ರವಿಚಂದ್ರನ್ ಜೊತೆ ಸದ್ಯದಲ್ಲೇ ಹೂ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಕಾಲಿಟ್ಟಿರುವ ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ ನಮಿತಾಗೆ ಇಂದು 30ನೇ ಹುಟ್ಟುಹಬ್ಬದ ಸಂಭ್ರಮ. ಗುಜರಾತಿನ ಸೂರತಚ್ ಮೂಲದ ನಮಿತಾ ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಹತ್ತು ಹಲವು ಚಿತ್ರಗಳಲ್ಲಿ ಮೈಬಳುಕಿಸಿದ್ದಾರೆ.
2000ರಲ್ಲಿ ಮಿಸ್ ಇಂಡಿಯಾ 2000 ಸ್ಪರ್ಧೆಯಲ್ಲಿ ಭಾಗವಹಿಸಿದ ನಮಿತಾ ಗೆಲ್ಲಲಿಲ್ಲ. ತನ್ನ ಕೆಟ್ಟ ಇಂಗ್ಲೀಷಿನಿಂದಲೇ ನನಗೆ ಮಿಸ್ ಇಂಡಿಯಾ ಆಗಲಾಗಲಿಲ್ಲ ಎಂಬುದು ಆಕೆಯ ಸಮರ್ಥನೆ. ಅದೇನೇ ಇರಲಿ ಚಿತ್ರರಂಗಕ್ಕೆ 2002ರಲ್ಲಿ ತೆಲುಗು ಚಿತ್ರದ ಮೂಲಕ ನಮಿತಾ ಪ್ರವೇಶಿಸುವ ಸಂದರ್ಭ ತೆಳ್ಳಗೇ ಇದ್ದರೂ, ಖ್ಯಾತಿಗೆ ಬಂದದ್ದು ತನ್ನ ನಟನೆಗಿಂತಲೂ ಹೆಚ್ಚಾಗಿ ಧಡೂತಿ ದೇಹದಿಂದಲೇ ಎಂಬುದು ಗಮನಾರ್ಹ.
WD
ಕನ್ನಡಲ್ಲೂ ರವಿಚಂದ್ರನ್ ಅವರ ನೀಲಕಂಠ ಚಿತ್ರದ ಮೂಲಕ ಪ್ರವೇಶಿಸಿದ ನಮಿತಾ, ನಂತರ ದರ್ಶನ್ ಜೊತೆಗೆ ಇಂದ್ರ ಚಿತ್ರದಲ್ಲಿ ರಂಭೆಯಾದರು. ಇದೀಗ ಮತ್ತೆ ರವಿಚಂದ್ರನ್‌ಗೆ ಜೊತೆಯಾಗಿ ಹೂ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆಗಳ ಹೃದಯಕ್ಕೆ ಕೊಳ್ಳಿಯಿಡಲು ಮತ್ತೆ ಬಂದಿದ್ದಾರೆ. ಹೂ ಇದೇ ಮೇ 28ರಂದು ಬಿಡುಗಡೆ ಕಾಣಲಿದೆ.
ಇಂತಿಪ್ಪ ನಮಿತಾ ಸಾಕಷ್ಟು ಅಭಿಮಾನಿಗಳ ಸಮೂಹವನ್ನೇ ಹೊಂದಿದ್ದಾರೆ. ತನ್ನ ಪ್ರಸಿದ್ಧಿಗೆ ತನ್ನ ದೇಹವೇ ಕಾರಣ ಎಂಬ ಮರ್ಮ ಅರಿತಿದ್ದರೂ ಸಹ ನಮಿತಾ ಈಚೆಗೆ ಸಣ್ಣಗಾಗಲು ಶತ ಪ್ರಯತ್ನ ನಡೆಸುತ್ತಿದ್ದಾರಂತೆ. ಸದ್ಯ ಮದುವೆಯ ಯೋಚನೆಯಂತೂ ಇದ್ದಂತಿಲ್ಲ ಬಿಡಿ. ಅದೇನೇ ಇರಲಿ ಬಿಡಿ. ಲಕ್ಷಾಂತರ ಮಂದಿಯ ನಿದ್ದೆಗೆಡಿಸಿದ ನಮಿತಾಗೆ ಹ್ಯಾಪಿ ಬರ್ತ್‌ಡೇ ಹೇಳುವ ಸರದಿ ನಿಮ್ಮದಾಗಲಿ.