ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇ 7ಕ್ಕೆ ನಾಗತಿಹಳ್ಳಿ 'ನೂರು ಜನ್ಮಕು' ತೆರೆಗೆ (Nagathi halli | Nooru Janmaku | Kannada Cinema | Mano murthy)
ಸುದ್ದಿ/ಗಾಸಿಪ್
Bookmark and Share Feedback Print
 
NRB
ವಿನಯ್ ಲಾಡ್ ಪ್ರೊಡಕ್ಷನ್‌ನ ಮಹತ್ವದ ಪ್ರೇಮ ಕತೆ "ನೂರು ಜನ್ಮಕು' ಮೇ 7ಕ್ಕೆ ತೆರೆ ಕಾಣುತ್ತಿದೆ. ನಟ ಸಂತೋಶ್, ನಟಿ ಐಂದ್ರಿತಾ ರೇ ಅಭಿನಯದ ಈ ವಿಭಿನ್ನ ಪ್ರೇಮಕಥೆಯನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ.

ಸಾಕಷ್ಟು ಪ್ರೇಮಕಥೆಗಳ ಮೂಲಕ ಯಶಸ್ವಿ ನಿರ್ದೇಶಕ ಎನಿಸಿರುವ ನಾಗತಿಹಳ್ಳಿ ಅವರ ಈ ಚಿತ್ರಕ್ಕೆ ಪ್ರೇಮಿ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಲಭಿಸಿದೆ. ಹೀಗಿದ್ದ ಮೇಲೆ ಈ ಚಿತ್ರ ಜನರನ್ನು ಚಿತ್ರಮಂದಿರದವರೆಗೆ ಎಳೆತರುವಲ್ಲಿ ಸಂಶಯವೇ ಇಲ್ಲ.

ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರವೂ ಸೇರಿದಂತೆ ರಾಜ್ಯಾದ್ಯಂತ ಹತ್ತಾರು ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ತೆರೆ ಕಣುವ ಈ ಚಿತ್ರಕ್ಕೆ ಸಾಕಷ್ಟು ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಕನ್ನಡದಲ್ಲಿ ಉತ್ತಮ ಚಿತ್ರಗಳ ಬರ ಎದುರಾಗಿದ್ದು, ಈ ಬರ ನೀಗಿಸುವ ಕಾರ್ಯವನ್ನು ಈ ಚಿತ್ರ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಯುವ ನಟರಿಗೆ ಸದಾ ಮಣೆ ಹಾಕುವ ನಾಗತಿಹಳ್ಳಿ ತಮ್ಮ ಸಂಪ್ರದಾಯವನ್ನು ಈ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಯುವ ನಟ-ನಟಿಗೆ ಅವಕಾಶ ನೀಡಿ ಮತ್ತೊಂದು ಸತ್ವ ಪರೀಕ್ಷೆಗೆ ಸಿದ್ಧವಾಗಿದ್ದಾರೆ.

ಬಹು ನಿರೀಕ್ಷೆಯ ಈ ಚಿತ್ರ ಯಶ ಕಂಡು ಕನ್ನಡದಲ್ಲಿ ಹೊಸ ಅಲೆ ಸೃಷ್ಟಿಸುವುದೇ ಎಂಬುದನ್ನು ಪ್ರೇಕ್ಷಕರು ಹೇಳಬೇಕಿದೆ. ನಿರೀಕ್ಷೆ ಸಾಕಷ್ಟು ಇಡಲಾಗಿದ್ದು, ಗೆಲುವು - ಸೋಲು ತೆರೆಕಂಡ ನಂತರವೇ ನಿರ್ಧಾರವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾಗತಿಹಳ್ಳಿ, ನೂರು ಜನ್ಮಕು, ಕನ್ನಡ ಸಿನಿಮಾ, ಮನೋಮೂರ್ತಿ