ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿನಿಮಾ ಕಲಿಕೆಗೆ ಬಂತು ಸ್ಯಾಂಡಲ್‌ವುಡ್ ಫಿಲಂ ಇನ್ಸ್‌ಟಿಟ್ಯೂಟ್ (Sandalwood Film Institute | Kannada Cinema | Shivaram)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗವನ್ನು ಇನ್ನಷ್ಟು ಉತ್ತಮ ಪಡಿಸಲು ಸಾಕಷ್ಟು ಮಂದಿ ತರಹೇವಾರಿ ಪ್ರಯತ್ನ ನಡೆಸಿದ್ದಾರೆ. ಏಕೆಂದರೆ ಚಿತ್ರರಂಗ ಒಂದು ಪ್ರಬಲ ಮಾಧ್ಯಮ. ಈ ರಂಗದಲ್ಲಿ ಕೆಲಸ ಮಾಡಬೇಕು ಎಂದು ಬಹಳಷ್ಟು ಜನರಿಗೆ ಆಸೆಯಿರುತ್ತದೆ. ಕಲಾವಿದನಾಗಿ, ತಂತ್ರಜ್ಞನಾಗಿ ಬೆಳೆಯಬೇಕು ಎಂದುಕೊಂಡಾಗ ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಸೂಕ್ತ ತರಬೇತಿ ಇಲ್ಲದೆ ಯಾವುದೇ ರಂಗದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಂಥವರಿಗಾಗಿ ಕನ್ನಡದಲ್ಲೊಂದು ಅವಕಾಶ ಸೃಷ್ಟಿಯಾಗಿದೆ. ಅದೇ ಬೆಂಗಳೂರಿನ ವಿಜಯನಗರದಲ್ಲಿ ಆರಂಭವಾಗಿರುವ ಸ್ಯಾಂಡಲ್‌ವುಡ್ ಫಿಲಂ ಇನ್ಸ್‌ಟಿಟ್ಯೂಟ್' ಎಂಬ ಸಂಸ್ಥೆ.

ಪ್ರಪುಲ್ಲ ಮುಖಿ ಶ್ರೀನಿವಾಸ್ ಹಾಗೂ ಪ್ರದೀಪ್ ಅವರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದನ್ನು ಉದ್ಘಾಟಿಸಿದವರು ಸಹ ಪ್ರಮುಖ ವ್ಯಕ್ತಿಯೇ. ಅವರೇ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ. ಇವರೊಂದಿಗೆ ಅಂದು ನಟ ಎಸ್.ಶಿವರಾಂ ಸಹ ಇದ್ದರು. ಏಕೆಂದರೆ ಅವರು ಈ ತರಬೇತಿ ಶಾಲೆಯ ಪ್ರಾಂಶುಪಾಲರು.

ಅಂದು ಸಮಾರಂಭದಲ್ಲಿ ಮಾತನಾಡಿದ ಶಿವರಾಂ, ಇಂಥ ಶಾಲೆಯೊಂದನ್ನು ಆರಂಭಿಸಬೇಕೆಂಬ ಆಸೆ ನನಗೆ ಮೊದಲಿನಿಂದ ಇತ್ತು. ಸದ್ಯ ಈ ಶಾಲೆಯಲ್ಲಿ ದುಡಿಯುವ ಅವಕಾಶ ಸಿಕ್ಕಿದೆ ಎಂದರು. ಅನನುಭವಿಗಳಿಂದ ಚಿತ್ರರಂಗ ಅವನತಿಯತ್ತ ಸಾಗಿದೆ. ಚಿತ್ರರಂಗಕ್ಕೆ ಬರುವ ಮೊದಲು ಇಲ್ಲಿ ತರಬೇತಿ ಪಡೆದುಕೊಂಡು ಬಂದರೆ ಉತ್ತಮ ಚಿತ್ರಗಳನ್ನು ಮತ್ತೆ ಕಾಣಬಹುದಾಗಿದೆ ಎಂದೂ ಅಭಿಪ್ರಾಯಪಟ್ಟರು.

ಈ ಸಂಸ್ಥೆಯಲ್ಲಿ ನಿರ್ದೇಶನ, ಅಭಿನಯ, ಛಾಯಾಗ್ರಹಣ, ಸಂಕಲನ, ಚಿತ್ರಸಾಹಿತ್ಯ, ಸಾಹಸ, ಸಂಗೀತ ಮೊದಲಾದ ವಿಷಯಗಳ ಬಗ್ಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಲಾಗುವುದು. ಪ್ರತಿ ಕೋರ್ಸಿನಲ್ಲಿ 20 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಅವರು ಪರಿಣಿತರಾಗುವುದಕ್ಕೆ ಬೇಕಾದ ಎಲ್ಲ ಸಹಾಯಗಳನ್ನು ಮಾಡಲಾಗುವುದು. ಬಡವರಿಗೆ, ಮಹಿಳೆಯರಿಗೆ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ ಎನ್ನುತ್ತಾರೆ ವ್ಯವಸ್ಥಾಪಕಿ ಪ್ರಪುಲ್ಲಮುಖಿ ಶ್ರೀನಿವಾಸ್.

ಆರ್.ಟಿ.ರಮಾ, ಎಚ್.ಆರ್.ಭಾರ್ಗವ, ಪಿ.ಎಚ್.ವಿಶ್ವನಾಥ್, ಗೀತಪ್ರಿಯ, ವಿ.ಮನೋಹರ್, ನಾಗತಿಹಳ್ಳಿ ಚಂದ್ರಶೇಖರ್, ಸುನಿಲ್ ಕುಮಾರ್ ದೇಸಾಯಿ, ಸುಚೇಂದ್ರ ಪ್ರಸಾದ್, ದೊಡ್ಡರಂಗೇಗೌಡ ಹಾಗೂ ಭಾರ್ಗವಿ ನಾರಾಯಣ್ ಅಂಥ ಚಲನಚಿತ್ರರಂಗದಲ್ಲಿ ಪರಿಣಿತರು ಇಲ್ಲಿ ಉಪನ್ಯಾಸಕರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಯಾಂಡಲ್ವುಡ್ ಫಿಲಂ ಇನ್ಸ್ಸ್ಟಿಟ್ಯೂಟ್, ಕನ್ನಡ ಸಿನಿಮಾ, ಶಿವರಾಂ ಸ್ಯಾಂಡಲ್ವುಡ್ ಫಿಲಂ ಇನ್ಸ್ಸ್ಟಿಟ್ಯೂಟ್, ಕನ್ನಡ ಸಿನಿಮಾ, ಶಿವರಾಂ