ರಮ್ಯಾ ಅತ್ತ ಐಪಿಎಲ್‌ಗೆ ಹುರ್ರೇ ಅನ್ನುತ್ತಿದ್ದರೆ, ಇತ್ತ ಪೂಜಾ ಗಾಂಧಿ ಮಾತ್ರ ಅಂಧರ ಬೆನ್ನು ಬಿದ್ದಿದ್ದಾಳೆ. ಅರ್ಥಾತ್ ಪೂಜಾ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ಗೆ ರಾಯಭಾರಿಯಾಗುತ್ತಿದ್ದಾಳೆ. ಬರುವ ಮೇ.24ರಿಂದ ನಡೆಯುತ್ತಿರುವ ಅಂಧರ ಕ್ರಿಕೆಟಿಗೆ ರಾಯಭಾರಿಯಾಗಿ ಪೂಜಾ ಗಾಂಧಿ ಆಯ್ಕೆಯಾಗಿದ್ದಾರೆ.
ಅಂಧರಲ್ಲಿರುವ ಪ್ರತಿಭೆ ನಿಜಕ್ಕೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ಗುಜರಾತಿನಲ್ಲಿ ಪಂದ್ಯ ಮುಗಿಸಿ ಕರ್ನಾಟಕಕ್ಕೆ ಮರಳಿದ್ದ ಸಂದರ್ಭ ಅವರನ್ನು ಮಾತನಾಡಿಸಿದೆ. ಅವರಲ್ಲಿ ಅಗಾಧ ಛಲವಿದೆ. ಅಂಧರಾಗಿದ್ದರೂ, ಅವರಲ್ಲಿರುವ ಪ್ರತಿಭೆ, ತಾಕತ್ತು, ಆತ್ಮವಿಶ್ವಾಸ, ಛಲ ಕಂಡು ನನಗೆ ಮಾತೇ ಹೊರಡಂತಾಗಿದೆ. ಅವರಿಂದ ನಾವು ಕಲಿಯುವುದು ಬಹಳಷ್ಟಿದೆ. ಅದಕ್ಕಾಗಿಯೇ ನಾನು ಅವರ ರಾಯಭಾರಿಯಾಗಲು ಒಪ್ಪಿದೆ ಎನ್ನುತ್ತಾರೆ ಪೂಜಾ.
ಪಂದ್ಯ ಮೇ. 24ರಿಂದ ಆರಂಭವಾಗಲಿದ್ದು, ಒಟ್ಟು ಎಂಟು ಪಂದ್ಯ ನಡೆಯಲಿದೆ. ಮೇ.29ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ.29ರಂದು ಫೈನಲ್ ಹಣಾಹಣಿ ನಡೆಯಲಿದೆ. ಇದಕ್ಕೆ ಅಷ್ಟೂ ದಿನಗಳ ಕಾಲ ತಂಡದೊಂದಿಗಿದ್ದು, ಪೂಜಾ ಗಾಂಧಿ ಆಟಗಾರರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಅವರನ್ನು ಹುರಿದುಂಬಿಸುತ್ತಾ, ಕ್ರೀಡಾಂಗಣದ್ಲಲಿ ಹುರ್ರೇ ಎನ್ನಲಿದ್ದಾರೆ.