ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡಾ.ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ: ಪುನೀತ್ ಪುಸ್ತಕ ಬಿಡುಗಡೆ (Dr.Rajkumar | Puneeth | Shivaraj kumar | Annavru)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ವರನಟ ಡಾ.ರಾಜ್ ಕುಮಾರ್ ಜೀವನ ಕುರಿತ 'ಡಾ.ರಾಜ್ ಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಪುಸ್ತಕವನ್ನು ರಾಜ್ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊರತಂದಿರುವ ಈ ಪುಸ್ತಕದಲ್ಲಿ ಡಾ.ರಾಜ್ ವ್ಯಕ್ತಿತ್ವದ ಹಲವು ಮಜಲುಗಳು ಇವೆ. ರಾಜ್ ತಮ್ಮ ಆಪ್ತ ಗೆಳೆಯರು, ಒಡನಾಡಿಗಳು, ಬಂಧುಗಳೊಂದಿಗೆ ಹಂಚಿಕೊಂಡ ಅಪರೂಪದ ಮರೆಯಲಾರದ ಘಳಿಗೆಗಳು ಈ ಹೊತ್ತಗೆಯಲ್ಲಿವೆ. ರಾಜ್ ಬದುಕಿದ್ದಾಗಲೇ ಪುನೀತ್ ಈ ಪುಸ್ತಕವನ್ನು ಹೊರತರಲು ಬಯಸಿದ್ದರೂ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಆಗ ಕನಸಾಗಿಯೇ ಇದ್ದ ಪುಸ್ತಕದ ಕಾರ್ಯ ಈಗ ನನಸಾಗಿದೆ. ಆದರೂ, ಪುನೀತ್‌ ಈ ಪುಸ್ತಕ ನೋಡಲು ಅಪ್ಪನಿಲ್ಲವಲ್ಲಾ ಎಂಬ ಬೇಸರವನ್ನು ಹೊರಹಾಕಿದರು.

ಈ ಪುಸ್ತಕ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಹೊರಬಂದಿದ್ದು, ಕೇವಲ ಕನ್ನಡಿಗರು ಮಾತ್ರವಲ್ಲದೆ, ದೇಶದೆಲ್ಲೆಡೆಯ ಮಂದಿಗೂ ತಲುಪುವ ಪುಸ್ತಕವಾಗಿಸಲು ಪುನೀತ್ ಶ್ರಮ ಪಟ್ಟಿದ್ದಾರೆ. ಪುಸ್ತಕದಲ್ಲಿ ರಾಜ್ ಅವರ ಜೀವನದ ಅಪರೂಪದ ನಾಲ್ಕು ಸಾವಿರ ಫೋಟೋಗಳಿದ್ದು, ಈವರೆಗೆ ಪ್ರಕಟವಾಗದ ಹಲವು ಫೋಟೋಗಳೂ ಇದರಲ್ಲಿ ಸ್ಥಾನ ಪಡೆದಿವೆ.

ಡಾ.ರಾಜ್ ಹುಟ್ಟುಹಬ್ಬ: ನೀವೂ ಶುಭಹಾರೈಸಿ, ನಮನ ಸಲ್ಲಿಸಿ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾರಾಜ್ ಕುಮಾರ್, ಪುನೀತ್, ಶಿವರಾಜ್ ಕುಮಾರ್, ಪಾರ್ವತಮ್ಮ, ಅಣ್ಣಾವ್ರು