ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇ.ಕೃಷ್ಣಪ್ಪರಿಗೆ 'ಗೆಲ್ಲುವ ಚಿತ್ರ ಇಲ್ಲವಾಯಿತಲ್ಲ' ಎಂಬ ಕೊರಗು (E. Krishnappa | Mungaru Male | Kannada Cinema | Nanjanagudu Nanjunda)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
'ಇದು ಕನ್ನಡ ಚಿತ್ರರಂಗಕ್ಕೆ ಗ್ರಹಣ ಕಾಲ. ಯಾವ ಚಿತ್ರವೂ ಗೆಲ್ಲುತ್ತಿಲ್ಲ. ಜನ ಚಿತ್ರಮಂದಿರಕ್ಕೇ ಬರುತ್ತಿಲ್ಲ' ಇಂಥದ್ದೊಂದು ವಿಷಾದದ ಮಾತು ಹೊರಬಿದ್ದದ್ದು ಚಿತ್ರ ನಿರ್ಮಾಪಕ ಇ. ಕೃಷ್ಣಪ್ಪ ಅವರ ಬಾಯಿಂದ.

ಹೌದು. ಇದು ಅನೇಕ ಮಂದಿ ಆಡಲು ಬಯಸುವ ಆದರೆ ಅಡಲಾಗದ ಒಂದು ಮಾತು. ಒಂದಿಷ್ಟು ಕಹಿ ಅನ್ನಿಸಿದರೂ, ಸ್ಯಾಂಡಲ್‌ವುಡ್ಡಿನ ಅಸಲಿ ಸತ್ಯವಿದೆ. ಇನ್ನು ಅವರು ಮಾತನ್ನಾಡಿದ ನಂತರ ಹೇಳಿದ್ದ ತಮ್ಮ ಹೊಸ ಚಿತ್ರ 'ನಂಜನಗೂಡು ನಂಜುಂಡ' ಬಗ್ಗೆ. ಹಾಸ್ಯಚಿತ್ರವಾಗಿರುವ ಇದರ ಮೂಲಕವಾದರೂ ಜನ ಚಿತ್ರಮಂದಿರಕ್ಕೆ ಬರುವಂತಾಗಲಿ ಎಂದರು.

ಇದೇ ನೆಲದಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಜನರನ್ನು ಚಿತ್ರಮಂದಿರಕ್ಕೆ ಎಳೆತಂದಿದ್ದ ಇದೇ ನಿರ್ಮಾಪಕರ ಬಾಯಿಂದ ಇಂಥದ್ದೊಂದು ಮಾತು ಬಂದಿದ್ದು ನಿಜಕ್ಕೂ ಅಚ್ಚರಿದಾಯಕ. ಹೌದು. ಅವರು ಹೀಗೆಂದದ್ದು ನಂಜನಗೂಡು ನಂಜುಂಡ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ. ಅವರ ಮಾತಲ್ಲಿ ಬೇಸರವಿತ್ತು. ಚಿತ್ರರಂಗದ ಬಗ್ಗೆ ಅಪಾರ ನೋವಿತ್ತು, ಸಂಕಟವಿತ್ತು.

ಇದಕ್ಕೆ ಪುಷ್ಠಿ ನೀಡುವಂತೆ ಮಾತನಾಡಿದ ನಟಿ ತಾರಾ, ಕೃಷ್ಣಪ್ಪನವರ ಮಾತು ನೂರಕ್ಕೆ ನೂರು ಸತ್ಯ ಎಂದರು. ಪಯಣ ಚಿತ್ರದ ಮೂಲಕ ಹಿರಿತೆರೆಗೂ ಕಾಲಿಟ್ಟ ನಾಯಕ ರವಿಶಂಕರ್ ಮಾತನಾಡುತ್ತಾ, ಇಂದು 'ಆಪ್ತರಕ್ಷಕ' ಚಿತ್ರಕ್ಕೆ ಸಿಕ್ಕಿರುವ, ಸಿಗುತ್ತಿರುವ ಗೌರವ ಎಲ್ಲ ಚಿತ್ರಗಳಿಗೂ ಸಿಗಬೇಕು. ನಮ್ಮ ಚಿತ್ರದಲ್ಲಿ ಜನಕ್ಕೆ ಇಷ್ಟವಾಗುವ ಎಲ್ಲ ಅಂಶಗಳೂ ಇವೆ. ಗೆಲ್ಲಬೇಕು ಎಂಬ ಹಂಬಲ ಹಾಗೂ ನಿರೀಕ್ಷೆಯಿಂದ ಸಿನಿಮಾ ಮಾಡಿದ್ದೇವೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇ ಕೃಷ್ಣಪ್ಪ, ಮುಂಗಾರು ಮಳೆ, ಕನ್ನಡ ಸಿನಿಮಾ, ನಂಜನಗೂಡು ನಂಜುಂಡ