ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರಲಿದೆ ಅಪ್ಪು ವೆಂಕಟೇಶರ 'ಒನ್ ಡೇ' (Sandalwood | One Day | Appu Venkatesh)
ಸುದ್ದಿ/ಗಾಸಿಪ್
Bookmark and Share Feedback Print
 
ಒನ್ ಡೇ. ಇದು ಹೊಸ ಚಿತ್ರವೊಂದರ ಹೆಸರು. ಈ ಚಿತ್ರವೀಗ ಸದ್ಯ ಗಾಂಧಿನಗರದಲ್ಲಿ ಕುತೂಹಲ ಸೃಷ್ಟಿಸಿದೆ. ಏಕೆಂದರೆ ಅದರಲ್ಲಿ ನಟಿಸುತ್ತಿರುವವರು ಇನ್ಯಾರೂ ಅಲ್ಲ, ಅಪ್ಪು ವೆಂಕಟೇಶ್!

ಇವರ್ಯಾರಪ್ಪಾ ಅಂತ ತಲೆ ಕೆರೆಯಬೇಡಿ! ಇವರು ಇನ್ಯಾರೂ ಅಲ್ಲ, ನಮ್ಮ ಪುನಿತ್ ರಾಜ್ ಕುಮಾರ್ ಅವರ ಸ್ಟಂಟ್ ಮಾಸ್ಟರ್! ಹೌದು. ಅಪ್ಪು ವೆಂಕಟೇಶ್ ಒಂದು ಸಮಯದಲ್ಲಿ ಇವರು ಡಾ. ರಾಜ್ ಕುಮಾರ್‌ಗೂ ಸ್ಟಂಟ್ ಹೇಳಿಕೊಟ್ಟಿದ್ದರು. ಕನ್ನಡದ ಹಲವು ನಟರಿಗೆ ಇವರ ಕೈಚಳಕವೇ ಸಾಕಷ್ಟು ಯಶಸ್ಸು ತರಿಸಿಕೊಟ್ಟಿದೆ.

ಅನೇಕ ನಟವರ್ಯರಿಗೆ ಸ್ಟಂಟ್ ಹೇಳಿಕೊಡುವ ಈ ಸಾಹಸ ಕಲಾವಿದ ಈಗ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಹೊರಟಿದ್ದಾರೆ. ಚಿತ್ರದ ಹೆಸರು 'ಒನ್ ಡೇ'. 'ಪ್ರೇಮಿಗಾಗಿ ನಾ' ಎಂಬ ಹೆಸರಿನ ಚಿತ್ರವೊಂದರಲ್ಲಿ ಎರಡನೇ ನಾಯಕನಾಗಿ ನಟಿಸಿದ್ದ ಈತ ಈಗ ಪೂರ್ಣ ಪ್ರಮಣದ ನಾಯಕನಾಗಿ ತೆರೆ ಮೇಲೆ ರಂಜಿಸಲು ಬರುತ್ತಿದ್ದಾನೆ. ಬಿ.ಕೆ. ಎಂಟರ್‌ಟೈನರ್ ಬ್ಯಾನರ್ ಅಡಿ ಬರುತ್ತಿರುವ ಈ ಚಿತ್ರದಲ್ಲಿರುವ ಕಲಾವಿದರೆಲ್ಲಾ ಹೊಸಬರಂತೆ. ನಿರ್ಮಾಣ ಕೃಷ್ಣಸ್ವಾಮಿ ಅವರದ್ದು. ನವೀನ್ ನಿರ್ದೇಶಕರಂತೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದ್ದೇ. ಮಹೇಶ್ ಛಾಯಾಗ್ರಹಣ ಇದೆಯಂತೆ. ಈಶ್ವರ್ ರಾವ್ ಪವಾರ್ ನಿರ್ಮಾಣ ನಿರ್ವಹಣೆ ಹಾಗೂ ಡಿಫರಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಅಧಿಕಾರಿ ಮಾರುತಿ ಬೋವಿ ಅವರ ಪುತ್ರಿ ಪ್ರಿಯಾ ಚಿತ್ರದ ನಾಯಕಿ. ತಮಿಳಿನ ವಿಜಯ ಭಾರತಿ ಸಂಗೀತ ನೀಡಿರುವ ಈ ಚಿತ್ರದಲ್ಲಿ ಕೇಳಲು ಒಂದಿಷ್ಟು ಮಧುರ ಹಾಡುಗಳೂ ಇವೆಯಂತೆ. ಒಟ್ಟಾರೆ ಚಿತ್ರ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಹಪಹಪಿಸುತ್ತಿರುವ ಅಪ್ಪು ವೆಂಕಟೇಶ್ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಯಾಂಡಲ್ ವುಡ್, ಒನ್ ಡೇ, ಅಪ್ಪು ವೆಂಕಟೇಶ್ ಸ್ಯಾಂಡಲ್ ವುಡ್, ಒನ್ ಡೇ, ಅಪ್ಪು ವೆಂಕಟೇಶ್