ದಶಕದ ಹಿಂದೆ ಟಿವಿ ವೀಕ್ಷಕರಿಗೆ ಐ ಲವ್ ಯೂ ರಸ್ನಾ ಎಂದು ಮುದ್ದಾಗಿ ಹೇಳುತ್ತಿದ್ದ ಹುಡುಗಿಯನ್ನು ಖಂಡಿತ ನೆನಪಿರಬಹುದು. ಆ ಜಾಹಿರಾತಿನ ಮೋಡಿಗೆ ಒಳಗಾಗದಿದ್ದವರೇ ಕಡಿಮೆ. ಅಂತಹ ಚುಂಬಕ ಶಕ್ತಿಯಿತ್ತು ಆ ಮುದ್ದು ಮುಖದ ಅಂಕಿತಾ ಎಂಬ ಹುಡುಗಿಗೆ. ಆ ಹುಡುಗಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಕೆಲವು ಚಿತ್ರಗಳಲ್ಲೂ ನಟಿಸಿದ್ದಾಳೆ ಕೂಡಾ. ಆದರೆ ಅದ್ಯಾಕೋ ಆ ರಸ್ನಾ ಜಾಹಿರಾತು ತಂದುಕೊಟ್ಟ ಜನಪ್ರಿಯತೆ ಆಕೆಗೆ ಸಿನಿಮಾದಿಂದ ದಕ್ಕಲೇ ಇಲ್ಲ. ಹೀಗಾಗಿ ಆಕೆ ಮೊರೆಹೋಗಿದ್ದು ಕಾಮಸೂತ್ರಕ್ಕೆ!
ಹೌಹಾರಬೇಡಿ. ಹೌದು. ಈ ಅಂಕಿತಾ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಶ್ರೀರಾಮ್ ಚಿತ್ರದಲ್ಲಿ ಸೊಂಟ ಬಳುಕಿಸಿದ್ದಳು. ತಮಿಳು ತೆಲುಗಿನಲ್ಲೂ ಹಲವು ಚಿತ್ರಗಳಲ್ಲಿ ಹೆಜ್ಜೆ ಹಾಕಿದ್ದಳು. ಆದರೂ, ಈಕೆಯ ನಟನೆಗಿಂತ ಮೈಮಾಟವೇ ಹೆಚ್ಚು ಸುದ್ದಿಯಾಯಿತು. ಹಾಟ್ ದೃಶ್ಯಾವಳಿಗಳಲ್ಲೂ ಸಾಕಷ್ಟು ಮೈಚಳಿ ಬಿಟ್ಟು ನಟಿಸಿದ ಅಂಕಿತಾಗೆ ಆ ಮೂಲಕವೂ ಅಂಥಾ ಅದೃಷ್ಟವೇನೂ ಖುಲಾಯಿಸಲಿಲ್ಲ. ಹಾಗಾಗಿಯೋ ಏನೋ, ಇದೀಗ ಮತ್ತೆ ಈಕೆ ಜಾಹಿರಾತು ಪ್ರಪಂಚಕ್ಕೆ ಕಾಲಿಟ್ಟಿದ್ದಾಳೆ. ಅದೂ ಕೂಡಾ ಅಂತಿಂಥ ಜಾಹಿರಾತಲ್ಲ. ಕಾಮಸೂತ್ರದ ಜಾಹಿರಾತು!
ಅಂತೂ ಮತ್ತೆ ಅಂಕಿತಾಳ ಜಾಹಿರಾತು ಲೋಕ ಈ ಕಾಮಸೂತ್ರದ ಮೂಲಕ ಶುಭಾರಂಭವಾಗಲಿದೆ. ಚಿತ್ರರಂಗದಲ್ಲಿ ದಕ್ಕದ ಯಶಸ್ಸು ಮತ್ತೆ ಆಕೆಗೆ ಜಾಹಿರಾತು ಲೋಕದಲ್ಲಿ ದಕ್ಕುತ್ತಾ ಎಂಬುದನ್ನು ಕಾದು ನೋಡಬೇಕು. ಅಂಕಿತಾಗೆ ಆಲ್ ದಿ ಬೆಸ್ಟ್.