ನಟಿ ಪ್ರಮಿಳಾ ಜೋಷಾಯ್ ನಿಮಗೆಲ್ಲಾ ಗೊತ್ತೇ ಇರಬೇಕು. ಅದೇ ನಮ್ಮ ಸುಂದರ ರಾಜ್ ಅವರ ಪತ್ನಿ ಹಾಗೂ ಜನಪ್ರಿಯ ನಟಿ ಯಾರಿಗೆ ತಿಳಿದಿಲ್ಲ. ಇವರು ಕನ್ನಡ ಚಿತ್ರರಂಗದಲ್ಲಿ ನೆಗೆಟಿವ್ ಪಾತ್ರ ಮೂಲಕವೇ ಜಾಸ್ತಿ ಜನಪ್ರಿಯರಾಗಿದ್ದಾರೆ. ಇದೀಗ ಅವರ ಕುಟುಂಬದ ಕುಡಿ, ಮನೆಮಗಳು ಮೇಘನಾ ಸಹ ಉತ್ತಮ ನಟಿ ಎಂಬುದನ್ನು ಕನ್ನಡದಲ್ಲಿ ಮಾತ್ರವಲ್ಲ, ತಮಿಳಿನಲ್ಲೂ ಸಾಬೀತು ಪಡಿಸಿದ್ದಾರೆ.
ಇವರನ್ನು ನಟಿಯಾಗಿಸುವಲ್ಲಿ ಪ್ರಮಿಳಾ ಅವರ ಪ್ರಯತ್ನ ಅಪಾರವಾಗಿದೆ. ಒಬ್ಬ ತಾಯಿ, ಸ್ನೇಹಿತೆ ಹಾಗೂ ಹಿತೈಶಿಯಾಗಿ ಮಗಳ ಬೆನ್ನ ಹಿಂದೆ ನಿಂತು ಸಲುಹಿದ್ದಾರೆ. ತಪ್ಪಿದಾಗ ತಿದ್ದಿ, ಉತ್ತಮ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದರಿಂದ ಇಂದು ಮೇಘನಾ ಒಬ್ಬ ಉತ್ತಮ ನಟಿಯಾಗಿ ಬೆಳೆಯುವ ಲಕ್ಷಣ ತೋರುತ್ತಿದ್ದಾರೆ. ವೈಯಕ್ತಿಕ ಹಾಗೂ ಚಿತ್ರ ಬದುಕು ಎರಡರಲ್ಲೂ ತಾಯಿ ಹೇಳಿದಂತೆ ಕೇಳುವ ಮಗಳು, ಚಿಕ್ಕಂದಿಜನಿಂದಲೂ ತಂದೆ- ತಾಯಿಯರ ಮಾತನ್ನು ಮೀರಿಲ್ಲವಂತೆ.
ಇನ್ನೊಂದು ಸಂಗತಿ ಅಂದರೆ ಮೇಘನಾಗೆ ಹೆಸರು ಹಿಡಿದು ಕರೆದರೆ ಆಗಲ್ವಂತೆ. ಸಿಟ್ಟೇ ಬಂದು ಬಿಡುತ್ತಂತೆ. ಚಿನ್ನಾ, ರನ್ನಾ ಅನ್ನಬೇಕಂತೆ. ಹೇಗಿದೆ ನೋಡಿ ಮಗಳ ವರಸೆ. ಒಬ್ಬ ಉತ್ತಮ ನಟಿಗಾಗಿ ಕನ್ನಡದಲ್ಲಿ ಶೋಧ ನಡೆದಿದ್ದು, ಆ ಸ್ಥಾನವನ್ನು ಮೇಘನಾ ತುಂಬಲಿ ಎಂಬುದು ಆಶಯ.