ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲನಟನಾಗಿದ್ದ ಚಿರಾಗ್ ಈಗ ನಾಯಕ ನಟ (Chirag | Muttanna | Shivaraj Kumar)
ಸುದ್ದಿ/ಗಾಸಿಪ್
Bookmark and Share Feedback Print
 
ಬಾಲನಟರು ನಾಯಕರಾಗುವ ಉದಾಹರಣೆ ಸಾಕಷ್ಟು ಸಿಗುತ್ತದೆ. ವಿಜಯ್ ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಹಲವು ನಟರು ಬಾಲ ನಟರಾಗಿ ಅನುಭವ ಪಡೆದು ಇಂದು ನಾಯಕರಾಗಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ಚಿರಾಗ್.

ಶಿವರಾಜ್ ಕುಮಾರ್ ಹೀರೊ ಆಗಿ ಅಭಿನಯಿಸಿದ್ದ ಮುತ್ತಣ್ಣ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಚಿರಾಗ್ ಈಗ ಯುವನಟನಾಗಿ ಬೆಳೆದುನಿಂತಿದ್ದಾನೆ.

ಮುತ್ತಣ್ಣ ಹಾಗೂ ರಾಜಾ ಚಿತ್ರದ ನಿರ್ಮಾಪಕ ಎಲ್. ಸೋಮಣ್ಣ ಅವರ ಪುತ್ರ ಈತ. ಮಗನಲ್ಲಿರುವ ಪ್ರತಿಭೆಯನ್ನು ಗುರುತಿಸಿ, ನಾಯಕನಟನಾಗಿಸಲು ಸೋಮಣ್ಣ ಮುಂದಾಗಿದ್ದಾರೆ. ಈ ಮೂಲಕ ಮಕ್ಕಳನ್ನು ಬೆಳೆಸಲು ಬೆನ್ನೆಲುಬಾಗಿ ನಿಂತ ಅಪ್ಪಂದಿರಲ್ಲಿ ಇವರೂ ಒಬ್ಬರು. ಹಾಗಂತ ಮಗನ ಚಿತ್ರವನ್ನು ಇವರು ನಿರ್ಮಿಸುತ್ತಿಲ್ಲ. ಬದಲಾಗಿ ರವೀಂದ್ರ ಎಂಬುವರು ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಸೂಜಿಗಲ್ಲಿನಂತೆ ಸೆಳೆಯುವ ಒಂದು ಸೂಕ್ತ ಹೆಸರಿನ ಹುಡುಕಾಟ ನಡೆದಿದೆಯಂತೆ.

ಚಿತ್ರದ ನಾಯಕಿಯ ಆಯ್ಕೆಯೂ ಸೇರಿದಂತೆ ತಾರಾಗಣ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ತಿಂಗಳ ಕೊನೆಯಲ್ಲಿ ಚಿತ್ರ ಸೆಟ್ಟೇರಲಿದ್ದು, ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿರಾಗ್, ಮುತ್ತಣ್ಣ, ಶಿವರಾಜ್ ಕುಮಾರ್