ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೌಡರ ನಟನಾಗುವ ಕನಸು ನನಸಾಗಲೇ ಇಲ್ಲ! (Shankare Gowda | Just Math Mathalli | Kannada Cinema | Kanwar Lal)
ಸುದ್ದಿ/ಗಾಸಿಪ್
Bookmark and Share Feedback Print
 
ಸಾಕಷ್ಟು ಹೊಡೆತ ತಿಂದ ಮೇಲೆ ಒಂದು ಕಲ್ಲು ಶಿಲೆಯಾಗಿ ಮಾರ್ಪಡುತ್ತದೆ. ಅದೇ ರೀತಿ ಚಿತ್ರರಂಗದ ಕೆಲವರು ದುಡ್ಡು ಕಳೆದುಕೊಂಡ ನಂತರ ಬುದ್ದಿ ಕಲಿಯುತ್ತಾರೆ. ಬಯಸಿಯೋ ಬಯಸದೆಯೋ ಗಾಂಧಿನಗರದ ಒಳಗೆ ಬಂದವರು ಎಷ್ಟೇ ಕಷ್ಟ ಬಂದರೂ ಸುಲಭವಾಗಿ ಆಚೆ ಹೋಗಲು ಆಗುವುದೇ ಇಲ್ಲ. ಇಂತವರಲ್ಲಿ ನಮ್ಮ ಶಂಕರೇಗೌಡರೂ ಒಬ್ಬರು. ನಟನಾಗಬೇಕೆಂಬ ಕನಸು ಹೊತ್ತು ಗಾಂಧಿನಗರಕ್ಕೆ ಬಂದ ಇವರು ಆದದ್ದು ಮಾತ್ರ ಚಿತ್ರ ನಿರ್ಮಾಪಕ. ತುಂಟ, ಮಂಡ್ಯ, ಹುಬ್ಬಳ್ಳಿ, ಈಶ್ವರ್, ಆಕ್ಷನ್ 300, ಬುದ್ದಿವಂತ, ಶ್ರೀಮತಿ, ಜಸ್ಟ್ ಮಾತ್ ಮಾತಲ್ಲಿ ಈ ರೀತಿ ಸಾಲು ಸಾಲು ಚಿತ್ರವನ್ನು ಮಾಡುತ್ತಲೇ ಹೋದರು. ಇದರಲ್ಲಿ ಆರಂಭದ ಕೆಲ ಚಿತ್ರಗಳು ಸೋತು ಸುಣ್ಣವಾದರೆ, ಇನ್ನೂ ಕೆಲವು ಹಿಟ್ ಆದವು.

ಆರಂಭದಲ್ಲಿ ಹಣ ಕಳೆದುಕೊಳ್ಳವುದು ಸಾಮಾನ್ಯ ಬಿಡಿ. ಅದೇ ನಮ್ಮ ಶಂಕರೇಗೌಡರಿಗೂ ಆಗಿದ್ದು. ಮೊದಲ ನಾಲ್ಕಾರು ಚಿತ್ರಗಳು ಹಣ ವ್ಯಯಿಸಿದವೇ ಹೊರತು ಗಳಿಸಲು ಅವಕಾಶವನ್ನೇ ಮಾಡಿಕೊಡಲಿಲ್ಲ. ಪೀಣ್ಯದಲ್ಲಿರುವ ಇವರ ಸ್ಟೀಲ್ ಕಾರ್ಖಾನೆ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದ್ದು, ಚಿತ್ರರಂಗದಲ್ಲಿ ಆಗುತ್ತಿರುವ ನಷ್ಟವನ್ನು ಭರಿಸುವ ಕಾರ್ಯ ಮಾಡುತ್ತಿದೆ.

ದುರಂತ ಅಂದರೆ ಅವರ ಅಭಿನಯದ ಕನಸಿಗೆ ನೀರೆರೆಯುವ ಕಾರ್ಯ ಇಂದಿಗೂ ಆಗಿಲ್ಲ. ಆಸೆ ಆಸೆಯಾಗಿಯೇ ಉಳಿದಿದೆ. ಬೇರೆ ನಿರ್ಮಾಪಕರು ಕರೆದು ಪಾತ್ರ ಕೊಟ್ಟರೆ ಅಭಿನಯಿಸುತ್ತೇನೆ. ನನ್ನದೇ ಚಿತ್ರದಲ್ಲಿ ನಾನು ನಟಿಸಿದರೆ ಅದಕ್ಕೆ ಅರ್ಥ ಇರುವುದಿಲ್ಲ ಎನ್ನುತ್ತಾರೆ. ಸದ್ಯ ಸುದೀಪ್ ಅಭಿನಯದ ಕನ್ವರ್ ಲಾಲ್ ಚಿತ್ರದಲ್ಲಿ ಸಂಪೂರ್ಣ ಬ್ಯುಸಿ ಆಗಿರುವ ಗೌಡರು, ಸುದೀಪ್ ಅಭಿನಯದ ಚಿತ್ರವೊಂದನ್ನು ಕನ್ನಡ ಹಾಗೂ ಹಿಂದಿಯಲ್ಲೂ ತರುವ ಆಶಯ ಹೊಂದಿದ್ದಾರೆ. ಎರಡು ಕನಸು ಹೊತ್ತು ಗಾಂಧಿನಗರದಲ್ಲಿ ಓಡಾಡುತ್ತಿರುವ ಗೌಡರಿಗೆ ಅವಕಾಶ ಬೇಗ ಸಿಗಲಿ ಎಂಬುದೇ ಆಶಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಂಕರೇಗೌಡ, ಜಸ್ಟ್ ಮಾತ್ ಮಾತಲ್ಲಿ, ಕನ್ನಡ ಸಿನಿಮಾ, ಕನ್ವರ್ ಲಾಲ್