ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಂಚರಂಗಿಯಲ್ಲಿ ಉಪ್ಪಿ ಪತ್ನಿ ಪ್ರಿಯಂಕಾ ನಟಿಸಲಿದ್ದಾರೆ! (Sandalwood | Upendra | Priyanka | Yogaraj Bhat | Diganth | Nidhi Subbayya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮಲ್ಲ ಚಿತ್ರ ಖ್ಯಾತಿಯ, ಹೂವೇ ಹೂವೇ ಎಂದು ಕುಣಿದ ಉಪೇಂದ್ರರ ಮನಮೆಚ್ಚಿದ ಮಡದಿ ಪ್ರಿಯಂಕಾ ಮತ್ತೆ ಸಿನಿಮಾಕ್ಕಾಗಿ ಬಣ್ಣಹಚ್ಚಲಿದ್ದಾರೆ. ಉಪೇಂದ್ರರನ್ನು ವಿವಾಹವಾಗಿ ಇಬ್ಬರು ಮಕ್ಕಳ ತಾಯಿಯಾಗಿ ಹಾಯಾಗಿ ಸಂಸಾರ ಮಾಡುತ್ತಿದ್ದ ಪ್ರಿಯಾಂಕಾರನ್ನು ನಮ್ಮ ಯೋಗರಾಜ ಭಟ್ಟರು ಮತ್ತೆ ಬಣ್ಣ ಹಚ್ಚಲು ಎಳೆದು ತಂದಿದ್ದಾರೆ.

ಪ್ರಿಯಾಂಕಾಗೆ ಭಟ್ಟರ ಮುಂಬರುವ ಚಿತ್ರ ಪಂಚರಂಗಿ ಚಿತ್ರದಲ್ಲಿ ಟೀಚರ್ ಪಾತ್ರವಂತೆ. ವಿಶೇಷವೆಂದರೆ, ಕೇವಲ ಮಕ್ಕಳಿಗಷ್ಟೇ ಪಾಠ ಹೇಳುವ ಕೆಲಸ ಪ್ರಿಯಾಂಕಾರದ್ದಲ್ಲ. ಮಕ್ಕಳ ಜತೆ ನಟ ದಿಗಂತ್‌ಗೂ ಪಾಠ ಹೇಳುವ ಕೆಲಸ ಪ್ರಿಯಾಂಕಾರದ್ದು!

ಕುತೂಹಲ ಹೆಚ್ಚಿಸುವುದು ಬೇಡ ಬಿಡಿ. ಯೋಗರಾಜ್ ಭಟ್ಟರಿಗೆ ಪಂಚರಂಗಿಗಾಗಿ ಒಬ್ಬ ಗ್ಲ್ಯಾಮರಸ್ ಆಗಿರೋ ಟೀಚರ್ ಪಾತ್ರಕ್ಕೆ ನಟಿಯ ಅಗತ್ಯವಿತ್ತಂತೆ. ರಾಶಿಗಟ್ಟಲೆ ಮಾಡೆಲ್‌ಗಳನ್ನು, ಹೊಸ ಮುಖಗಳನ್ನು ಈ ಪಾತ್ರಕ್ಕಾಗಿ ಭಟ್ಟರು ಟೆಸ್ಟ್ ಮಾಡಿದರೂ, ಒಬ್ಬರೂ ಸೂಟ್ ಆಗಲಿಲ್ಲ. ಕೆಲವರು ಪಾತ್ರಕ್ಕೆ ಅಗತ್ಯವಿದ್ದುದಕ್ಕಿಂತ ಯಂಗ್ ಆಗಿ ಕಂಡರೆ ಇನ್ನೂ ಕೆಲವರಿಗೆ ಅಭಿನಯವೇ ಗೊತ್ತಿಲ್ಲ. ಇಂಥ ಸಂದರ್ಭ, ಈಗಾಗಲೇ ಅಭಿನಯ ಕಲೆ ಸಿದ್ಧಿಸಿರೋ ನಟಿಯೊಬ್ಬಳ ಅಗತ್ಯ ಈ ಪಾತ್ರಕ್ಕಿದೆ ಅಂತ ಭಟ್ಟರಿಗೆ ಅನಿಸಿತು. ತಕ್ಷಣ ಅವರಿಗೆ ಹೊಳೆದದ್ದು ಪ್ರಿಯಾಂಕಾ ಉಪೇಂದ್ರರನ್ನು!

ಹಾಗಾಗಿ ಅವರನ್ನು ತಮ್ಮ ಚಿತ್ರಕ್ಕೆ ಆಮಂತ್ರಿಸಿದ್ದಾರೆ. ಚಿತ್ರದಲ್ಲಿ ಭಟ್ಟರೇ ಬರೆದ 'ಲೈಫು ಇಷ್ಟೇನೆ...' ಅನ್ನುವ ಹಾಡಿನಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಾರಂತೆ. ತುಂಬಾ ಗ್ಲಾಮರಸ್ ಹಾಗೂ ರೊಮ್ಯಾಂಟಿಕ್ ಹಾಡಂತೂ ಇದು ಅಲ್ಲವಾದರೂ, ಸಾಮಾಜಿಕ ಸಂದೇಶದಂತಿರುವ ಹಾಡಿದು. ಮಾಡರ್ನ್ ಮಂಕುತಿಮ್ಮನ ಕಗ್ಗ ಎಂದು ಹೆಸರಿಸಬಹುದೇನೋ ಎಂಬುದು ಭಟ್ಟರ ಮಾತು. ಚಿತ್ರದ ನಾಯಕ, ನಾಯಕಿಗೆ ಇವರು ಶಿಕ್ಷಕಿಯಂತೆ! ಹಾಗಾಗಿ ಇದು ಕೇವಲ ಹಾಡಿನಲ್ಲಿ ಬಂದು ಹೋಗುವ ಪಾತ್ರ ಪ್ರಿಯಾಂಕಾರದ್ದು. ಆದರೂ ಸಿಕ್ಕಾಪಟ್ಟೆ ಸ್ಕೋಪಿದೆ ಈ ಹಾಡಿಗೆ!

ಈ ಬಗ್ಗೆ ಮಾತನಾಡುವ ಪ್ರಿಯಾಂಕಾ, ಭಟ್ಟರು, ನಾನು, ಉಪ್ಪಿ ಎಲ್ಲ ಆಗಾಗ ಮಾತಾಡುತ್ತಿರುವಷ್ಟು ಗೆಳೆಯರು. ಕೆಲ ದಿನಗಳ ಹಿಂದೆ ಭಟ್ಟರು ಉಪ್ಪಿ ಬಳಿ ಇಂಥದ್ದೊಂದು ಇಂಪಾರ್ಟೆಂಟ್ ರೋಲಿದೆ, ನಿಮ್ಮ ಪತ್ನಿ ಇದಕ್ಕೆ ಸೂಟ್ ಆಗುತ್ತಾರೆ. ಅವರು ಒಪ್ಪಿದರೆ ಅವರಿಗೇ ಈ ರೋಲು ಕೊಡೋಣ ಅಂತಿದ್ದೇನೆ ಎಂದರಂತೆ. ಉಪ್ಪಿ, ಆಕೆಗೆ ಒಕೆ ಆದ್ರೆ ನನ್ನದೇನೂ ಅಭ್ಯಂತರವಿಲ್ಲ ಅಂದರಂತೆ. ಉಪ್ಪಿ ಬಂದು ನಂಗೆ ಹೇಳಿದರು. ನನಗೆ ಭಟ್ಟರ ಸಿನಿಮಾ ತುಂಬ ಇಷ್ಟ. ಅವರು ಹಾಡುಗಳನ್ನು ತೋರಿಸೋ ರೀತಿಯೂ ನನಗೆ ತುಂಬ ಇಷ್ಟ. ಹಾಗಾಗಿ ಅವರು ಖಂಡಿತ ನನ್ನ ಪಾತ್ರಕ್ಕೆ ಮೋಸ ಮಾಡಲ್ಲ ಅನ್ನುವ ನಂಬಿಕೆ ನನಗಿದೆ. ಜೊತೆಗೆ ನನ್ನ ಇಮೇಜಿಗೂ ಅದು ಹೊಂದುವ ಪಾತ್ರವಾದ್ದರಿಂದ ತಕ್ಷಣ ಒಕೆ ಅಂದೆ ಎನ್ನುತ್ತಾರೆ ಪ್ರಿಯಾಂಕಾ.

ಅಂತೂ ಕುತೂಹಲ ಕಳೆದು, ಹೊಸ ವಿಷಯ ಕೇಳಿ ಪುಳಕ ಆಗಿರಬೇಕಲ್ಲ! ಚಿತ್ರದಲ್ಲಿ ಪ್ರಿಯಂಕಾ ಇದ್ದಾರೆ ಅಂದರೆ 'ಯಮ್ಮೊ ಯಮ್ಮೋ ನೋಡ್ದೇ ನೋಡ್ದೆ...' ಅಂತ ಕೆಲ ಪಡ್ಡೆ ಹೈಕಳು ಹಾಡಿಕೊಂಡಿರಲೂ ಸಾಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಂಚರಂಗಿ, ಉಪೇಂದ್ರ, ಪ್ರಿಯಾಂಕಾ, ಯೋಗರಾಜ್ ಭಟ್, ದಿಗಂತ್, ನಿಧಿ ಸುಬ್ಬಯ್ಯ