ನಿಮಗೆಲ್ಲಾ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ನಟನೆಯ 'ಮಳೆಯಲಿ ಜೊತೆಯಲಿ' ಚಿತ್ರದ ಗೊತ್ತು. ಕೆಲವರು ನೋಡಿದ್ದರು ಕೂಡ. ಅದು ಯಶ ಕಂಡಿತೋ ಇಲ್ಲವೋ ಗೊತ್ತಿಲ್ಲ. ಅದೇ ಮಾದರಿಯ ಹೆಸರು ಒಳಗೊಂಡ ಚಿತ್ರ ಗಾಂಧಿನಗರದಲ್ಲಿ ಸುದ್ದಿಯಾಗಿದೆ. ಚಿತ್ರದ ಹೆಸರು 'ಕನಸಲಿ ಜೊತೆಯಲಿ'.
ಅಂದಹಾಗೆ, ಚಿತ್ರದ ಚಿತ್ರೀಕರಣವೂ ಸದ್ದಿಲ್ಲದೆ ಮುಗಿದು ಹೋಗಿದೆಯಂತೆ. ಈಗೇನಿದ್ದರೂ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಇದರ ಧ್ವನಿ ಸುರುಳಿ ಮೊನ್ನೆ ಗಾಂಧಿನಗರದಲ್ಲಿ ಬಿಡುಗಡೆ ಆಯಿತು.
ಚಿತ್ರದಲ್ಲಿ ಐದು ಹಾಡುಗಳು ಇವೆಯಂತೆ. ಇದನ್ನು ಹೇಳಿದ್ದು ಚಿತ್ರದ ನಿರ್ದೇಶಕ ಪ್ರಶಾಂತ್ ಜಿ. ಮೈಸೂರು ಮಂಡ್ಯ ಹಾಗೂ ಚಿಕ್ಕಮಗಳೂರು ಸೇರಿದಂತೆ ನಾನಾ ಕಡೆ ಚಿತ್ರೀಕರಣ ನಡೆದಿದೆಯಂತೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿರುವ ಬಾಬಿ ಹಾಡುಗಳು ಉತ್ತಮವಾಗಿವೆ, ಆಲಿಸಿ ಅಂದರು. ಚಿತ್ರದ ನಾಯಕ ನಟ ಮುತ್ತುರಾಜ್! ನಿರ್ಮಾಪಕ ಕೆ. ತಿಮ್ಮರಾಜ್.
ಚಿತ್ರದ ಬಗ್ಗೆ ಸಿಕ್ಕ ಮಾಹಿತಿ ಇಷ್ಟೆ. ಇನ್ನೂ ಬೇಕು ಅಂದರೆ ಇದಕ್ಕೊಂದು ಟ್ಯಾಗ್ ಲೈನ್ ಇದೆ. 'ಮ್ಯಾನ್ ಪ್ರಪೋಸ್ಡ್ ಬಟ್, ಗಾಡ್ ಡಿಸ್ಪೋಸ್ಡ್'. ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಇದ್ದರು. ನಟ ಜಗ್ಗೇಶ್ ಅವರನ್ನು ಇಲ್ಲಿ ಸನ್ಮಾನಿಸಲಾಯಿತು.