ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೈಲಾರಿ ಚಿತ್ರದಲ್ಲಿ ಟಗರಿನೊಂದಿಗೆ ಶಿವಣ್ಣ ಫೈಟಿಂಗ್ (Kannada Cinema | Mylari | Shivaraj Kumar | Chandru)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗದಲ್ಲಿ ಪ್ರಾಣಿಗಳೊಂದಿಗೆ ಫೈಟ್ ಮಾಡಿರುವ ಸನ್ನಿವೇಶ ಕಡಿಮೆ. ಈ ಹಿಂದೆ ಹುಲಿಯ ಹಾಲಿನ ಮೇವು ಚಿತ್ರದಲ್ಲಿ ರಾಜ್ ಹುಲಿಯ ಜೊತೆ ಸರಸವಾಡಿದ್ದರು. ಟೈಗರ್ ಪ್ರಭಾಕರ್ ಹಲವು ಪ್ರಾಣಿಗಳ ಜೊತೆ ಕಿತ್ತಾಟ ಮಾಡಿರುವುದು ಎಲ್ಲರಿಗೂ ಗೊತ್ತಿದೆ.

ಅದೇನೇ ಇರಲಿ. ಇತ್ತೀಚೆಗಂತೂ ಇಂತಹ ಟ್ರೆಂಡ್ ಕಡಿಮೆಯಾಗುತ್ತಿದೆ. ಇದೀಗ ಅಂತಹದ್ದೊಂದು ಇತಿಹಾಸ ಮತ್ತೆ ಮರುಕಳಿಸುತ್ತಿದೆ. ಇದು ನಡೆಯುತ್ತಿರುವುದು ಮೈಲಾರಿ ಚಿತ್ರಕ್ಕೆ. ತಾಜ್ ಮಹಲ್ ಖ್ಯಾತಿಯ ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಸ್ವತಃ ಶಿವರಾಜ್ ಕುಮಾರ್ ಟಗರಿನ ಜತೆ ಮಲ್ಲಯುದ್ದ ನಡೆಸಲಿದ್ದಾರಂತೆ.

ಅದಕ್ಕಾಗಿ ಚೆನ್ನೈ ಮೂಲದ ಟಗರು ಇಲ್ಲಿ ಬರುತ್ತಿದೆ. ಚಿತ್ರದಲ್ಲಿ ನಾಯಕ ಮತ್ತು ಟಗರಿನ ಸನ್ನಿವೇಶ ಐದಕ್ಕೂ ಹೆಚ್ಚು ನಿಮಿಷ ಮೂಡಿ ಬರಲಿದೆಯಂತೆ! ಈ ಭಾಗದ ಶೂಟಿಂಗ್ ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ.

ಹಾಂ. ಅಂದ ಹಾಗೆ ಶಿವಣ್ಣ ಒಂದು ನಿರ್ಧಾರಕ್ಕೆ ಬಂದಿದ್ದಾರಂತೆ. ಯಾವಾಗ ಜನರು ತನ್ನ ಮುಖವನ್ನು ತೆರೆಯ ಮೇಲೆ ನೋಡದನ್ನು ಇಷ್ಟಪಡ್ತಾರೋ ಅಲ್ಲಿವರೆಗೆ ನಟಿಸುತ್ತೇನೆ. ಜನ ಬೇಡ ಎಂದರೆ ನಾನು ನಟಿಸೋದಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಲಾರಿ, ಶಿವರಾಜ್ ಕುಮಾರ್, ಚಂದ್ರು, ಕನ್ನಡ ಸಿನಿಮಾ