ಕನ್ನಡ ಚಿತ್ರರಂಗದ ಮೂವರು ದಿಗ್ಗಜರು ಜೊತೆಯಾಗಿರುವ ವೀರಪರಂಪರೆ ಈಗ ಐತಿಹಾಸಿಕ ನಗರ ಮೈಸೂರಿನತ್ತ ಹೆಜ್ಜೆ ಇರಿಸಿದೆ.
ಕಿತ್ತೂರ್ ರಾಣಿ ಚೆನ್ನಮ್ಮ ವಂಶಸ್ಥರಿಗೆ ಸೇರಿದ 150 ವರ್ಷಗಳಿಗೂ ಹಿಂದಿನ ಮನೆಯನ್ನು ವರದೇಗೌಡ(ಅಂಬರೀಷ್)ನ ಮನೆಯನ್ನಾಗಿಸಿ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಬಳಿಕ ಗುಲ್ಬರ್ಗಾದಲ್ಲಿಯೂ ಹಲವಾರು ಸಾಹಸ ಸನ್ನಿವೇಶಗಳನ್ನು ಸುದೀಪ್ ಅಭಿನಯದಲ್ಲಿ ಚಿತ್ರೀಕರಿಸಲಾಗಿದ್ದು, ಇದೇ 16ರಿಂದ ಐತಿಹಾಸಿಕ ನಗರ ಮೈಸೂರಿನ ಸುತ್ತಮುತ್ತ ಹಾಗೂ ಶ್ರೀರಂಗಪಟ್ಟಣದಲ್ಲಿ 30 ದಿನಗಳ ಚಿತ್ರೀಕರಣ ನಡೆಯಲಿದೆ.
ಅಂಬರೀಷ್, ಸುದೀಪ್ ಅಭಿನಯದಲ್ಲಿ ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ನಾಯಕಿಯಾಗಿ ಐಂದ್ರಿತಾ ರೇ ಅಭಿನಯಿಸುತ್ತಿದ್ದಾರೆ. ಅಂಬರೀಷ್‌ಗೆ ಪತ್ನಿಯಾಗಿ ವಿಜಯಲಕ್ಷ್ಮಿ ಸಿಂಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.