ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಿನ್ನಿಸ್ ದಾಖಲೆಗಾಗಿಯೇ ಮಾಡಿದ ಚಿತ್ರ ಏಕಮೇವ (Ekameva | Record | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಿತ್ರವನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಯಿಂದ ನೋಡುತ್ತಾರೆ. ಕೆಲವರು ಇದನ್ನು ಹಣಗಳಿಕೆಗೆ ಮಾಡಿದರೆ, ಇನ್ನು ಕೆಲವರು ಹೆಸರಿಗಾಗಿ ಮಾಡುತ್ತಾರೆ, ಮತ್ತೆ ಕೆಲವರು ಚಿತ್ರ ಮಾಡುವ ತೆವಲಿಗೆ ಬಳಸಿಕೊಳ್ಳುತ್ತಾರೆ. ಇವರೆಲ್ಲರ ಜತೆ ಕೆಲವು ಮಂದಿ ಸಿನಿಮಾವನ್ನು ದಾಖಲೆಗಾಗಿಯೂ ಮಾಡುತ್ತಾರೆ.

ಇಂತಹ ಚಿತ್ರಗಳ ಪಟ್ಟಿಯಲ್ಲಿ ಸದ್ಯ ಮೇಲುಸ್ತರದಲ್ಲಿ ಕಾಣುತ್ತಿರುವುದು 'ಏಕಮೇವ'. ಹೌದು, ಈ ಚಿತ್ರವನ್ನು ಗಿನ್ನಿಸ್ ದಾಖಲೆಗಾಗಿ ಮಾಡಲಾಗಿದೆ! ಚಿತ್ರದ ದ್ವನಿ ಸುರುಳಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಇಡೀ ಚಿತ್ರದಲ್ಲಿ ಒಬ್ಬನೇ ಒಬ್ಬ ಹುಡುಗ ಮೇಳೈಸಿದ್ದಾರೆ. ಚಿತ್ರದಲ್ಲಿ ಈತ ಒಂಬತ್ತು ವರ್ಷದ ಹುಡುಗನಾಗಿದ್ದಾನೆ, 25ರ ಯುವಕನಾಗಿದ್ದಾನೆ. ಐವತ್ತರ ಅಂಕಲ್ ಹಾಗೂ 70ರ ತಾತನೂ ಆಗಿ ಅಭಿನಯಿಸಿದ್ದಾನೆ!

ಹಲವು ಸ್ತರಗಳ ಪಾತ್ರ ಒಬ್ಬ ಬಾಲಕ ನಿಭಾಯಿಸಿರುವುದು ವಿಶೇಷ. ಈ ಹಿಂದೆ ಮಾ. ಕಿಶನ್ ತಾವೇ ಚಿತ್ರ ನಿರ್ದೇಶನ, ನಟನೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಆ ಚಿತ್ರ ಕೇರ್ ಆಫ್ ಫುಟ್ಪಾತ್. ಇದರಲ್ಲಿ ಹಿಂದಿಯ ಜಾಕಿಶ್ರಾಫ್ ಸಹ ಅಭಿನಯಿಸಿದ್ದು ಇಂದು ಇತಿಹಾಸ. ಪ್ರಸ್ತುತ ಏಕಮೇವ ವೈಭವಿಸಲು ಮುಂದಾಗಿದ್ದಾನೆ. ಇದರಲ್ಲಿ ನಿರ್ದೇಶಕ ಪ್ರವೀಣ್ ಕುಮಾರ್ ಕೊಂಡಾಚಿ ಅವರ ಪರಿಶ್ರಮವೂ ಪ್ರಮುಖವಾದುದು.

ಹುಡುಗ ಮುದುಕನಾಗಲು ಸಾಕಷ್ಟು ವರ್ಷ ಬೇಕು. ಹುಡುಗನನ್ನೇ ಮುದುಕನನ್ನಾಗಿಸಲು ಸಾಕಷ್ಟು ಹಣ ಬೇಕು. ಏಕಮೇವದಲ್ಲಿ ಹುಡುಗನನ್ನು ಮುದುಕನನ್ನಾಗಿಸಲು ಬರೋಬ್ಬರಿ ಏಳು ಲಕ್ಷ ಖರ್ಚಾಗಿದೆಯಂತೆ. ಗಂಟೆಗಟ್ಟಲೆ ಸಮಯವನ್ನು ಮೇಕಪ್ಪಿಗಾಗಿಯೇ ಮೀಸಲಿಡಲಾಗಿದೆಯಂತೆ. ಹಾಡಿಗಾಗಿ ಸುಮಾರು 8 ಲಕ್ಷ ರೂ. ವ್ಯಯಿಸಲಾಗಿದೆ. ತಾರಾಗಣದಲ್ಲಿ ಬಾಲಕನ ಜತೆ ವಿನಾಯಕ ಜೋಶಿ, ದೊಡ್ಡಣ್ಣ, ಕರಿಬಸವಯ್ಯ, ಗುರುರಾಜ್ ಹೊಸಕೋಟೆ ಮುಂತಾದವರು ಇದ್ದಾರೆ.

ಯಾರ ಸಹಾಯವೂ ಇಲ್ಲದೆ ಹುಡುಗನೊಬ್ಬ ಬದುಕನ್ನು ಹೇಗೆ ಜಯಿಸುತ್ತಾನೆ ಎನ್ನುವುದೇ ಕಥೆಯ ತಿರುಳು. ಇದನ್ನು ವ್ಯವಸ್ಥಿತವಾಗಿ ಕಟ್ಟಿ ಕೊಡುವ ಕಾರ್ಯವನ್ನು ಇಲ್ಲಿ ಮಾಡಲಾಗಿದೆ. ಒಟ್ಟಾರೆ ಚಿತ್ರವನ್ನು ದಾಖಲೆಗಾಗಿ ಮಾಡಿದ್ದರೂ, ಮನರಂಜನೆಗೆ ಮೋಸ ಮಾಡುವುದಿಲ್ಲ ಎನ್ನಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಕಮೇವ, ಗಿನ್ನಿಸ್ ದಾಖಲೆ, ಕನ್ನಡ ಸಿನಿಮಾ