ಆಪ್ತರಕ್ಷಕ ಚಿತ್ರವನ್ನು ಕನ್ನಡ ಚಿತ್ರರಂಗವೂ ಸೇರಿದಂತೆ, ತಮಿಳು ತೆಲುಗು, ಚಿತ್ರರಂಗದಿಂದಲೂ ಗಣ್ಯಾತಿಗಮ್ಯರು ನೋಡಿದ್ದಾಯಿತು. ಇದೀಗ ಆಪ್ತರಕ್ಷಕ ನೋಡುವ ಆಸೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು.
ಹೌದು. ಯಡಿಯೂರಪ್ಪ ಅವರಿಗೀಗ ಆಪ್ತರಕ್ಷಕ ನೋಡುವ ಮನಸಾಗಿದೆ. ಅಷ್ಟೇ ಅಲ್ಲ, ತನ್ನ ಸಂಪುಟದ ಇತರ ಸಚಿವರಿಗೂ ತೋರಿಸುವ ಮನಸಾಗಿದೆ. ಈ ಹಿಂದೆ ಪಾ ಚಿತ್ರವನ್ನು ತನ್ನ ಸಂಪುಟದ ಸಚಿವರೊಂದಿಗೆ ಅಮಿತಾಬ್ ಜೊತೆಗೂಡಿ ಪಿವಿಆರ್‌ನಲ್ಲಿ ವೀಕ್ಷಿಸಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಚಿತ್ರದ ನಿರ್ದೇಶಕ ಪಿ.ವಾಸು ಅವರ ಬಳಿ ತನಗೆ ಆಪ್ತರಕ್ಷಕ ವೀಕ್ಷಿಸುವ ಆಸೆಯಿದೆ ಎಂದು ತನ್ನ ಬಯಕೆ ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ವಿಶೇಷ ಪ್ರದರ್ಶನ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.
MOKSHA
ಇದೇ ವೇಳೆ ಆಪ್ತರಕ್ಷಕ ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಆಪ್ತರಕ್ಷಕ ಚಿತ್ರದ ಪರವಾಗಿ, ಉತ್ತರ ಕರ್ನಾಟಕ ನೆರೆ ಪರಿಹಾರ ನಿಧಿಗೆ ಐದು ಲಕ್ಷ ರೂಪಾಯಿಗಳ ಸಹಾಯವನ್ನು ನೀಡಿದ್ದಾರಂತೆ.
ಕೃಷ್ಣ ಪ್ರಜ್ವಲ್ ಇತ್ತೀಚೆಗೆ ಆಪ್ತರಕ್ಷಕ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಸಂತಸ ಹಂಚಿಕೊಂಡಿದ್ದಾರೆ. ಈಗಲೂ ಬಹುತೇಕ ಚಿತ್ರಮಂದಿರಗಳು ಜನಭರಿತ ಪ್ರದರ್ಶನ ಕಾಣುತ್ತಿದ್ದು, ರಾಜ್ಯದ 78 ಚಿತ್ರಮಂದಿರಗಳಲ್ಲಿ ಈಗಾಗಲೇ ಚಿತ್ರ 50 ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ಮುಂದುವರಿದಿದೆ. 30ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಾದರೂ ಇದು ಶತದಿನೋತ್ಸವ ಆಚರಿಸಲಿ ಎಂಬ ಬಯಕೆ ಕೃ-ಷ್ಣ ಪ್ರಜ್ವಲ್ ಅವರದ್ದು.