ನಟ ಅಜಿತ್ ತನ್ನ ಮೂರನೇ ಸಾಹಸಕ್ಕೆ ಮುಂದಾಗಿದ್ದಾರೆ. ಪಟ್ರೆ ಲವ್ಸ್ ಪದ್ಮ ಅನ್ನುವ ಹೆಸರಿನ ಚಿತ್ರದ ಮೂಲಕ ಸುದ್ದಿ ಮಾಡಿದ ಅಜಿತ್ ಇದೀಗ ಮ್ತತೊಮ್ಮೆ ನಾಯಕನಾಗಿ ಮೆರೆಯಲು ಬರುತ್ತಿದ್ದಾರೆ. ಚಿತ್ರದ ಹೆಸರು ನಂದಗೋಕುಲ.
ಜಾಲಿಡೇಸ್ ಹಾಗೂ ಜೀವಾ ಚಿತ್ರದಲ್ಲಿ ಅಭಿನಯಿಸಿದ್ದ ನಾಯಕಿ ಋತುವಾ ಈ ಚಿತ್ರದ ನಾಯಕಿ. ಇವರಿಗೆ ಇದು ಮೂರನೇ ಚಿತ್ರ. ಇತ್ತೀಚೆಗೆ ಜಾಲ ಎಂಬ ಚಿತ್ರ ನಿರ್ದಶಿಸಿದ್ದ ನಾಗನಾಥ ಜೋಶಿ ಅವರ ಸಹೋದರ ನರಸಿಂಹ ಜೋಶಿ ಈ ಚಿತ್ರದ ನಿರ್ಮಾಪಕರು. ಆದರೆ ಈ ಚಿತ್ರವನ್ನು ನಾಗನಾಥ್ ನಿರ್ದೇಶಿಸುತ್ತಿಲ್ಲ. ಶಿವಲಿಂಗ ಎಂಬುವರನ್ನು ಪರಿಚಯಿಸಲಾಗುತ್ತಿದೆ.
ಇವರು ಈ ಹಿಂದೆ ನಿರ್ದೇಶಕರಾದ ಆನಂದ್ ಪಿ. ರಾಜು ಹಾಗೂ ಜಿ.ಕೆ. ಮುದ್ದುರಾಜು ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಮ್ ನಾರಾಯಣರ ಸಾಹಿತ್ಯ ಹಾಗೂ ಸಂಭಾಷಣೆ ಚಿತ್ರಕ್ಕೆ ಲಭಿಸಿದೆ. ಅಜಿತ್ ಪಾಲಿಗೆ ಇದು ಮೂರನೇ ಚಿತ್ರ. ಸದ್ಯ ಶಿವಕಾಶಿ ಚಿತ್ರದಲ್ಲಿ ಎಂಗೇಜ್ ಆಗಿದ್ದು, ಅದು ಮುಗಿದ ತಕ್ಷಣ ಈ ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.