ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕುವೆಂಪು 'ನನ್ನ ಗೋಪಾಲ' ಬೆಳ್ಳಿತೆರೆಗೆ (Kannada Cinema | Kuvempu | Cinema | Nanna Gopal)
ಸುದ್ದಿ/ಗಾಸಿಪ್
Bookmark and Share Feedback Print
 
1926ರ ಸಂದರ್ಭ ಅಂದು ರಾಷ್ಟ್ರಕವಿ ಕುವೆಂಪು ಅವರಿಂದ ರಚಿತವಾಗಿ ದೇಶದ ಹಲವು ನಗರಗಳಲ್ಲಿ 350ಕ್ಕೂ ಹೆಚ್ಚು ಪ್ರದರ್ಶನ ಕಂಡ ಕನ್ನಡದ ಮಕ್ಕಳ ನಾಟಕವೊಂದು ಚಿತ್ರವಾಗಿ ಮೂಡಿ ಬರುತ್ತಿದೆ.

ಈ ಮಕ್ಕಳ ನಾಟಕ ಈಗಾಗಲೇ ಕಿರುಚಿತ್ರವಾಗಿ ಪ್ರೇಕ್ಷಕರ ಮನ ಗೆದ್ದಿದ್ದು, ಇದನ್ನು ಹಿರಿ ತೆರೆಗೆ ತರುವ ಯತ್ನವನ್ನು ರಂಗಕರ್ಮಿ ಸಿ. ಲಕ್ಷ್ಮಣ್ ಮಾಡುತ್ತಿದ್ದಾರೆ. ಹೌದು ಚಿತ್ರದ ಹೆಸರು, ನಾಟಕದ ಹೆಸರು ಎರಡೂ ಒಂದೇ "ನನ್ನ ಗೋಪಾಲ'. ರಂಗ ಕಹಳೆ ತಂಡ ಈ ನಾಟಕವನ್ನು 1987ರಿಂದ ನಿರಂತರವಾಗಿ ಪ್ರದರ್ಶಿಸುತ್ತ ಬಂದಿದೆ. ಇದೀಗ ಚಿತ್ರವಾಗಿಸುವ ಸಾಹಸಕ್ಕೂ ಮುಂದಾಗಿದೆ.

ತಮ್ಮ ಹಾಗೂ ಗೋಪಾಲನ ನಡುವಿನ ಎರಡೂವರೆ ದಶಕದ ಅನುಭವವನ್ನು ಅವರು ಈ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಳೆದ ವಾರ ಚಿತ್ರೀಕರಣ ಆರಂಭವೂ ಆಗಿ ಬಿಟ್ಟಿದೆ. ಸರಕಾರದ ಸಬ್ಸಿಡಿ ಪಡೆದು ಬಿಡುಗಡೆಯಾದ ಮಸಣದ ಮಕ್ಕಳು ಚಿತ್ರ ನಿರ್ಮಿಸಿ ಅನುಭವ ಹೊಂದಿರುವ ಲಕ್ಷ್ಮಣ್ ಈ ಚಿತ್ರಕ್ಕೂ ತಮ್ಮ ಶ್ರಮವನ್ನು ಹಾಕಲಿದ್ದಾರೆ.

1995ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ "ನನ್ನ ಗೋಪಾಲ' ಇದುವರೆಗೂ 10.5 ಸಾವಿರ ಪ್ರತಿ ಮಾರಾಟ ಕಂಡಿದ್ದು, ಇದರ ಜನಪ್ರಿಯತೆಯ ಅಲೆಯನ್ನು ಆಧರಿಸಿಯೇ ಚಿತ್ರ ತೆರೆ ಕಾಣುತ್ತಿದೆ. ಚಿತ್ರ 19 ರಿಂದ 20 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಾಣಗೊಳ್ಳುತ್ತಿದೆ.
ಹಿರಿಯ ನಟ ರಾಜೇಶ್ ಇದರಲ್ಲಿ ನಟಿಸುತ್ತಿದ್ದಾರೆ. ನಟಿ ಶ್ರುತಿ ಪಾಲ್ಗೊಳ್ಳುವ ಸುದ್ದಿಯೂ ಕೇಳಿ ಬಂದಿದೆ. ಉಳಿದಂತೆ ಗೌರವ ಕಲಾವಿದರಾಗಿ ರೆಬೆಲ್ ಸ್ಟಾರ್ ಅಂಬರೀಶ್, ರಾಜಕಾರಣಿಗಳಾದ ಡಿ. ಬಿ. ಚಂದ್ರೇಗೌಡ, ಮೋಟಮ್ಮ, ಕವಿ ದೊಡ್ಡರಂಗೇಗೌಡ ನಟಿಸಲಿದ್ದಾರೆ.. ಮಾ. ಅನಿಲ್ ಕುಮಾರ್, ಓಹಿಲೇಶ್, ಸುರೇಶ್ ಅನಗಳ್ಳಿ, ಎನ್.ಆರ್. ಶ್ರೀನಾಥ್, ಬಿ.ವಿ. ರಾಜಾರಾಂ ಅಭಿನಯಿಸುತ್ತಿದ್ದಾರೆ.

ಲಾಂಗು, ಮಚ್ಚುಗಳ ಕಥೆ ಕೇಳಿ ತಲೆ ಚಿಟ್ಟು ಹಿಡಿಸಿಕೊಂಡವರಿಗೆ ಇದೊಂದು ವಿಭಿನ್ನ ಚಿತ್ರವಾಗಿ ಸಿಗಲಿದೆ. ಮಕ್ಕಳಿಗೆ ಈ ಮೂಲಕ ನೀತಿ ಪಾಠ ಹೇಳುವ ಕಾರ್ಯವೂ ಆಗಲಿದೆ. ಸಕುಟುಂಬ ಸಪರಿವಾರ ಸಮೇತರಾಗಿ ಚಿತ್ರ ವೀಕ್ಷಿಸುವವರಿಗೆ ಇದೊಂದು ಹಬ್ಬದೂಟ ನೀಡುವಲ್ಲಿ ಸಂಶಯವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕುವೆಂಪು, ನನ್ನ ಗೋಪಾಲ, ಸಿನಿಮಾ, ಮಕ್ಕಳ ನಾಟಕ, ಕನ್ನಡ ಸಿನಿಮಾ