ಒಂದೆಡೆ ಪುನಿತ್ ಅಭಿನಯದ ಪ್ರಥ್ವಿ ಗಣಿಧೂಳನ್ನು ಎಬ್ಬಿಸಿದ್ದರೆ, ಗಣೇಶ್ ಉಲ್ಲಾಸ ಉತ್ಸಾಹ ಕೊಂಚ ಉತ್ಸಾಹದಿಂದ ಸಾಗಿದೆ. ನಮ್ಮನ್ನಗಲಿದ ಹಿರಿಯ ನಟ ವಿಷ್ಣು ವರ್ಧನ್ ಅಭಿನಯಿಸಿದ ಕೊನೆಯ ಚಿತ್ರ ಆಪ್ತರಕ್ಷಕ ಸ್ಯಾಂಡಲ್‌ವುಡ್ಡಿಗೆ ಆಪ್ತರಕ್ಷಕನಾಗಿ ಹಿರಿಯಣ್ಣನಂತೆ ಬೆನ್ನಿಗೆ ನಿಂತು ಎಲ್ಲರ ಬೆನ್ನುತಟ್ಟುತ್ತಿದ್ದಾನೆ, ತಟ್ಟಿಸಿಕೊಳ್ಳುತ್ತಿದ್ದಾನೆ.
ಇವೆಲ್ಲಾ ಇನ್ನಷ್ಟು ದಿನ, ತಿಂಗಳು ಚಿತ್ರಪ್ರೇಮಿಗಳನ್ನು ರಂಜಿಸಲಿವೆ. ಆ ನಂತರ ಏನು ಎಂಬ ಪ್ರಶ್ನೆಗೆ ಸಾಲು ಸಾಲು ಚಿತ್ರಗಳ ಆಗಮನವಾಗಲಿರುವುದೇ ಉತ್ತರ. ಬರುವ ಚಿತ್ರದಲ್ಲಿ ಬಹು ನೀರೀಕ್ಷೆ ಹುಟ್ಟಿಸಿರುವ ಚಿತ್ರಗಳು ಶಂಕರ್ ಐಪಿಎಸ್ ಮತ್ತು ತೀರ್ಥ.
MOKSHA
ಹೌದು. ಬಿಂದು ಫಿಲಂಸ್ ಹೊರತರುತ್ತಿರುವ ಶಂಕರ್ ಐಪಿಎಸ್ ಚಿತ್ರದಲ್ಲಿ ನಾಯಕ ದುನಿಯಾ ವಿಜಯ್. ಇದೊಂದು ಆಕ್ಷನ್ ಕಂ ಪ್ರೇಮಕಥಾನಕ. ಪ್ರೀತಿಯ ಜತೆ ಫೈಟು ಸಹ ಇದೆ. ಗುರುಕಿರಣ್, ದಾಸರಿ ಶ್ರೀನಿವಾಸ್ ರಾವ್, ಎಸ್. ಮನೋಹರ್ ಹೆಸರುಗಳು ಕೇಳಿದರೆ ಸಾಕು ಉತ್ತಮ ಹಾಡು ಹಾಗೂ ಛಾಯಾಗ್ರಹಣಗಳಿವೆ ಅಂತ ಎಂಥವರೂ ಊಹಿಸಬಹುದು. ಕೆ. ಮಂಜು ನಿರ್ಮಾಣದ ಎಂ.ಎಸ್. ರಮೇಶ್ ನಿರ್ದೇಶನದಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರ ಶೀಘ್ರವೇ ಹಿರಿ ಪರದೆಯ ಮೇಲೆ ಲಗ್ಗೆ ಇಡುವ ಲಕ್ಷಣಗಳಿವೆ.
ಸದ್ಯವೇ ತೆರೆ ಕಾಣುವ ಇನ್ನೊಂದು ಚಿತ್ರ ತೀರ್ಥ. ಹೌದು, ಸುದೀಪ್ ನಾಯಕನಟರಾಗಿ ಅಭಿನಯಿಸಿರುವ ಈ ಚಿತ್ರವೂ ನೋಡುಗರನ್ನು ಅಪಾರವಾಗಿ ಆಕರ್ಷಿಸುತ್ತಿದೆ. ಶ್ರೀ ಪವಮಾನ ಆರ್ಟ್ಸ್ ಹೊರತಂದಿರುವ ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಸಾಕಷ್ಟು ಸಮಯದ ಹಿಂದೆಯೇ ಈ ಚಿತ್ರ ಬಿಡುಗಡೆಯಾಗಬೇಕಿದ್ದರೂ, ಕಾರಣಾಂತರದಿಂದ ತಡವಾಗಿತ್ತು. ಕುಮಾರ್, ಶ್ರೀರಾಮ್, ಗೋಪಾಲಕೃಷ್ಣ ಹಾಗೂ ರಾಧಾ ಚಿತ್ರದ ನಿರ್ಮಾಪಕರು. ಸಂಗೀತ ಗುರುಕಿರಣ್ ಅವರದ್ದು, ದಾಸರಿ ಶ್ರೀನಿವಾಸ ರಾವ್ ಛಾಯಾಗ್ರಹಣವಿದೆ. ಸಾಧು ಕೋಕಿಲ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ವಹಿಸಿಕೊಂಡಿದ್ದಾರೆ.
ಒಟ್ಟಾರೆ ಈ ಎರಡೂ ಚಿತ್ರಗಳು ಬಹಳ ನಿರೀಕ್ಷೆ ಮೂಡಿಸಿದ್ದು, ತೆರೆ ಮೇಲೆ ಹೇಗೆ ಯಶಸ್ಸು ಕಾಣುತ್ತವೆ ಕಾದು ನೋಡಬೇಕಿದೆ.