ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕಾಲ್ಗೆಜ್ಜೆ'ಯಲ್ಲೂ ರಂಗಾಯಣ ರಘು ಹಾಸ್ಯ ರಸಾಯನ (Kalgejje | Rangayana Raghu | Bullet Prakash | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗೆ ಬುಲೆಟ್ ಪ್ರಕಾಶ್ ಜೊತೆ ನಾಯಕ ನಟನಾಗಿ ಅಭಿನಯಿಸುವ ಮೂಲಕ ಸುದ್ದಿಯಾಗಿದ್ದ ರಂಗಾಯಣ ರಘು ಇನ್ನೊಂದು ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಹೆಸರು ಕಾಲ್ಗೆಜ್ಜೆ. ಸರಳ ಕಥೆ, ನಿರೂಪಣೆ ಒಳಗೊಂಡ, ಬಹುತೇಕ ಹಾಸ್ಯವನ್ನೇ ಆಧರಿಸಿರುವ ಚಿತ್ರ ಈ ಕಾಲ್ಗೆಜ್ಜೆ.

ರಂಗಾಯಣ ರಘು ಇದ್ದ ಮೇಲೆ ಹಾಸ್ಯಕ್ಕೆ ಕೊರತೆ ಇರಲು ಹೇಗೆ ಸಾಧ್ಯ. ಅವರ ಆಂಗಿಕ ಅಭಿನಯ, ಡೈಲಾಗ್ ಡೆಲಿವರಿ, ಅದ್ಭುತ ನಟನೆ ಎಲ್ಲವೂ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆಯ ನಟನನ್ನಾಗಿಸಿದೆ. ಈ ಚಿತ್ರದಲ್ಲಿ ಇವರ ಪತ್ನಿಯಾಗಿ ಪವಿತ್ರಾ ಲೋಕೇಶ್ ಅಭಿನಯಿಸುತ್ತಿದ್ದಾರೆ. ಇವರೇ ನಾಯಕ ನಾಯಕಿ ಅಂದುಕೊಂಡರೆ ತಪ್ಪು. ಆದರೆ ಚಿತ್ರ ಎತ್ತಿ ನಿಲ್ಲಿಸುವ ಮಹತ್ತರ ಜವಾಬ್ದಾರಿ ಇವರ ಮೇಲಿರುವುದು ಸುಳ್ಳಲ್ಲ.

ಚಿತ್ರದಲ್ಲಿ ಪವಿತ್ರಾ ಲೋಕೇಶ್‌ಗೆ ಸಿನಿಮಾ ಹುಚ್ಚು. ಈ ಹುಚ್ಚು ರಘು ಅವರಿಗೆ ಏನೆಲ್ಲಾ ಆಘಾತ, ಆತಂಕ ಹಾಗೂ ಅವಮಾನವನ್ನು ತಂದಿಡುತ್ತದೆ ಎಂಬುದು ಚಿತ್ರದ ಹಾಸ್ಯ ಸನ್ನಿವೇಶಗಳಲ್ಲಿ ಅರ್ಥವಾಗುತ್ತದೆ. ಇವುಗಳ ನಡುವೆಯೇ ಒಂದು ಪ್ರೇಮ ಕಥೆ ಚಿಗುರೊಡೆಯುತ್ತದೆ. ಇದನ್ನು ಸಾಮಾನ್ಯವಾಗಿ ನಿರೂಪಿಸದೇ ವಿಭಿನ್ನವಾಗಿ ಕಟ್ಟಿಕೊಡುವ ಕಾರ್ಯವನ್ನು ನಿರ್ದೇಶಕರು ಮಾಡಿದ್ದಾರಂತೆ. ಚಿತ್ರದ ನಾಯಕ ವಿಶ್ವಾಸ್, ನಾಯಕಿ ರೂಪಿಕಾ. ಈ ಚಿತ್ರದ ನಿರ್ದೇಶಕ ಬಂಗಾರು.

ಇವರ ಹೊರತಾಗಿ ಅನಂತನಾಗ್ ಪೋಷಕ ನಟರಾಗಿ ಅಭಿನಯಿಸಿದ್ದಾರೆ. ತಬಲಾ ನಾಣಿಗೆ ವಿಭಿನ್ನ ಪಾತ್ರ ನೀಡಲಾಗಿದ್ದು, ಹಾಸ್ಯದ ಹೊಳೆ ಹರಿಸಲಿದ್ದಾರೆ. ಒಟ್ಟಾರೆ ಪ್ರೇಕ್ಷಕರಿಗೆ ನಗುವಿನ ಜತೆ ಒಂದ ಉತ್ತಮ ಪ್ರೇಮ ಕಥೆ ಕಟ್ಟಿಕೊಡುವುದು ನಿರ್ದೇಶಕರ ಯೋಚನೆ. ಅದು ಯಶಸ್ಸು ಕಾಣಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಲ್ಗೆಜ್ಜೆ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಕನ್ನಡ ಸಿನಿಮಾ