ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸಿಂಹಾದ್ರಿಯ ಸಿಂಹ'ನ ಗುಹೆಯಲ್ಲೀಗ ನೀರವ ಮೌನ (Simhadriya Simha | Vishnuvardhan | Bharathi Vishnuvardhan | Aniruddh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ವಿಷ್ಣು ಅಗಲಿಕೆ ಅಭಿಮಾನಿಗಳಿಗೆ, ಚಿತ್ರರಂಗಕ್ಕೆ ಅಪಾರ ನೋವನ್ನು ಉಂಟುಮಾಡಿದೆ. ಆದರೆ ಕುಟುಂಬ ವರ್ಗದಲ್ಲಿ ಮಾತ್ರ ನೀರವ ಮೌನ. ಅಗಲಿಕೆಯ ಸೂಚನೆಯನ್ನೂ ನೀಡದೇ ಏಕಾಏಕಿ ಕಣ್ಮುಚ್ಚಿರುವ ವಿಷ್ಣು ಅವರ ಬಾಳ ಸಂಗಾತಿ ಭಾರತಿಗೆ ಈಗ ಮೌನ, ದುಗುಡ, ನೆನಪುಗಳೇ ಸಂಗಾತಿ.

ಭಾರತೀ ಅವರನ್ನು ಮಾತಿಗೆಳೆದಾಗ, 'ಸಂಜೆ ಹೊತ್ತು ಇಲ್ಲೇ ಹೊರಗೆ ಕೂತಿರುತ್ತೇನೆ. ಆರು ಏಳು ಗಂಟೆಯಾಗುತ್ತಲೇ...ಮನಸಲ್ಲಿ ಕಸಿವಿಸಿ. ಇನ್ನೂ ಯಾಕೆ ಬರಲಿಲ್ಲ ಇವರು? ಇವತ್ತು ಯಾಕೆ ಲೇಟಾಯಿತು...? ಹೀಗೆ ಅನ್ನಿಸುವ ಹೊತ್ತಿಗೆ ಈ ಲೋಕಕ್ಕೆ ಬರುತ್ತೇನೆ...ಅವರಿಲ್ಲ ಎನ್ನುವುದು ಅರಿವಾದಾಗ...' ಇಷ್ಟು ಸಾಕು ನೆನಪಿನ ಆಳದಲ್ಲಿ ನೋವಿನ ಸೆಲೆ ಚಿಮ್ಮಲು.

ಭಾವುಕತೆಗೆ ಹೆಸರಾದ ನಟಿ ಭಾರತಿ. ಇದೀಗ ಪತಿಯ ಅಗಲಿಕೆ ಭಾರತಿ ಅವರನ್ನು ಕಂಗೆಡಿಸಿದೆ. ಇವರ ಕಣ್ಣಲ್ಲೀಗ ನೀರು ಇಲ್ಲ. ಆದರೆ ಎದೆಯಲ್ಲಿ ಆರದ ಗಾಯವಿದೆ. ಅದೇ ಆಗಾಗ ಕೆದಕುತ್ತಿರುತ್ತದೆ. ನೆನಪೇ ಬದುಕು...ಇದು ಯಾವಾಗ ಮುಗಿಯುತ್ತೊ ಗೊತ್ತಿಲ್ಲ ಎನ್ನುತ್ತಾರೆ ಇನ್ನೂ ಕೊಂಚ ಭಾವುಕರಾಗಿ.

ಇಂದು ಸಿಂಹ ಇಲ್ಲದೆ ಗುಹೆಯಲ್ಲಿ ಅವರ ಇಡೀ ಕುಟುಂಬ ಬದುಕುತ್ತಿದೆ. ಅದೇ ಎತ್ತರೆತ್ತರ ಗೋಡೆಯ ಕಾಂಪೌಂಡು, ಹರಿಸು ಹುಲ್ಲು, ವಿಷ್ಣು ಕೋಣೆಯಲ್ಲಿ ಅವರು ಬಳಸಿದ ವಸ್ತುಗಳು ಎಲ್ಲವೂ ಹಾಗೇ ಇದೆ. ಆದರೆ, ಅವರಿಲ್ಲ ಅಷ್ಟೆ.

ವಿಷ್ಣು ಊಟ ಮಾಡುತ್ತಿದ್ದ ಜಾಗ, ಅಡ್ಡಾಡುತ್ತಿದ್ದ ದಾರಿ, ಕೂರುತ್ತಿದ್ದ ಕುರ್ಚಿ, ಆಡುತ್ತಿದ್ದ ಮಾತು, ಬಳಸುತ್ತಿದ್ದ ಮೊಬೈಲು, ಧರಿಸುತ್ತಿದ್ದ ಬಟ್ಟೆ, ಇವೆಲ್ಲ ಅಲ್ಲಲ್ಲೇ ಇರುವಾಗ, ಹೇಗೆ ತಾನೇ ಈಗ ಅವರಿಲ್ಲ ಅನಿಸೀತು ಹೇಳಿ. ಈಗಲೂ ಅವರು ಶೂಟಿಂಗಿಂದ ಬರುವ ಹೊತ್ತಾಯಿತು ಅನಿಸುತ್ತದೆ. ಅವರಿಗಾಗಿ ನನಗೇ ಅರಿವಿಲ್ಲದ ಹಾಗೆ ನಾನು ಕಾಯುತ್ತಾ ಕೂರುತ್ತೇನೆ. ಅವರಿಲ್ಲ ಅಂತ ವಾಸ್ತವಕ್ಕೆ ಬಂದಾಗ... ಎನ್ನುತ್ತಾ ತನ್ನಿಂದ ತಾನೇ ಭಾವುಕರಾಗುತ್ತಾರೆ ಭಾರತಿ.

ಆದರೂ ಆಪ್ತರಕ್ಷಕ ಚಿತ್ರ ಈಗಲೂ ಅವರನ್ನು ಜೀವಂತವಾಗಿರಿಸಿದೆ. ಆ ಮೂಲಕ ನಾನು ದಿನವೂ ವಿಷ್ಣು ಅವರನ್ನು ಕಾಣುತ್ತಿದ್ದೇನೆ. ಅವರ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದು ಪತ್ರಕರ್ತರೊಂದಿಗೆ ತನ್ನ ಜಯನಗರದ ಮನೆಯಲ್ಲಿ ಮಾತಿಗೆ ಕೂತಿದ್ದ ಭಾರತಿ ಮಾತು ಮುಗಿಸಿದರು.

ವಿಷ್ಣು ನನ್ನೊಂದಿಗೇ ಇದ್ದಾರೆ, ವಿಷ್ಣು ಅಭಿಮಾನಿಗಳಿಗೆ ಥ್ಯಾಂಕ್ಸ್: ಭಾರತಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಂಹಾದ್ರಿಯ ಸಿಂಹ, ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್