ಮೈಸೂರಿನಲ್ಲಿ ಕೆಲ ದಿನ ಚಿತ್ರೀಕರಣ ನಡೆಸಿದ ನಂತರ ಪೂಜಾ ಗಾಂಧಿ, ರಘು ಮುಖರ್ಜಿ ತಾರಾಗಣದ 'ನೀನಿಲ್ಲದೇ' ತಂಡ ನಗರಕ್ಕೆ ಆಗಮಿಸಿದೆ. ಚೆನ್ನು ಪಾಟಿ ನಾಗಮಲ್ಲೇಶ್ವರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಿವಗಣಪತಿ ನಿರ್ದೇಶಿಸುತ್ತಿದ್ದಾರೆ. ಚಿತ್ರ ಈಗಾಗಲೇ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಿ, ಬೆಂಗಳೂರಿಗೆ ಆಗಮಿಸಿದೆ. ಇಲ್ಲಿನ ಮಿನರ್ವ ಮಿಲ್ ಸಮೀಪ ಇದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು.
ಇಲ್ಲಿ ನೂರಾರು ಜನ ಸೇರಿದ್ದರು. ಕಾರಣ ಅಲ್ಲಿ ಯಾಸ್ಮಿನ್ ಖಾನ್ ಇದ್ದರು. ನಿಮಗೆಲ್ಲಾ ಗೊತ್ತೇ ಇರಬೇಕು, ಇವರಿದ್ದ ಮೇಲೆ ಅಲ್ಲಿ ಚಿತ್ರೀರಣ ಗೊಳ್ಳುತ್ತಿರುವುದು ಐಟಂ ಸಾಂಗ್ ಎಂಬುದು. ಹೌದು, ಚಿತ್ರದಲ್ಲಿ ಒಂದು ಹಾಡಿನ ಅಗತ್ಯ ಮನಗಂಡು ಐಟಂ ಸಾಂಗ್ ಸಹ ಅಳವಡಿಸಲಾಗಿದೆಯಂತೆ. ಮೂರು ದಿನ ಕಾಲ ನಡೆದ ಈ ಚಿತ್ರೀಕರಣವನ್ನು ಕೆಲವರು ಹೃದಯದಲ್ಲಿ, ಕ್ಯಾಮರಾದಲ್ಲಿ, ಮೊಬೈಲ್‌ಗಳಲ್ಲಿ ಸಂಗ್ರಹಿಸಿ ಶಾಶ್ವತವಾಗಿಸಿಕೊಂಡರು.
ಈ ಹಾಡಿನೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪೂಜಾ ಗಾಂಧಿ, ರಘು ಮುಖರ್ಜಿ ಮುಖ್ಯಪಾತ್ರವರ್ಗದಲ್ಲಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಗೆದ್ದೇ ಗೆಲ್ಲುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಎಲ್ಲಕ್ಕೂ ಒಳ್ಳೆಯದಾಗಲಿ ಎನ್ನೋಣ.