ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಯೋತ್ಪಾದನೆ ಸುತ್ತ ಈ ಕಾಫಿಶಾಪ್ (Coffee Shop | Terrorism | Biyanka Desai | Shashank)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡದಲ್ಲಿ ಚಿತ್ರಗಳಿಗೇನು ಬರವಿಲ್ಲ. ಒಂದಾದ ಮೇಲೊಂದರಂತೆ ಚಿತ್ರಗಳು ಹೊರ ಬರುತ್ತಿವೆ. ಅವುಗಳ ಪಟ್ಟಿಗೆ ಹೊಸ ಸೇರ್ಪಡೆ ಕಾಫಿ ಶಾಪ್. ಹೌದು. ಹೆಸರು ವಿಚಿತ್ರ ಎನಿಸಿದರೂ, ಇದೊಂದು ಸಹೃದಯರನ್ನು ಮೆಚ್ಚಿಸುವ ಚಿತ್ರವಂತೆ. ಗೀತಾ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ, ಸಂಪೂರ್ಣ ಸಂಗೀತಮಯವಂತೆ.

ವಿಶೇಷ ಎಂದರೆ ಈ ಚಿತ್ರ ಪ್ರೀತಿ ಪ್ರೇಮದ ಚೌಕಟ್ಟಿನದ್ದಲ್ಲ. ಭಯೋತ್ಪಾದನೆಯನ್ನು ಆಧರಿಸಿದ್ದಾಗಿದೆ. ಭಯೋತ್ಪಾದನೆಯೆಂಬ ಗಂಭೀರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಿರ್ದೇಶಕರದ್ದು. ಚಿತ್ರದಲ್ಲಿ ರುಕ್ಸಾನಾ ಎಂಬ ಕಾಶ್ಮೀರಿ ಹುಡುಗಿ ಮನೆಯಲ್ಲಿ ಭಯೋತ್ಪಾದಕರು ಅಡಗಿಕೊಳ್ಳುತ್ತಾರೆ. ಅವರನ್ನು ಆಚೆ ಕಳಿಸಲು ಆಕೆ ಗನ್ ಹಿಡಿಯುತ್ತಾಳೆ. ಹೋರಾಡುತ್ತಾಳೆ. ವೀರ ಮರಣವನ್ನೂ ಅಪ್ಪುತ್ತಾಳೆ. ಆದರೆ ಇದರ ನಡುವೆ ನಾಲ್ವರು ಉಗ್ರರನ್ನು ಸಾಯಿಸುತ್ತಾಳೆ. ಇದು ಚಿತ್ರದ ಸಾರವಂತೆ.

ಅಲ್ಲದೆ ಇದು ಇಡೀ ಕುಟುಂಬ ಸಮೇತರಾಗಿ ಬಂದು ನೋಡುವ ಚಿತ್ರವಂತೆ.ಯುವಜನರನ್ನು ಕೇಂದ್ರೀಕರಿಸಿ ಬೇಶಭಕ್ತಿ ತುಂಬುವುದೂ ಕೂಡಾ ಚಿತ್ರತಂಡದ ಉದ್ದೇಶವಂತೆ. ಚಿತ್ರದಲ್ಲಿ ನಾಯಕಿಯಾಗಿ ಬಿಯಾಂಕಾ ದೇಸಾಯಿ ನಟಿಸಿದರೆ ನಾಯಕನಾಗಿ ತೆಲುಗಿನ ನಟ ಶಶಾಂಕ್ ನಟಿಸಿದ್ದಾರೆ. ಚಿತ್ರದ ಸದ್ಯದಲ್ಲೇ ಹೊರಬರಲಿದ್ದು, ಅದರ ಯಶಸ್ಸಿಗೆ ಒಂದು ವಿಶ್ ಮಾಡೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಫಿಶಾಪ್, ಭಯೋತ್ಪಾದನೆ, ಬಿಯಾಂಕಾ ದೇಸಾಯಿ, ಶಶಾಂಕ್