ಸಿನಿಮಾ ಮಾಡಲು ಎಷ್ಟು ಖರ್ಚಾಗುತ್ತೆ ಎಂಬ ಪ್ರಶ್ನೆಗೆ ಉತ್ತರ ಲಕ್ಷ ಕೋಟಿಗಳಲ್ಲೇ ಮುಗಿಯುತ್ತದೆ. ಹಾಗಾದರೆ ಸಾವಿರದ ಲೆಕ್ಕವೆಲ್ಲಿ ಹೇಳಿ. ನಟ ನಟಿಯರ ಲೆಕ್ಕವೇ ಲಕ್ಷ, ಕೋಟಿಗಳಲ್ಲಿರುವಾಗ ಸಿನಿಮಾದ ಮಾತೆಲ್ಲಿ ಹೇಳಿ ಅನ್ನಬಹುದು ನಿಜ. ಆದರೆ ಇಲ್ಲೊಂದು ಸಿನಿಮಾ ಸಾವಿರದ ಲೆಕ್ಕದಲ್ಲಿ ನಿರ್ಮಾಣಗೊಂಡಿದೆ. ನವಿಲಾದವರು ಚಿತ್ರ ಕೇವಲ 35 ಸಾವಿರ ರೂಪಾಯಿಗಳಲ್ಲಿ ನಿರ್ಮಾಣಗೊಂಡಿದೆ ಅಂದರೆ ನಂಬಲೇಬೇಕು.
ಹೌದು. ಇದು ಸತ್ಯ. ಈ ಚಿತ್ರದ ಹೆಸರು ನವಿಲಾದವರು. ನಿರ್ದೇಶಕ ಗಿರಿರಾಜ್ ಅವರು ಹೀಗೊಂದು ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಸ್ಪೈನ್‌ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್‌ನಲ್ಲಿಯೂ ಪ್ರದರ್ಶನಗೊಳ್ಳಲಿದೆ!
ಅಪಾರ ದೊಡ್ಡ ಪ್ರಮಾಣದ ಸ್ನೇಹಿತರ ವಲಯ ಹೊಂದಿರುವುದೇ ಈ ಬಜೆಟ್ಟಿನಲ್ಲಿ ಸಿನಿಮಾ ನಿರ್ಮಿಸಲು ಸಹಾಯವಾಯಿತು ಎನ್ನುವುದು ಗಿರಿರಾಜ್ ಅಭಿಪ್ರಾಯ. ಒಬ್ಬೊಬ್ಬ ಸ್ನೇಹಿತರೂ ನೀಡಿದ ಸಹಕಾರದಿಂದ ಚಿತ್ರ ಸಿದ್ಧವಾಗಿದೆ. ಈ ಸಿನಿಮಾ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಡಿಜಿಟಲ್ ವೀಡಿಯೋ ಕ್ಯಾಮರಾ ಬಳಸಲಾಗಿದೆ. ಬೆಳಕಿಗೆ ನೆರವಾದದ್ದು ಟೇಬಲ್ ಲ್ಯಾಂಪ್. ಪೆರೋಲ್ ಚಿತ್ರದಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ನಟ ಪ್ರದೀಪ್ ಚಿತ್ರದ ನಿರ್ಮಾಣ ಸಾಹಸ ಹಾಗೂ ಕಥೆ ಕೇಳಿ ಉಚಿತವಾಗಿ ಅಭಿನಯಿಸಿದ್ದಾರೆ.
ಇನ್ನೋರ್ವ ನಟ ಅಶ್ವತ್ಥ್ ಕುಮಾರ್ ತಮ್ಮ ಖರ್ಚಿನಲ್ಲೇ ಬಂದು ಹೋಗಿ ಮಾಡಿದ್ದು ಉಚಿತವಾಗಿ ನಟಿಸಿದ್ದಾರೆ. ಚಿತ್ರ ಇಷ್ಟಾಗಿಯೂ ಅತ್ಯುತ್ತಮವಾಗಿ ಮೂಡಿ ಬಂದಿದೆ. ಚಿತ್ರ ನಿರ್ಮಾಣೋದ್ಯಮದಲ್ಲಿ ಕೋಟಿಗಟ್ಟಲೆ ಸುರಿದು ನಷ್ಟ ಅನುಭವಿಸುತ್ತಿರುವ ಸಂದರ್ಭ ಹೀಗೂ ಮಾಡಿ ತೋರಿಸಬಹುದು ಎಂಬ ಸಾಹಸಕ್ಕೆ ಮಾತ್ರ ಇವರೇ ಸಾಕ್ಷಿ. ಇವರ ಶ್ರಮ, ಆತ್ಮವಿಶ್ವಾಸಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.