ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರರಂಗಕ್ಕೆ ಉಳ್ಳವರ ಬಲ (Kannada Cinema | Accident | Ejjodu | Reliance | Houseful)
ಸುದ್ದಿ/ಗಾಸಿಪ್
Bookmark and Share Feedback Print
 
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ... ಎಂದು ತೆಲುಗು, ತಮಿಳು ಚಿತ್ರರಂಗದ ವೈಭವ ಕಾಣುವ ಮಟ್ಟದ ಆರ್ಥಿಕ ಶಕ್ತಿ ಇಲ್ಲದೇ ಬಳಲುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಈಗ ಕಾರ್ಪೋರೇಟ್ ಸಂಸ್ಥೆಗಳ ಸಹಕಾರ ಸಿಗುವ ಲಕ್ಷಣ ಗೋಚರಿಸುತ್ತಿದೆ.

ಹೌದು. ಇದೀಗ ರಿಲಯನ್ಸ್ ಸೇರಿದಂತೆ ನಾನಾ ಸಂಸ್ಥೆಗಳು ಕನ್ನಡವೂ ಸೇರಿದಂತೆ ನಾನಾ ಭಾಷೆಯ ಚಿತ್ರಕ್ಕೆ ಹಣ ಹೂಡಲು ಮುಂದಾಗಿವೆ. ಇದರಿಂದ ಮುಂದಿನ ದಿನಗಳಲ್ಲಿ ಅದ್ದೂರಿ ಹಾಗೂ ವಿಭಿನ್ನ ಮಾದರಿಯ ಚಿತ್ರ ವೀಕ್ಷಿಸುವ ಅವಕಾಶ ಕನ್ನಡ ನೋಡುಗರಿಗೆ ಲಭ್ಯವಾಗುವಲ್ಲಿ ಸಂಶಯವಿಲ್ಲ.

ಇಂದು ಹಣ ಹೂಡಲು ಕೇವಲ ರಿಲಯನ್ಸ್ ಮಾತ್ರ ಮುಂದೆ ಬಂದಿಲ್ಲ. ಬದಲಾಗಿ ಹಲವು ದೇಶ ವಿದೇಶದ ಸಂಸ್ಥೆಗಳು ಕನ್ನಡ ಚಿತ್ರರಂಗದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಇದು ಕನ್ನಡದ ಕೆಲ ನಿರ್ದೇಶಕರಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದ್ದು, ಕನ್ನಡ ನೋಡುಗರಿಗೆ ಇನ್ನಷ್ಟು ಸದಭಿರುಚಿಯ ಚಿತ್ರ ನೀಡಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಘುನಾಥ್ ಎಂಬ ಉದ್ಯಮಿ ಕನ್ನಡದ 'ಆಕ್ಸಿಡೆಂಟ್' ಚಿತ್ರ ನಿರ್ಮಿಸಿದ್ದರು. ಅಂತೆಯೇ 'ವೆಂಕಟ ಇನ್ ಸಂಕಟ' ಚಿತ್ರವನ್ನು ಉದ್ಯಮಿ ನರೇಂದ್ರ ಮಂಗಲಾನಿ ಮಾಡಿದ್ದರು. ಇದೀಗ ಆ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬೈನ ಮಾವೆರಿಕ್ ಸಂಸ್ಥೆ 'ಹೌಸ್ ಫುಲ್' ಚಿತ್ರವನ್ನು, ಸಿನರ್ಜಿ ಇಮೇಜಸ್ ಸಂಸ್ಥೆ 'ಗೌತಮ್' ಚಿತ್ರವನ್ನು ಹಾಗೂ ಸಾಫ್ಟ್ ವೇರ್ ಯುವಕರ ತಂಡವೊಂದು '35/100 ಜಸ್ಟ್ ಪಾಸ್' ಚಿತ್ರ ನಿರ್ಮಿಸಿ ಉತ್ತಮ ಅಭಿಪ್ರಾಯ ಪಡೆದಿದೆ. ಇದೇ ಸಂದರ್ಭದಲ್ಲಿ ಸಾಫ್ಟ್‌ವೇರ್ ಉದ್ಯಮಿ ಹರ್ಷರಾಮ್ ನಿರ್ಮಿಸಿದ ಚಿತ್ರ 'ಬೆಟ್ಟದ ಪುರದ ದಿಟ್ಟ ಮಕ್ಕಳು' ಚಿತ್ರವನ್ನು ಮರೆಯುವಂತಿಲ್ಲ. ಮುರುಳೀಧರ ಹಾಲಪ್ಪ ಅವರ 'ಸೈನೈಡ್' ಇವುಗಳ ಪಟ್ಟಿಯನ್ನೇ ಸೇರುತ್ತದೆ.

ಉಳಿದಂತೆ ಶ್ರೀಷಕುಮಾರ್ ಮತ್ತು ತಂಡದ 'ಸಿಹಿಮುತ್ತು' ಶೀಘ್ರವೇ ಪ್ರೇಕ್ಷಕರಿಗೆ ಸಿಗಲಿದೆ. ಚೆನ್ನೈ ಮೂಲದ ಸಾಯಿಮೇರು ಹೆಸರಿನ ಸಂಸ್ಥೆ ಕೂಡ ಕನ್ನಡದಲ್ಲಿ 'ಪುಟ್ಟ' ಎಂಬ ಹೆಸರಿನ ಚಿತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಇವುಗಳಲ್ಲಿ ಇದೀಗ ರಿಲಯನ್ಸ್ ಆರಂಭಿಸಿರುವ ಎಂ.ಎಸ್. ಸತ್ಯು ಅವರ 'ಇಜ್ಜೋಡು' ಈ ವಾರ ತೆರೆಕಾಣುತ್ತಿದೆ. ಬೆಂಗಳೂರಿನ 5 ಚಿತ್ರ ಮಂದಿರ ಸೇರಿದಂತೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಈ ಬೆಳವಣಿಗೆ ಕನ್ನಡ ಕಲಾವಿದರ ಪಾಲಿಗೆ ವಿಶೇಷ ಅವಕಾಶವನ್ನು ತೆರೆದಿಡುವಲ್ಲಿ ಸಂಶಯವಿಲ್ಲ ಎನ್ನುತ್ತಿದೆ ಚಿತ್ರರಂಗ. ಆದರೂ, ಸದಭಿರುಚಿಯ, ಗುಣಮಟ್ಟದ ಚಿತ್ರಗಳನ್ನು ಮಾಡುವ ಕೆಲಸಕ್ಕೂ ಮುಂದಾಗಬೇಕು ಎಂಬುದು ಕೂಡಾ ಅಷ್ಟೇ ನಿಜ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ಆಕ್ಸಿಡೆಂಟ್, ಇಜ್ಜೋಡು, ರಿಲಯನ್ಸ್, ಹೌಸ್ ಫುಲ್