ್ದೇಶಕ- ಪ್ರೇಮ್ ವರ್ಷದ ಭರವಸೆಯ ಹೊಸ ನಟ- ರಾಕೇಶ್ (ಜೋಶ್) ವರ್ಷದ ಭರವಸೆಯ ಹೊಸ ನಟಿ- ರಾಗಿಣಿ (ವೀರ ಮದಕರಿ) ಪ್ರೇಕ್ಷಕರು ಆರಿಸಿದ ವರ್ಷದ ಅತ್ಯುತ್ತಮ ತಾರಾ ಜೋಡಿ- ಶ್ರೀನಗರ ಕಿಟ್ಟಿ ಮತ್ತು ರಾಧಿಕಾ ಪಂಡಿತ್ (ಒಲವೇ ಜೀವನ ಲೆಕ್ಕಾಚಾರ)