ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾಗಶೇಖರ್ ಹೀರೋ, ಸಂಪೂರ್ಣ ಚಿತ್ರವೇ ನಿರ್ದೇಶಕಮಯ! (Nagashekhar | Ommomme | Sanju Weds Geetha | Aramane)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿರ್ದೇಶಕನೊಬ್ಬ ಹೀರೊ ಆಗಲು ಹೊರಟರೆ ಏನಾಗಬಹುದು. ಇನ್ನೇನಾಗುತ್ತೆ ಹೇಳಿ, ಮತ್ತೊಬ್ಬ ನಿರ್ದೇಶಕನ ತಾಳಕ್ಕೆ ಕುಣಿಯಬೇಕಾಗಿ ಬರುತ್ತದೆ. ಅದೇ ಸ್ಥಿತಿ ಈಗ ಜನಪ್ರಿಯ ನಿರ್ದೇಶಕ ನಾಗಶೇಖರ್. ಇವರೀಗ ಚಿತ್ರವೊಂದರ ನಾಯಕರಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕಿಯರನ್ನು ಹೊರತುಪಡಿಸಿದರೆ ಇಡೀ ಚಿತ್ರದಲ್ಲಿ ಕೇವಲ ನಿರ್ದೇಶಕರುಗಳೇ ನಟಿಸಲಿದ್ದಾರೆ. ಮತ್ತೊಬ್ಬ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ!

ಈ ನಾಗಶೇಖರ್ ಎಂದರೆ ಯಾರು ಅಂತ ಬಿಡಿಸಿ ಹೇಳಬೇಕಿಲ್ಲ. ಗಣೇಶ್ ಅಭಿನಯದ ಅರಮನೆ ಚಿತ್ರ ನಿರ್ದೇಶಿಸುವ ಮೂಲಕ ಭರವಸೆ ಹುಟ್ಟಿಸಿದ ನಾಗಶೇಖರ್ ಸದ್ಯ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ ಚಿತ್ರವನ್ನು ನಿರ್ದೇಶನ ಮಾಡಿರುವ ಅದೇ ನಾಗಶೇಖರ್.

ನೀವು ಇತ್ತೀಚೆಗಷ್ಟೆ ವರ್ಷದ ಹಿಂದೆ, 'ಒಮ್ಮೊಮ್ಮೆ ಹೀಗು ಆಗುವುದು..' ಎಂಬ ಹಾಡನ್ನು ಕೇಳಿರಬಹುದು. ಈ ಹಾಡು ಜನಪ್ರಿಯವೂ ಆಗಿತ್ತು. ಹೌದು, ನಾಗಶೇಖರ್ ಅಭಿನಯಿಸುತ್ತಿರುವ ಚಿತ್ರದ ಹೆಸರು ಒಮ್ಮೊಮ್ಮೆ. ಅಂದಹಾಗೆ ನಾಗಶೇಖರ‌್‌ಗೆ ಆಕ್ಷನ್, ಕಟ್ ಹೇಳುತ್ತಿರುವವರು ಪಯಣ ಚಿತ್ರದ ನಿರ್ದೇಶಕ ಕಿರಣ್ ಗೋವಿ. ನಾಗಶೇಖರ್ ಹಾಗೂ ಶಿವರಾಜ್ ಚಿತ್ರದ ನಿರ್ಮಾಪಕರು.

ಇದು ಇಂದಿನ ಕಾಲಘಟ್ಟಕ್ಕೆ ಹೋಲುವ ಲವ್ ಸ್ಟೋರಿಯಂತೆ. ಸಂಗೀತಕ್ಕೂ ಸಾಕಷ್ಟು ಮಹತ್ವ ನೀಡಿದ್ದು, ಚಿತ್ರಕ್ಕೆ ಮೂವರು ನಾಯಕಿಯರಂತೆ. ಇವರಲ್ಲಿ ಒಬ್ಬರು ಜೆನ್ನಿಫರ್ ಕೊತ್ವಾಲ್ ಎಂಬ ಮಾತು ಕೇಳಿ ಬರುತ್ತಿದೆ. ವಿಶೇಷ ಅಂದರೆ ನಾಯಕಿಯರನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಪಾತ್ರಗಳಿಗೂ ನಿರ್ದೇಶಕರನ್ನೇ ಬಳಸಿಕೊಳ್ಳಲಾಗುತ್ತದೆಯಂತೆ. ಇದರಿಂದ 25 ಮಂದಿ ನಿರ್ದೇಶಕರು ಅಭಿನಯಿಸುವ ಸಾಧ್ಯತೆಯೂ ಇದೆ. ಅರ್ಜುನ್ 5 ಹಾಡಿಗೆ ಸಂಗೀತ ನೀಡಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಚಿತ್ರ ಚಾಲನೆ ಪಡೆಯಲಿದೆ. ಮಡಿಕೇರಿ ಮತ್ತಿತರ ಕಡೆ ಚಿತ್ರೀಕರಣ ನಡೆಸುವ ಆಶಯ ನಿರ್ದೇಶಕರದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಾಗಶೇಖರ್, ಒಮ್ಮೊಮ್ಮೆ, ಸಂಜು ವೆಡ್ಸ್ ಗೀತಾ, ಅರಮನೆ