ಹೌದು, ರಾಜ್ಯದಲ್ಲಿ ಚಿತ್ರವೊಂದು ಸದ್ದಿಲ್ಲದೇ ಸೆಟ್ಟೇರಿ ಸುದ್ದಿ ಮಾಡಿದೆ. ತಡವಾಗಿ ಸಿಕ್ಕ ಮಾಹಿತಿ ಪ್ರಕಾರ ಸದ್ಯ ಕನ್ನಡದ ಚಿತ್ರ ರಸಿಕರಿಗೆ ಡಬ್ಬಲ್ ಧಮಾಕಾ ಸಿಗಲಿದೆ.
ಒನ್ ಗೆಟ್ ಒನ್ ಫ್ರಿ ಎಂಬ ಟ್ಯಾಗ್ ಲೈನ್ ಒಳಗೊಂಡ ಈ ಚಿತ್ರ ಶೀಘ್ರವೇ ತೆರೆಕಾಣಲಿದೆ. ಸರಳವಾದ ಪೂಜೆಯೊಂದಿಗೆ ಚಿತ್ರೀಕರಣ ಆರಂಭವಾಗಿದ್ದು, ರಾಜ್ಯದ ನಾನಾ ಭಾಗದಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಇದು ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ನಿರ್ಮಾಣವಾಗಲಿದೆಯಂತೆ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು ಹೊಸ ನಟರಾದ ವಿಜಯ್ ಹಾಗೂ ಶ್ರೀನಿವಾಸ್ ಜನರನ್ನು ನಗಿಸಲಿದ್ದಾರೆ. ಮುಂಬೈ ಬೆಡಗಿ ಕರೀನಾ... ಪೂರ್ತಿ ಕೇಳಿಸಿಕೊಳ್ಳಿ, ಕರೀನಾ ಶಾ ನಾಯಕಿ.
ತೆಲುಗಿನ ಖ್ಯಾತ ನಿರ್ದೇಶಕ ಇ.ವಿ.ವಿ. ಸತ್ಯನಾರಾಯಣ್ ಅವರ ಪುತ್ರ ಅಲ್ಲರಿ ನರೇಶ್ ಕಿರು ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಡಿಮೆ ಅವಧಿಗೆ ಬಂದರೂ ಸಾಕಷ್ಟು ಗಮನ ಸೆಳೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಉಳಿದ ಕಲಾವಿದರ ಆಯ್ಕೆ ಕಾರ್ಯ ಭರದಿಂದ ಸಾಗಿದೆ. ಭಗವತಿ ಫಿಲಂ ಬ್ಯಾನರ್ ಅಡಿ ಚಿತ್ರ ಹೊರ ಬರುತ್ತಿದೆ. ರೋಹಿಣಿ ಚಿತ್ರದ ನಿರ್ಮಾಪಕಿ, ಸತ್ಯ ವಾರಣಾಸಿ ನಿರ್ದೇಶಕರು. ಬೆಂಗಳೂರು, ಹೈದರಾಬಾದ್, ಕೊಡೈಕೆನಾಲ್ ಸೇರಿದಂತೆ ದೇಶನ ನಾನಾ ಕಡೆ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರ ಹೇಗಿರುತ್ತೋ, ಏನೋ...