ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಾರೆವ್ಹಾ ಅನ್ನುತ್ತಾ ಮತ್ತೆ ಬಂದ ಗಾಳಿಪಟದ ಭಾವನಾ (Warewah | Bhavana Rao | Galipata | Vijayalaxmi Singh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಭಾವನಾ ಇದೀಗ ವಾರೆವ್ಹಾ ಎಂದು ಗಾಂಧಿನಗರಕ್ಕೆ ಹೆಜ್ಜೆ ಇರಿಸಿದ್ದಾರೆ. ಆಶ್ಚರ್ಯಪಡಬೇಕಾಗಿಲ್ಲ. ಇವರು ಬಂದಿರುವುದು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ವಾರೆವ್ಹಾ ಚಿತ್ರದ ಅಭಿನಯಕ್ಕಾಗಿ.

ಅದೇನೋ ಗೊತ್ತಿಲ್ಲ. ಪಾಪ. ಗಾಳಿಪಟ ಚಿತ್ರದ ಬಳಿಕ ಭಾವನಾ ರಾವ್ ಅವರಿಗೆ ಅದೃಷ್ಟ ಕೈ ಹಿಡಿಯಲೇ ಇಲ್ಲ. ಸಾಕಷ್ಟು ಅವಕಾಶಗಳು ಬಂದರೂ ಗಾಂಧಿನಗರದಲ್ಲಿ ಗುರುತಿಸುವಂತಹ ಪಾತ್ರ ಮಾಡಿಲ್ಲ ಎಂದು ಬೇಸರಿಸಿಕೊಂಡಿದ್ದರು. ಈಗಾಗಲೇ ಹಾಲಿಡೇಸ್, ಗಗನಚುಕ್ಕಿ, ಮಾಯದಂಥ ಮಳೆ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಆ ಚಿತ್ರಗಳ ಪೈಕಿ ಕೆಲವಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲವಾದರೆ ಇನ್ನೂ ಕೆಲವು ಅರ್ಧಕ್ಕೇ ನಿಂತಿವೆ. ಹಾಲಿಡೇಸ್ ಚಿತ್ರ ವರ್ಷದ ಹಿಂದೆಯೇ ಆರಂಭಗೊಂಡಿದ್ದರೂ, ಮತ್ತೆ ಯಾವ ಹಂತ ತಲುಪಿದೆ ಎಂಬುದೇ ತಿಳಿದಿಲ್ಲ. ಬಹಳಷ್ಟು ತಿಂಗಳುಗಳ ಹಿಂದೆಯೇ ಪ್ರಾರಂಭಗೊಂಡ ಗಗನಚುಕ್ಕಿ ಇದುವರೆಗೆ ಪೂರ್ಣಗೊಂಡಿಲ್ಲ. ಮಾಯಾದಂಥ ಮಳೆ ಅರ್ಧಕ್ಕೆ ನಿಂತಿದೆ.

ಅದೇನೇ ಇರಲಿ, ಭಾವನಾಗೆ ಇದೀಗ ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದಿದ್ದಾರೆ. ಮಳೆ ಬರಲಿ ಮಂಜು ಇರಲಿ ಚಿತ್ರ ನಿರ್ದೇಶಿಸಿ ಹಲವರಿಂದ ಬೆನ್ನು ತಟ್ಟಿಸಿಕೊಂಡಿದ್ದ ವಿಜಯಲಕ್ಷ್ಮಿ ಸಿಂಗ್ ತಮ್ಮ ವಾರೆ ವ್ಹಾ ಚಿತ್ರಕ್ಕೆ ಭಾವನಾರಿಗೆ ಆಫರ್ ನೀಡಿದ್ದಾರೆ. ಚಿತ್ರ ಅಕ್ಷಯ ತೃತೀಯ ದಿನದಂದು ಸೆಟ್ಟೇರುವ ನಿರೀಕ್ಷೆ ಇದೆ. ನಾಯಕನಾಗಿ ಕೋಮಲ್ ಅಭಿನಯಿಸುತ್ತಿದ್ದಾರೆ. ಚಿತ್ರದ ನಿರ್ಮಾಣ ಜೈಜಗದೀಶ್ ಅವರದ್ದು. ಚಿತ್ರದಲ್ಲಿ ಭಾವನಾ ಎಂಬಿಎ ಸ್ಟುಡೆಂಟ್ ಅಂತೆ. ಅಂತೂ ಇಂತೂ ಭಾವನಾಗೆ ಈಗ ಮತ್ತೆ ಅವಕಾಶ ಕೈಹಿಡಿದಿದೆ. ಅದೃಷ್ಟ ಹೇಗಿದೆಯೋ ಗೊತ್ತಿಲ್ಲ!

ಭಾವನಾ ರಾವ್ ಅವರ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಾರೆವ್ಹಾ, ಭಾವನಾ ರಾವ್, ಗಾಳಿಪಟ, ವಿಜಯಲಕ್ಷ್ಮಿ ಸಿಂಗ್