ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಲಕ್ಷ್ಮಿ ಗೋಪಾಲಸ್ವಾಮಿ ಎಂಬ ಅನರ್ಘ್ಯ ರತ್ನ (Lakshmi Gopalaswamy | Aptharakshaka | Vishunuvardhan)
ಸುದ್ದಿ/ಗಾಸಿಪ್
Bookmark and Share Feedback Print
 
PR
ನಿಮಗೆಲ್ಲಾ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಗೊತ್ತೇ ಇರಬೇಕು. ಅದೇ, ವಿಷ್ಣು ಜೊತೆ ವಿಷ್ಣು ಸೇನಾ, ನಂಯಜಮಾನ್ರು ಚಿತ್ರದಲ್ಲಿ ನಟಿಸಿ ಮತ್ತೊಮ್ಮೆ ಆಪ್ತರಕ್ಷಕ ಚಿತ್ರದಲ್ಲೂ ಮಿಂಚಿದರಲ್ಲ, ಅದೇ ಲಕ್ಷ್ಮಿ ಗೋಪಾಲಸ್ವಾಮಿ. ಈಕೆ ಕನ್ನಡ, ತಮಿಳು ಧಾರವಾಹಿಗಳಲ್ಲೂ ಸಾಕಷ್ಟು ಮಿಂಚುತ್ತಿರುವವರು! ಈಗ ಗೊತ್ತಾಗಿರಬೇಕಲ್ಲಾ...

ಹೌದು ಲಕ್ಷ್ಮಿ ಏಕಕಾಲಕ್ಕೆ ನಾಲ್ಕಾರು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿ ಹೆಸರಾದವರು. ಅವರು ನಟಿಸಿದ ಮೊದಲ ಕನ್ನಡ ಚಿತ್ರ ಪೂರ್ವಾಪರ. 'ಎಡಕಲ್ಲುಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ಗುರುತರ ಪಾತ್ರ ಮಾಡಿದ್ದರು. ಆದರೂ, ಇವರು ಹೆಚ್ಚಾಗಿ ಗುರುತಾಗಿದ್ದು ಕಿರುತೆರೆ ಮೂಲಕ.

ಲಕ್ಷ್ಮಿಯವರನ್ನು 'ನಿಮ್ಗೆ ಮದ್ವೆ ಇಷ್ಟ ಇಲ್ವಾ, ಯಾಕೆ ಮದುವೆಯಾಗೋ ಲಕ್ಷಣವೇ ಕಾಣ್ತಾ ಇಲ್ಲ?' ಅಂತ ಕೇಳಿದರೆ 'ಇಷ್ಟ ಇಲ್ಲ ಎಂದಲ್ಲ. ಇಷ್ಟ ಆಗುವ ವ್ಯಕ್ತಿ ಇನ್ನೂ ಸಿಕ್ಕಿಲ್ಲ!' ಅನ್ನುತ್ತಾರೆ ಈ ನಡು ವಯಸ್ಸಿನಲ್ಲಿ. ಮತ್ತಷ್ಟು ಕೆಣಕಿದರೆ, 'ನನ್ನನ್ನು ನನ್ನಷ್ಟೇ ಚೆನ್ನಾಗಿ ಅರ್ಥಮಾಡಿಕೊಳ್ಳುವ ಹುಡುಗ ಇನ್ನೂ ನನ್ನ ಕಣ್ಣಿಗೆ, ಮನಸ್ಸಿಗೆ ಬಿದ್ದಿಲ್ಲ!' ಎನ್ನುತ್ತಾರೆ.

ಬಿಚ್ಚು ಮಾತಿಗೆ ಹೆಸರಾಗಿರುವ ಲಕ್ಷ್ಮಿ ಗೋಪಾಲಸ್ವಾಮಿ ಅಪ್ಪಟ ಕನ್ನಡತಿ. ಉತ್ತಮ ನೃತ್ಯಗಾತಿ. ನಾಟ್ಯವನ್ನೇ ಉಸಿರಾಗಿಸಿದವರು. ಆದರೂ, ನಟನೆ ನನ್ನ ಆತ್ಮ ಎನ್ನುತ್ತಾರೆ ಲಕ್ಷ್ಮಿ. ಈಗಾಗಲೇ ಪ್ರಕಾಶ್ ರೈ ಜೊತೆ 'ಭೀಮಾ' ಚಿತ್ರ ತೀರದಲ್ಲಿ ನಿಂತು ಪ್ರಶಂಸೆಯನ್ನೂ ಪಡೆದಿದ್ದಾರೆ. ಮಲಯಾಳಂನ ಮನೆಮಗಳಂತೇ ಆಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾದೀತು. ಜತೆಗೆ ನಾಟ್ಯ ಪ್ರದರ್ಶನ ನಡೆಯುತ್ತಲೇ ಇದೆ. ಇಂದು ಚೆನ್ನೈ, ನಾಳೆ ಮುಂಬಯಿ, ನಾಡಿದ್ದು ಬೆಂಗಳೂರು, ಮತ್ತೆ ಇನ್ಯಾವುದೋ ದೇಶದಲ್ಲಿ... ಹೀಗೆ ಬಿಡುವಿಲ್ಲದ ನಾಟ್ಯ ನಂಟಿನಲ್ಲಿರುವ ಇವರಿಗೆ ಯಶಸ್ಸು ಕೈಗೆ ಸಿಕ್ಕೂ ಸಿಗದಂತಿದೆ. ಆ ಯಶಸ್ಸು ಶೀಘ್ರ ಲಭಿಸಲಿ ಅಂತ ಆಶಿಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಕ್ಷ್ಮಿ ಗೋಪಾಲಸ್ವಾಮಿ, ಆಪ್ತರಕ್ಷಕ, ವಿಷ್ಣುವರ್ಧನ್, ನೃತ್ಯ