ಗಣೇಶ್ ಅವರ ಉಲ್ಲಾಸ ಉತ್ಸಾಹದಿಂದ ಓಡುತ್ತಿದೆ. ಹೀಗಂತ ಹೇಳಿಕೊಂಡವರು ಸ್ವತಃ ಗಣೇಶ್ ಅವರೇ. ಹೌದು, ಈ ಮಾತು ಆಡುವಾಗ ಅವರ ಮುಖದಲ್ಲಿ ಉತ್ಸಾಹದ ಚಿಲುಮೆ ಚಿಮ್ಮುತ್ತಿತ್ತು. ಬಹು ದಿನದ ನಂತರ ಭಾರತ ಕ್ರಿಕೆಟ್ ತಂಡ ಗೆದ್ದಾಗ ಇರುವ ಸಂಭ್ರಮದಂತಿತ್ತು. ಅವರ ಮುಖ ಉತ್ಸಾಹದ ಚಿಲುಮೆ ಆಗಿತ್ತು. ಇದಕ್ಕೆಲ್ಲಾ ಉಲ್ಲಾಸ ಉತ್ಸಾಹವೇ ಕಾರಣ.
ಕಳೆದವಾರ ಬಿಡುಗಡೆ ಆದ ಚಿತ್ರ ಯಶಸ್ವಿಯಾಗಿದೆಯಂತೆ. ಇದೊಂದು ರಿಮೆಕ್ ಚಿತ್ರ ಆದರೂ ಜನ ಮೆಚ್ಚುಗೆಯಿಂದ ಸ್ವೀಕರಿಸಿದ್ದಾರೆ. ಕಾರಣ ಇದಕ್ಕಿಲ್ಲಿ, ಸ್ಥಳೀಯತೆಯ ಸ್ಪರ್ಶ ನೀಡಲಾಗಿದೆ ಎನ್ನುತ್ತಾರೆ ಗಣೇಶ್.
ಈ ಚಿತ್ರ ಆರು ತಿಂಗಳ ಹಿಂದೆ ಬಿಡುಗಡೆ ಆಗಬೇಕಿತ್ತಂತೆ. ಆದರೆ ಸಕಾಲಕ್ಕೆ ಚಿತ್ರ ಪೂರ್ಣಗೊಳ್ಳದಿರುವುದು ಮತ್ತು ಸ್ವಂತ ಬ್ಯಾನರ್ ಅಡಿ ಗಣೇಶ್ ಬಿಡುಗಡೆ ಮಾಡಿದ ಮಳೆಯಲಿ ಜೊತೆಯಲಿ ಬಂದಿದ್ದರಿಂದ ಕೊಂಚ ವಿಳಂಬ ಆಯಿತಂತೆ. ಚಿತ್ರ ತೆರೆಗೆ ಬರುವುದು ತಡವಾಗಿದ್ದಕ್ಕೆ ಜನ ಏನಂದುಕೊಳ್ಳುತ್ತಾರೋ ಅನ್ನುವ ಅಂಜಿಕೆ ಗಣೇಶ್‌ಗೆ ಇತ್ತಂತೆ. ಆದರೆ ಚಿತ್ರದ ಯಶಸ್ಸು ಇದನ್ನು ಮರೆಮಾಚಿದೆ.
ಚಿತ್ರ ಬಿಡುಗಡೆ ಆದ ಎಲ್ಲಾ ಕೇಂದ್ರದಲ್ಲೂ ಉತ್ತಮವಾಗಿ ಓಡುತ್ತಿದೆಯಂತೆ. ಇದರೊಂದಿಗೆ ನಿರ್ದೇಶಕ ತ್ಯಾಗರಾಜು ಸಹ ನಿಟ್ಟುಸಿರು ಬಿಟ್ಟಿದ್ದಾರೆ. ಅದು ಎಲ್ಲರಿಗೂ ಕೇಳಿ, ಇಡೀ ಗಾಂಧಿನಗರವೇ ನಗೆಗಡಲಲ್ಲಿ ಮುಳುಗಿದೆಯಂತೆ. ಕಾಪಾಡು ಬಾ ಗಣೇಶಾ ಅನ್ನುತ್ತಿದ್ದಾರೆ ಅಂತ ಸುದ್ದಿ.