ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್, ಶಿವಣ್ಣ ರಕ್ತದಾನ, 'ಅಪ್ಪಾಜಿ ಸೌಹಾರ್ದ' ಪ್ರಶಸ್ತಿ ಪ್ರದಾನ (Dr.Rajkumar | Puneeth | Shivaraj kumar | Annavru | Appaji Souharda Prashasthi)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ 82ನೇ ಹುಟ್ಟುಹಬ್ಬದ ಅಂಗವಾಗಿ ರಾಜ್ ಕುಟುಂಬವರ್ಗ ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿ, ಡಾ.ರಾಜ್ ಪುಸ್ತಕ ಬಿಡುಗಡೆ, ರಾಜ್ ಹೆಸರಿನಲ್ಲಿ ಅನ್ನಸಂತರ್ಪಣೆ, ರಕ್ತದಾನ ಮತ್ತಿತರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ ಜನ್ಮದಿನವನ್ನು ಅವಿಸ್ಮರಣೀಯವಾಗಿಸಿತು.

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಮಕ್ಕಳು ಅಳಿಯಂದಿರರು ಸೊಸೆಯರೆಲ್ಲ ಸೇರಿ ಕನ್ನಡ ಚಿತ್ರರಂಗದ ಮೂವರು ಹಿರಿಯರಿಗೆ ಅಪ್ಪಾಜಿ ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಿತು. ಶಂಕರ್ ಗುರು ಚಿತ್ರ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ ದೊರೈ-ಭಗವಾನ್ ಜೋಡಿಯ ಖ್ಯಾತಿಯ ನಿರ್ದೇಶಕ ಭಗವಾನ್, ಹಿರಿಯ ನಟ ಶಿವರಾಂ ಹಾಗೂ ಹಿರಿಯ ಪೋಷಕ ನಟಿ ಶಾಂತಮ್ಮ ಅವರಿಗೆ ಅಪ್ಪಾಜಿ ಸೌಹಾರ್ದ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ಫಲಕ, ಶಾಲು, ಹಾರ ಫಲತಾಂಬೂಲ ಹಾಗೂ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರತಿ ವರ್ಷವೂ ಇನ್ನು ಮುಂದೆ ರಾಜ್ ಕುಟುಂಬ ಅಣ್ಣಾವ್ರ ಜನ್ಮದಿನದಂದು ಚಿತ್ರೋದ್ಯಮದ ಸಾಧಕರಿಗೆ ಈ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.

ಸಮಾರಂಭದಲ್ಲಿ ಭಾವಪರವಶರಾಗಿ ಮಾತನಾಡಿದ ಭಗವಾನ್, ಸತತವಾಗಿ 50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ದುಡಿದ ಮೇರು ನಟ ರಾಜ್ ಅವರ ಈ ಪ್ರಶಸ್ತಿ ನನಗೆ ಎಲ್ಲಕ್ಕಿಂತ ಶ್ರೇಷ್ಠ. ಈ ಸನ್ಮಾನಕ್ಕೆ ಮಿಗಿಲಾದ ಸನ್ಮಾನ ಪ್ರಪಂಚದಲ್ಲೇ ಇನ್ನೊಂದಿಲ್ಲ. ನನ್ನ ಜೀವನ ಪಾವನವಾಯಿತು ಎಂದು ಕಣ್ಣೀರಾದರು.

ಪೋಷಕ ನಟಿ ಶಾಂತಮ್ಮ ಮಾತನಾಡಿ, ಡಾ.ರಾಜ್ ಅವರು ಬೆಲೆ ಕಟ್ಟಲಾಗದ ನಟ. ಅವರ ಸಂದೇಶಾತ್ಮಕ ಚಿತ್ರಗಳು ಎಷ್ಟೋ ಜನರ ಜೀವನವನ್ನು ಪಾವನವಾಗಿಸಿವೆ. ಎಷ್ಟೊಂದು ಪುಣ್ಯಾತ್ಮರು ಅವರು ಎಂದು ಹಾಡಿ ಹೊಗಳಿ ತಮ್ಮ ಹಾಗೂ ರಾಜ್ ಅವರ ಹಳೆಯ ದಿನಗಳನ್ನು ನೆನಪಿಸಿದರು.

ಹಿರಿಯ ನಟ ಶಿವರಾಂ ಮಾತನಾಡಿ, ನನ್ನ ವೃತ್ತಿಯ ಅಣ್ಣನಾದ ರಾಜಣ್ಣನ ಹೆಸರಿನಲ್ಲಿ ಕುಟುಂಬ ವರ್ಗ ನೀಡುವ ಪ್ರಶಸ್ತಿಗೆ ಇಬ್ಬರು ಹಿರಿಯ ಚೇತನಗಳ ಜೊತೆ ನನ್ನನ್ನೂ ಸೇರಿಸಿದ್ದಕ್ಕೆ ನಾನು ಯಾವ ರೀತಿ ಕೃತಜ್ಞನಾಗಿರಬೇಕೋ ತಿಳಿಯುತ್ತಿಲ್ಲ ಎಂದು ಭಾವ ತುಂಬಿ ಮಾತನಾಡಿದರು.

ಪುನೀತ್, ಶಿವಣ್ಣ ರಕ್ತದಾನ: ಇದೇ ವೇಳೆ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಸಮಾಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ರಾಜ್ ಕುಟುಂಬ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು. ಸ್ವಯಂಪ್ರೇರಿತವಾಗಿ ಸ್ವತಃ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರುಗಳು ರಕ್ತದಾನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೂರಾರು ಸಂಖ್ಯೆಯಲ್ಲಿ ಡಾ.ರಾಜ್ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಾಜ್ ನೆನಪಿನ ಕಾಣಿಕೆಯಾಗಿ ತಮ್ಮ ರಕ್ತದಾನ ನೀಡಿದರು. ಇದೇ ವೇಳೆ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಣ್ಣಾವ್ರ ಹೆಸರಿನಲ್ಲಿ ಮಧ್ಯಾಹ್ನದೂಟ ಸವಿದರು.

ಪೂರಕ ಸುದ್ದಿಗಾಗಿ ಕ್ಲಿಕ್ ಮಾಡಿ:

ಡಾ.ರಾಜ್ ಹುಟ್ಟುಹಬ್ಬ: ನೀವೂ ಶುಭಹಾರೈಸಿ, ನಮನ ಸಲ್ಲಿಸಿ...
ಡಾ.ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ: ಪುನೀತ್ ಪುಸ್ತಕ ಬಿಡುಗಡೆ
ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾರಾಜ್ ಕುಮಾರ್, ಪುನೀತ್, ಶಿವರಾಜ್ ಕುಮಾರ್, ಅಣ್ಣಾವ್ರು, ಅಪ್ಪಾಜಿ ಸೌಹಾರ್ದ ಪ್ರಶಸ್ತಿ