ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ನನ್ನ ಕನಸು: ತಾಯಿಯಾಗಿ ಕನ್ನಡಕ್ಕೆ ಮರಳಿದ ಸಿತಾರಾ (Nanu Nanna Kanasu | Sithara | Kannada Cinema | Amoolya | Prakash Rai)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಡಾ. ವಿಷ್ಣು ವರ್ಧನ್ ಜತೆ ಹಾಲುಂಡ ತವರು ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಗಮನ ಸೆಳೆದಿದ್ದ ನಟಿ ಸಿತಾರಾ ಚಿತ್ರರಂಗಕ್ಕೆ ಸರಿಯಾಗಿ ಪರಿಚಯವಾಗಿದ್ದೂ ಆಗಲೇ. ಆದರೆ ನಂತರ ಕನ್ನಡದಲ್ಲಿ ಉತ್ತಮ ಅವಕಾಶ ಸಿಗದ ಕಾರಣ ಕನ್ನಡಕ್ಕೆ ಬಂದಿರಲಿಲ್ಲ. ಆದರೀಗ ಇವರು ಮತ್ತೆ ಬಂದಿದ್ದಾರೆ.

ಅಳುಮುಂಜಿ ಪಾತ್ರಕ್ಕೆ ಶ್ರುತಿ ನಂತರ ಹೇಳಿ ಮಾಡಿಸಿದ ಮುಖ ಸಿತಾರಾ ಅವರದ್ದು. ವಿನಯ, ಸರಳತೆ, ಮುಗ್ಧತೆಯ ಪ್ರತಿರೂಪದಂತಿರುವ ಪಾತ್ರಗಳಿಗೆ ಸಿತಾರಾ ಸರಿಯಾಗಿ ಹೊಂದುತ್ತಿದ್ದರು. ಅಂಥಹ ಪಾತ್ರಗಳ ಮೂಲಕವೇ ಕಡಿಮೆ ಚಿತ್ರಗಳಲ್ಲೇ ಕನ್ನಡ ನಾಡಿನ ಹೆಂಗಳೆಯರ ಗಮನ ಸೆಳೆದಿದ್ದ ಈ ನಟಿ ಇತ್ತೀಚೆಗೆ ಅಷ್ಟಾಗಿ ಕಾಣಸಿಗುತ್ತಿರಲಿಲ್ಲ. ಆದರೆ ನಮ್ಮ ಕನ್ನಡದ ಪ್ರಕಾಶ್ ರೈ ಕನ್ನಡಿಗರಿಗಾಗಿ, ಕನ್ನಡಕ್ಕಾಗಿ ನಿರ್ದೇಶಿಸುತ್ತಿರುವ 'ನಾನೂ ನನ್ನ ಕನಸು' ಚಿತ್ರಕ್ಕೆ ಸಿತಾರಾ ಅವರನ್ನು ಕರೆತಂದಿದ್ದಾರೆ. ಚಿತ್ರದಲ್ಲಿ ಸಿತಾರಾ ಪ್ರಕಾಶ್ ರೈ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಇವರಿಬ್ಬರ ಮಗಳಾಗಿ ಅಮೂಲ್ಯಾ ನಟಿಸುತ್ತಿದ್ದಾರೆ.

ಅಂತೂ ಕಳೆದ ಕೆಲ ಸಮಯದಿಂದ ಕನ್ನಡದಲ್ಲಿ ಉತ್ತಮ ಅವಕಾಶಕ್ಕೆ ಕರೆ ಬರದೇ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದ ಸಿತಾರಾ ಈಗ ಕನ್ನಡಕ್ಕೆ ಮರಳಿದ್ದಾರೆ. ಈ ನಡುವೆ ಕೆಲ ಅವಕಾಶ ಹುಡುಕಿ ಬಂದರೂ ಅವರೇ ತಿರಸ್ಕರಿಸಿದ್ದರು. ಕಾರಣ ಅವು ಅಷ್ಟು ಉತ್ತಮವಾಗಿರಲಿಲ್ಲವಂತೆ. ಕೊನೆಗೂ ಪ್ರಕಾಶ್ ನಟನೆ ಹಾಗೂ ನಿರ್ದೇಶನ ಅತ್ಯುತ್ತಮ ಎಂಬ ಭಾವನೆಯಿಂದ ಇವರು ಮತ್ತೊಮ್ಮೆ ಯೋಚಿಸದೇ ಒಪ್ಪಿಕೊಂಡಿದ್ದಾರೆ. ಕನ್ನಡದಲ್ಲಿ ಮತ್ತೊಬ್ಬ ಉತ್ತಮ ತಾಯಿಯ ಆಗಮನದ ನಿರೀಕ್ಷೆ ಎಲ್ಲರದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿತಾರಾ, ನಾನು ನನ್ನ ಕನಸು, ಕನ್ನಡ ಸಿನಿಮಾ, ಪ್ರಕಾಶ್ ರೈ, ಅಮೂಲ್ಯ