ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಅತ್ಯಂತ ಬೇಡಿಕೆಯ ನಟಿ ಭವ್ಯಾ ಈಗ ನಾಗತಿಹಳ್ಳಿ ಚಂದ್ರಶೇಖರ್ ಅವರ ನೂರು ಜನ್ಮಕೂ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.
ಅರೆ, ಇದೇನು ಬೆಂಗಳೂರಿಗೆ ಬಂದಿದ್ದಾರೆ ಅನ್ನುತ್ತಿದ್ದಾರೆ ಅಂದುಕೊಂಡಿರಾ? ಹೌದು, ಅವರೀಗ ರಾಜ್ಯದ ಯಾವ ಮೂಲೆಯಲ್ಲೂ ವಾಸಿಸುತ್ತಿಲ್ಲ. ಅವರು ಮುಂಬೈಗೆ ತೆರಳಿ ಅಲ್ಲಿ ಮನೆ ಕೊಂಡು ಸೆಟಲ್ ಆಗಿ ಸಾಕಷ್ಟು ಸಮಯವೇ ಆಗಿ ಹೋಗಿದೆಯ ಹಾಗಾಗಿಯೋ ಏನೋ, ಅವರು ಕನ್ನಡ ಚಿತ್ರರಂಗದಲ್ಲಿ ಈಗ ಸಕ್ರಿಯವಾಗಿ ತೊಡಗಿಕೊಂಡಿಲ್ಲ. ಅಲ್ಲಿಂದ ಇಲ್ಲಿಗೆ ಬಂದು ಹೋಗೋದು ಕಷ್ಟವಾದರೂ, ಕೆಲವರ ಒತ್ತಾಯಕ್ಕೆ ಮಾತ್ರ ಬಂದು ಅಭಿನಯಿಸಿ ಹೋಗುತ್ತೇನೆ ಎಂಬ ಮಾತು ಭವ್ಯಾದು.
ಡಾ. ವಿಷ್ಣುವರ್ಧನ್ ಜತೆ ಕೃಷ್ಣಾ ನೀ ಬೇಗನೆ ಬಾರೋ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಭವ್ಯಾ ನಟಿಸಿದ ಚಿತ್ರಗಳು ನೂರಾರು. ಅದರಲ್ಲಿ ಹಲವು ಪ್ರೇಕ್ಷಕರನ್ನು ಸೆಳೆದರೆ, ಇನ್ನು ಕೆಲವು ತೋಪೆದ್ದಿದ್ದವು. ತಾಯಿಯ ಪಾತ್ರದಲ್ಲೂ ಸಾಕಷ್ಟು ಚಿತ್ರದಲ್ಲಿ ಅಭಿನಯಿಸುವ ಮೂಲಕ ಭವ್ಯಾ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್ ಸಹ ಆರಂಭಿಸಿದ್ದರು. ಈಗೇನಿದ್ದರೂ, ಎರಡನೇ ಇನಿಂಗ್ಸ್ ಆಟ ಮುಂದುವರಿದಿದೆ.
ನಾಗತಿಹಳ್ಳಿ ನಿರ್ದೇಶಿಸುತ್ತಿರುವ 'ನೂರು ಜನ್ಮಕೂ..' ಚಿತ್ರದಲ್ಲಿ ಹೀರೋನ ತಾಯಿಯಾಗಿ ಸೆಂಟಿಮೆಂಟಲ್ ಪಾತ್ರದ್ಲಲಿ ಅಭಿನಯಿಸುತ್ತಿದ್ದಾರೆ. ಟೆಕ್ಕಿಗಳ ಪ್ರೇಮಕಥೆಗೆ ನಾಯಕರಾಗಿ ಸಂತೋಷ್ ಹಾಗೂ ನಾಯಕಿಯಾಗಿ ಐಂದ್ರಿತಾ ರೇ ನಟಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇದೆ. ಪ್ರೀತಿಯನ್ನು ವಿಭಿನ್ನವಾಗಿ ತೋರಿಸುವ ಈ ಚಿತ್ರ ಸದ್ಯವೇ ತೆರೆಕಾಣಲಿದೆ.